ವರದಿ: ವಾಲ್ಟರ್ ಮೊಂತೇರೊ
ಜೇಸಿಐ ಬೆಳ್ಮಣ್ಣು : ಬೆಳ್ಮಣ್ಣು ಎಸ್.ಕೆ.ಸಾಲ್ಯಾನ್‍ರವರಿಗೆ ಉದ್ಯಮ ರತ್ನ ಪ್ರಶಸ್ತಿ ಪ್ರದಾನ
ಬೆಳ್ಮಣ್ಣು ಜೇಸಿಐನ ನೇತೃತ್ವದಲ್ಲಿ ದಿ ಶೈನ್ ಜೇಸಿ ಸಪ್ತಾಹ ಸಮಾರಂಭದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಬೆಳ್ಮಣ್ಣು ಶ್ರೀಕೃಷ್ಣ ಸಭಾಂಗಣದಲ್ಲಿ ಜರಗಿತು. ಬೆಳ್ಮಣ್ಣು ಶ್ರೀಕೃಷ್ಣ ಸಮೂಹ ಸಂಸ್ಥೆಯ ಮಾಲಕರಾದ ಎಸ್.ಕೆ ಸಾಲ್ಯಾನ್‍ರವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಮಣ್ಣು ಜೇಸಿಐನ ಅಧ್ಯಕ್ಷೆ ಶ್ವೇತಾ ಸುಭಾಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ನಂದಳಿಕೆ ಜೀಸಸ್ ವುಡ್ ಇಂಡಸ್ಟ್ರೀಸ್ ಮಾಲಕ ಗ್ರೆಗರಿ ಮಿನೇಜಸ್, ಜೇಸಿ ಪೂರ್ವವಲಯಾಧಿಕಾರಿ ಪ್ರಮಲ್ ಕುಮಾರ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಡಾಯ್ಜಿವಲ್ರ್ಡ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ, ಕಾಂಜರಕಟ್ಟೆ ಉದ್ಯಮಿ ದಿನೇಶ್ ಕಾಮತ್, ವಲಯಾಧಿಕಾರಿ ಸುಭಾಸ್ ಕುಮಾರ್, ನಿಕಟ ಪೂರ್ವಾಧ್ಯಕ್ಷ ಪ್ರದೀಪ್ ಆಚಾರ್ಯ, ಜೇಸಿ ಸಪ್ತಾಹದ ನಿರ್ದೇಶಕ ಸುಧೀರ್ ಕಾಮತ್, ಜೂನಿಯರ್ ಜೇಸಿ ಅಧ್ಯಕ್ಷ ದೀಕ್ಷಿತ್ ಕುಮಾರ್ ಮೊದಲಾದವರಿದ್ದರು. ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್ ಅಭಿನಂದನಾ ಭಾಷಣ ಮಾಡಿದರು. ಕಾರ್ಯದರ್ಶಿ ಸರಿತಾ ದಿನೇಶ್ ಸುವರ್ಣ ವಂದಿಸಿದರು.