ಜೇಸಿಐ ಬೆಳ್ಮಣ್ಣು : ಪುಲ್ವಾಮಾ ಹುತಾತ್ಮ ವೀರ ಯೋಧರಿಗೆ ದೀಪ ನಮನ
ಜೇಸಿಐ ಬೆಳ್ಮಣ್ಣು, ಜೂನಿಯರ್ ಜೇಸಿ ವಿಭಾಗ ಮತ್ತು ಜೇಸಿರೇಟ್ ವಿಭಾಗದ ವತಿಯಿಂದ ಅಬ್ಬನಡ್ಕದ ಸಂದೀಪ್ ವಿ. ಪೂಜಾರಿಯವರ ಮನೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪುಲ್ವಾಮಾ ಹುತಾತ್ಮ ವೀರ ಯೋಧರಿಗೆ ನುಡಿ ನಮನದೊಂದಿಗೆ ದೀಪ ನಮನ ಸಲ್ಲಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದ ಪುಲ್ಮಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಉಗ್ರರು ನಡೆಸಿದ ದಾಳಿಯಿಂದ ಹುತಾತ್ಮರಾದ 40ಕ್ಕೂ ಅಧಿಕ ವೀರ ಯೋಧರಿಗೆ ನುಡಿ ನಮನದೊಂದಿಗೆ ದೀಪ ನಮನ ಸಲ್ಲಿಸಲಾಯಿತು. ಹುತಾತ್ಮರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಹುತಾತ್ಮ ಸೈನಿಕರಿಗೆ ಮೊಂಬತ್ತಿ ಬೆಳಗಿಸಿ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಜೇಸಿಐನ ಪೂರ್ವಾಧ್ಯಕ್ಷರಾದ ದೀಪಕ್ ಕಾಮತ್ರವರು ಹಾಡಿದ ವಂದೇ ಮಾತರಂ ಹಾಡಿಗೆ ಎಲ್ಲರೂ ಧ್ವನಿಗೂಡಿಸಿದರು.
ಸೈನಿಕರ ಕುಟುಂಬಗಳ ಮೇಲೆ ಸಹಾನುಭೂತಿ, ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಗಳು ದೇಶದ ಜನತೆಯಿಂದಾಗಬೇಕು ಎಂದು ಭಾರತೀಯ ಜೇಸಿಐನ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ರವರು ಮಾತಾನಾಡಿದರು.
ಈ ಸಂಧರ್ಭದಲ್ಲಿ ಬೆಳ್ಮಣ್ಣು ಜೇಸಿಐನ ಅಧ್ಯಕ್ಷರಾದ ಶ್ವೇತಾ ಸುಭಾಸ್, ವಲಯಾ ಉಪಾಧ್ಯಕ್ಷರಾದ ದೇವೇಂದ್ರ ಎಸ್. ನಾಯಕ್, ವಲಯಾಧಿಕಾರಿ ಸುಭಾಸ್ ಕುಮಾರ್, ಸರ್ವಜ್ಞ ತಂತ್ರಿ, ಸಂಗೀತಾ ಪ್ರಭು, ನಿಕಟ ಪೂರ್ವಾಧ್ಯಕ್ಷರಾದ ಪ್ರದೀಪ್ ಆಚಾರ್ಯ, ಕಾರ್ಯದರ್ಶಿ ಸರಿತಾ ದಿನೇಶ್ ಸುವರ್ಣ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಜೇಸಿರೇಟ್ ಅಧ್ಯಕ್ಷೆ ಪ್ರತಿಭಾ ರಾವ್, ಯುವಜೇಸಿ ಅಧ್ಯಕ್ಷ ದೀಕ್ಷಿತ್ ಕುಮಾರ್, ಬೆಳ್ಮಣ್ಣು ಜೇಸಿಐನ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಮೊದಲಾದವರಿದ್ದರು.