ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಜಿಲ್ಲೆಯಲ್ಲಿ ಯಾವುದೇ ಕರೋನಾ ಪ್ರಕರಣ ಕಂಡು ಬಂದಿಲ್ಲ ಜನರು ಆತಂಕ ಪಡುವ ಅಗತ್ಯವಿಲ್ಲ – ಸಿ ಸತ್ಯಭಾಮ.
ಕೋಲಾರ: ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ರೀತಿಯ ಕರೋನ ಪ್ರಕರಣ ಕಂಡು ಬಂದಿಲ್ಲ ಹಾಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕರೋನ ವೈರಸ್ ಕುರಿತ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಇಲ್ಲ ಈಗಾಗಲೇ 14 ಪ್ರಕರಣಗಳನ್ನು ಹೋಂ ಕ್ವರಂಟೈನ್ ಮಾಡಲಾಗಿದೆ ಇವರೆಲ್ಲರೂ ಜಿಲ್ಲೆಯವರೇ ಆಗಿದ್ದು ಹೊರದೇಶಗಳಿಗೆ ಹೋಗಿ ಬಂದವರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಸಿಗೆಗಳ ಐಸ್ಯುಲೇಷನ್ ವಾರ್ಡ್ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದರು.
ಕೆ.ಪಿ.ಎಂ.ಎ ಕಾಯ್ದೆ ಪ್ರಕಾರ ಕ್ಲಿನಿಕ್ ಸೇರಿದಂತೆ 350 ಆಸ್ಪತ್ರೆಗಳು ಇವೆ. ಕರೋನ ವೈರಸ್ ಲಕ್ಷಣಗಳು ಕಂಡುಬಂದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಅಥವಾ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕೆ.ಜಿ.ಎಫ್ ನಲ್ಲಿ ನಡೆಯುತ್ತಿರುವ ಜಾತ್ರೆಯನ್ನು ನಿμÉೀಧ ಮಾಡಲಾಗಿದೆ. ಎಲ್ಲಾ ಜಾತ್ರೆ ಉತ್ಸವ ಸಮಾರಂಭಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿಜಯ್ ಕುಮಾರ್ ಅವರು ಮಾತನಾಡಿ, ಆ್ಯಪಲ್ ಕಂಪೆನಿಯ ಪ್ರಾರಂಭಕ್ಕೆಂದು ವಿದೇಶದಿಂದ ಜಿಲ್ಲೆಗೆ 25 ಜನ ಬಂದಿದ್ದರು ಇವರೆಲ್ಲ ತಪಾಸಣೆಯನ್ನು ನಡೆಸಲಾಗಿದ್ದು ಒಬ್ಬರಿಗೆ ಜ್ವರ ಇತ್ತು. ಪರೀಕ್ಷೆ ಕಳುಹಿಸಲಾಗಿತ್ತು. ಅವರಿಗೆ ನೆಗೆಟಿವ್ ಬಂದಿದೆ ಆದ್ದರಿಂದ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ ಎಂದು ತಿಳಿಸಿದರು.