ವರದಿ:ವಾಲ್ಟರ್ ಮೊಂತೇರೊ
ಬೆಳ್ಮಣ್ಣು: ಜೇಸಿಐ ಬೆಳ್ಮಣ್ಣು, ಜೂನಿಯರ್ ಜೇಸಿ ವಿಭಾಗ ಮತ್ತು ಜೇಸಿರೇಟ್ ವಿಭಾಗದ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮೂಡುಬೆಳ್ಳೆ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತೀಯ ಜೇಸಿಐನ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ಸಂದೀಪ್ ಕುಮಾರ್‍ರವರು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನನ್ನ ಮನೆ, ವಿದ್ಯಾಲಯ ಮತ್ತು ಸಮಾಜದಲ್ಲಿ ಆರೋಗ್ಯಕರ ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ಸರ್ವರ ಮನವೊಲಿಸಿ ಪ್ರೇರಣೆ ನೀಡುತ್ತೇನೆ. ನನಗೆ, ನನ್ನ ಕುಟುಂಬಕ್ಕೆ ಹಾಗೂ ನನ್ನ ದೇಶಕ್ಕೆ ಗೌರವ ತರುವ ತತ್ವಗಳನ್ನು ಆಧರಿಸುತ್ತೇನೆ. ಸುಳ್ಳು ವಂಚನೆ ಹಾಗೂ ಕಳ್ಳತನಗಳಲ್ಲಿ ಭಾಗಿಯಾಗುವ ಯಾವುದೇ ಆಮಿಷಗಳಿಂದ ದೂರವಿರುತ್ತೇನೆ. ಪ್ರಾಮಾಣಿಕ, ವೈಯಕ್ತಿಕ ಐಕ್ಯತೆ, ಇತರರಿಗೆ ಗೌರವ ನೀಡುವ ಜವಾಬ್ದಾರಿಯನ್ನು ಜೀವನದುದ್ದಕ್ಕೂ ಪಾಲಿಸುತ್ತೇನೆಂದು ವಚನ ನೀಡುತ್ತೇನೆ ಎನ್ನುವ ಭಾವೈಕ್ಯತಾ ಪ್ರಮಾಣವಚನವನ್ನು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಬೋಧಿಸಲಾಯಿತು.
ಸ್ಥಳೀಯ ವಿದ್ಯಾಸಂಸ್ಥೆಗಳಾದ ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ಮಣ್ಣು ಸಂತ ಜೋಸೆಫರ ಫ್ರೌಢಶಾಲೆ, ಬೆಳ್ಮಣ್ಣು ನಂದಳಿಕೆ ಶ್ರೀ ಲಕ್ಷ್ಮೀಜನಾರ್ಧನ ಇಂಟರ್‍ನ್ಯಾಶನಲ್ ಸ್ಕೂಲ್, ಸರಕಾರಿ ಫ್ರೌಢಶಾಲೆ ಪಲಿಮಾರು, ಕಲ್ಯಾ ಸರಕಾರಿ ಫ್ರೌಢಶಾಲೆಯಲ್ಲಿ ಏಕಕಾಲದಲ್ಲಿ 3800ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂಧರ್ಭದಲ್ಲಿ ಮೂಡುಬೆಳ್ಳೆ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮತ್ತು ರೋಟರಿ ಜಿಲ್ಲಾ ಪೂರ್ವ ಸಹಾಯಕ ಗರ್ವನರ್ ಜಿನ್‍ರಾಜ್ ಸಿ. ಸಾಲ್ಯಾನ್, ಬೆಳ್ಮಣ್ಣು ಜೇಸಿಐ ಅಧ್ಯಕ್ಷರಾದ ಶ್ವೇತಾ ಸುಭಾಸ್, ವಲಯಾಧಿಕಾರಿ ಸುಭಾಸ್ ಕುಮಾರ್, ಪೂರ್ವಾಧ್ಯಕ್ಷರಾದ ಗಣಪತಿ ಆಚಾರ್ಯ, ಜಯಂತಿ ಶೆಟ್ಟಿ, ಸತೀಶ್ ಕೋಟ್ಯಾನ್, ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ರವಿರಾಜ್ ಶೆಟ್ಟಿ, ಪ್ರದೀಪ್ ಆಚಾರ್ಯ, ಸದಸ್ಯರಾದ ಡೆನ್ಜಿಲ್ ಫೆರ್ನಾಂಡಿಸ್, ಕೃಷ್ಣ ಪವಾರ್, ಮಾಯಾ ಚರಣ್, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ನ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಜೇಸಿರೇಟ್ ಅಧ್ಯಕ್ಷರಾದ ಪ್ರತಿಭಾ ರಾವ್, ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷರಾದ ದಿಕ್ಷೀತ್ ದೇವಾಡಿಗ, ಶಾಲಾ ಮುಖ್ಯಶಿಕ್ಷಕರು, ಸಹಶಿಕ್ಷಕರು, ಅಧ್ಯಾಪಕ ವೃಂದದವರು ಉಪಸ್ಥಿತಿತರಿದ್ದರು.