ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ

ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ


ಕುಂದಾಪುರ, ಜೂ.3: ‘ವಿದ್ಯಾರ್ಥಿಗಳು ತಾವು ಎನಾಗ ಬೇಕೆಂಬ ಸ್ಪಷ್ಟ ಗುರಿ ಹೊಂದಿರ ಬೇಕು, ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ, ಅಸಾಧ್ಯ ಮತ್ತು ಅನುತ್ತೀರ್ಣ ಎಂಬ ಪದಗಳು ನಿಮ್ಮ ಶಬ್ದ ಕೋಶದಲ್ಲಿ ಇರಬಾರದು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಸಂದೇಶ ನೀಡಿದರು.
ಅವರು ಕುಂದಾಪುರದ ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾರಂಭೋತ್ಸವದ ಅಧ್ಯಕ್ಷತೆಯನ್ನು ವಹಿಸಿಕೊಂಡು ದೀಪ ಬೆಳಗಿಸಿ ಮಾತಾನಾಡಿದರು ‘ಜೀವನದಲ್ಲಿ ಪ್ರಯತ್ನ ಪಡುತ್ತಲೇ ಇರಬೇಕು, ಥೊಮಸ್ ಆಲ್ವಾ ಎಡಿಸನ್ ಹಲವಾರು ಭಾರಿ ಪ್ರಯೋಗಗಳಲ್ಲಿ ಸಫಲನಾಗದಿದ್ದರು, ಛಲದಿಂದ ಪ್ರಯತ್ನ ಪಡುತ್ತಾ ಕೊನೆಗೆ ಯಶಸ್ಸನ್ನು ಪಡೆದು ಜಗತ್ತಿಗೆ ಬೆಳಕು ನೀಡಿದ, ಅವರಂತೆ ನಿಮ್ಮ ಪ್ರಯತ್ನ ಸಾಗಲಿ’ ಎನ್ನುತ್ತಾ ಶುಭ ಅವರು ಕೋರಿದರು

ಮುಖ್ಯ ಅತಿಥಿಗಳಾದ ವೈದ್ಯೆ ರೆನ್ನಿ ವಿಲ್ಸನ್ ‘ಪ್ರಪಂಚದಲ್ಲಿ ಯಶಸ್ಸು ಪಡೆದವರ ಬಗ್ಗೆ ತಿಳಿದುಕೊಂಡರೆ, ಅವರುಗಳು ಕಷ್ಟ ಪಟ್ಟು ಪರಿಶ್ರಮ ಪಟ್ಟು ಯಶಸ್ಸು ಗಳಿಸಿದ್ದಾರೆ, ನೀವು ಎನಾಗಬೇಕೆಂದು ಮೊದಲು ಕನಸು ಕಟ್ಟಿರಿ, ಅದನ್ನು ಸಾಕಾರಗೊಳಿಸಲು ಕಠಿಣ ಪರಿಶ್ರಮ ಪಡಿ. ಆವಾಗ ನಿಮಗೆ ಯಶಸ್ಸು ದೊರಕುತದೆ’ ಎಂದು ನುಡಿದರು. ಕಾಲೇಜಿನ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ‘ಹೊಸದಾಗಿ ಸೆರ್ಪಡೆಗೊಂಡ ವಿದ್ಯಾರ್ಥಿಗಳು, ಕಾಲೇಜಿನ ಶಿಸ್ತನ್ನು ರೂಡಿಸಿಕೊಳ್ಳಬೇಕು, ಹಾಗೆ ಶಿಕ್ಷಡ ಜೊತೆ ಉತ್ತಮ ಸಂಸ್ಕ್ರತಿಯನ್ನು ಗಳಿಸಿಕೊಳ್ಳಬೇಕು’ ಎಂದು ಶುಭ ಹಾರೈಸಿದರು. ಧರ್ಮಾಧ್ಯಕ್ಷರು ಕಾಲೇಜಿನ ಮ್ಯಾಗಝಿನ್ ‘ಬ್ಲೊಸಮ್’ ನ್ನು ಉದ್ಘಾಟನೆ ಮಾಡಿದರು. ದ್ವೀತಿಯ ಪಿ.ಯು.ಸಿ. ಪ್ರಥಮ ಪಿ.ಯು.ಸಿ. ಮತ್ತು ಎಸ್.ಎಸ್..ಎಲ್.ಸಿ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದವರಿಗೆ ಗೌರವಿಸಲಾಯಿತು. ವರ್ಗಾವಣೆಕೊಂಡ ರೋಜರಿ ಚರ್ಚಿನ ಧರ್ಮಗುರು ವಂ|ರೋಯ್ ಲೋಬೊ ಇವರಿಗೆ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
.
ಪ್ರಾಂಶುಪಾಲ ವಂ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಕಾಲೇಜಿನ ಬಗ್ಗೆ, ಕಾಲೇಜಿನ ನೀತಿ ನಿಯಮಗಳ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಸಹಾಯಕ ಧರ್ಮಗುರು ವಂ.ವಿಜಯ್ ಡಿಸೋಜಾ, ವಿದ್ಯಾರ್ಥಿಗಳ ಪೋಷಕರ ಪ್ರತಿನಿಧಿಯಾಗಿ ವೇಲಾ ಬ್ರಗಾಂಜಾ, ದೇವದಾಸ್ ವಿ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಸ್ವಾಗತಿಸಿದರು. ಪ್ರಾಧ್ಯಾಪಕಿಯರಾದ ಅಸ್ಮಿತಾ ಕೊರೆಯಾ, ಸ್ವಾತಿ, ನಿಶಾ ಸುವಾರಿಸ್ ಮತ್ತು ವಿದ್ಯಾರ್ಥಿನಿ ಮೇಲಿಟಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಮೇಲ್ರಿಯಾ ಕ್ರಾಸ್ತಾ ಧನ್ಯವಾದಗಳನ್ನು ಅರ್ಪಿಸಿದರು.