ಜೆಸಿಐ ಸಪ್ತಾಹ ಯುವ ಕಲೋತ್ಸವ:ಮೂಡ್ಲಕಟ್ಟೆ ಎಮ್ ಐ ಟಿ ಕಾಲೇಜು ಪ್ರಥಮ

JANANUDI.COM NETWORK

ಜೆಸಿಐ ಸಪ್ತಾಹ ಯುವ ಕಲೋತ್ಸವ:ಮೂಡ್ಲಕಟ್ಟೆ ಎಮ್ ಐ ಟಿ ಕಾಲೇಜು ಪ್ರಥಮ

ಕುಂದಾಪುರದಲ್ಲಿ ಜರುಗಿದ ಜೆಸಿಐ ಸಪ್ತಾಹದ ಯುವ ಕಲೋತ್ಸವ ಸಾಂಸ್ಕøತಿಕ ಹಬ್ಬದ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜಿನ ತಂಡ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.ಕಾಲೇಜಿನ 32 ವಿದ್ಯಾರ್ಥಿಗಳ ತಂಡವು ಸಾಂಸ್ಕøತಿಕ ಹಬ್ಬದಲ್ಲಿ ಭಾಗವಹಿಸಿ,ವಿವಿಧ ರೀತಿಯ ನೃತ್ಯಗಳು,ಮೈಮ್,ಉತ್ತಮ ನಿರೂಪಣೆ ಹಾಗೂ ನಿಮ್ಮ ಆಯ್ಕೆ ವಿಭಾಗದಲ್ಲಿ ಉತ್ತಮ ನಿರ್ವಹಣೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಪ್ರಶಸ್ತಿಯನ್ನು ಬಾಚಿಕೊಂಡಿತು.ವೈಯಕ್ತಿಕ ವಿಭಾಗದಲ್ಲಿ ನಡೆದ ಮೆಹಂದಿ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಕೂಡ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ತೃತೀಯ ಮತ್ತು ದ್ವೀತಿಯ ಸ್ಥಾನವನ್ನು ಪಡೆದರು.ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್‍ಮನ್ ಶ್ರೀ.ಸಿದ್ದಾರ್ಥ್ ಜೆ ಶೆಟ್ಟಿ,ಪ್ರಾಂಶುಪಾಲರಾದ ಕಾಟಯ್ಯ ಜಿ.ಎಸ್,ಅಕಾಡೆಮಿಕ್ ಡೈರೆಕ್ಟರ್ ಡಾ.ಚಂದ್ರರಾವ್ ಮದನೆ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದಿಸಿದರು.