ಜಿಲ್ಲಾದ್ಯಂತ ಮತ್ತೆ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆ,ಜೂಜಾಟ, ಹಾಗೂ ಮರಳುಗಾರಿಕೆ ಸಂಪೂರ್ಣ ನಿಷೇಧ ಮಾಡಬೇಕು: ರೈತ ಸಂಘ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

ಜಿಲ್ಲಾದ್ಯಂತ ಮತ್ತೆ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆ,ಜೂಜಾಟ, ಹಾಗೂ ಮರಳುಗಾರಿಕೆ ಸಂಪೂರ್ಣ ನಿಷೇಧ ಮಾಡಬೇಕು: ರೈತ ಸಂಘ

 

 

 

ಕೋಲಾರ,ಪೆ22: ಜಿಲ್ಲಾದ್ಯಂತ ಮತ್ತೆ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆ,ಜೂಜಾಟ, ಹಾಗೂ ಮರಳುಗಾರಿಕೆ ಸಂಪೂರ್ಣ ನಿಷೇಧ ಮಾಡಬೇಕು. ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ದಿನಾಂಕ: 29-02-2020 ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ ಆಕ್ರಮ ಗಣಿಗಾರಿಕೆ ಮತ್ತು ಮರಳುಗಾರಿಕೆ ಅತಿ ಹೆಚ್ಚಾಗಿ ಮಾಲೂರು ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಅದರ ಜೊತೆಗೆ ತಮಿಳುನಾಡಿನ ತೀರ್ಥಂನಿಂದ ಪ್ರತಿನಿತ್ಯ 15 ಲಾರಿಗಳು ಮಾಲೂರು ಮೂಖಾಂತರ ಬೆಂಗಳೂರು ಸೇರುತ್ತಿವೆ. ಇದಕ್ಕೆ ಅಲ್ಲಿನ ಪೋಲಿಸ್ ಪೇದೆಗಳೇ ಮುಖ್ಯ ಕಾರಣರಾಗಿದ್ದಾರೆ. ಜೊತೆಗೆ ಅಕ್ರಮ ಮರಳುಗಾರಿಕೆ ಜಿಲ್ಲಾದ್ಯಂತ ಮಾಲೂರು ತಾಲ್ಲೂಕಿನ ಮಾಸ್ತಿ, ಲಕ್ಕೂರು, ಕೋಲಾರ ಕೆರೆ-ಕುಂಟೆಗಳಲ್ಲಿ ಅಕ್ರಮ ಫಿಲ್ಟರ್ ದಂಧೆ ಹೆಚ್ಚಾಗಿದ್ದು, ಜಿಲ್ಲಾದ್ಯಾಂತ ಟ್ಯ್ರಾಕ್ಟರ್ ಮುಖಾಂತರ ದಾಸ್ತಾನು ಮಾಡಿ ಲಾರಿಗಳಿಗೆ ತುಂಬಿ ಪ್ರತಿ ರಾತ್ರಿ 35-40ಲಾರಿಗಳು ಬೆಂಗಳೂರಿಗೆ ಸರಬರಾಜಾಗುತ್ತಿದ್ದರೂ ಕ್ರಮ ಕೈಗೊಳ್ಳದೆ, ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಜಿಲ್ಲಾದ್ಯಾಂತ ಆಕ್ರಮ ಜೂಜಾಟಕ್ಕೆ ಲಕ್ಷಾಂತರ ಬಡ ಕುಟುಂಬಗಳು ಬಲಿಯಾಗುತ್ತಿವೆ ಈ ಜೂಜಾಟ ಅತಿ ಹೆಚ್ಚಾಗಿ ಗಡಿಭಾಗಗಳ ರಾಯಲ್ಪಾಡು, ಮಾಸ್ತಿ ಲಕ್ಕೂರು ಹಾಗೂ ಸ್ಥಳಿಯ ಕೋಲಾರ ನಾಯಕರಹಳ್ಳಿ ಮದನಹಳ್ಳಿ ಕ್ರಾಸ್ ಅರಣ್ಯ ತೋಪುಗಳಲ್ಲಿ ನಡೆಯುತ್ತಿದ್ದು, ಈ ದಂದೆಗೆ ಕೆಲವು ಪೋಲಿಸ್ ಪೇದೆಗಳ ನೆರಳಿನಲ್ಲಿ ನಡೆಯುತ್ತಿವೆ.ಆಕ್ರಮ ಗ್ರಾನೆಟ್ ದಂದೆ ಹೆಚ್ಚಾಗಿ ಮಾಸ್ತಿ ಲಕ್ಕೂರು ನರಸಾಪುರ ವ್ಯಾಪ್ತಿಯಲ್ಲಿ ರಾಜರೋಷವಾಗಿ ನಡೆಯುತ್ತಿವೆ ಈ ದಂದೆಗಳಿಗೆ ಕಡಿವಾಣ ಹಾಕಿ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಮಾನ್ಯ ವರಿಷ್ಠಾಧಿಕಾರಿಗಳನ್ನು ಗಮನ ಸೆಳೆದು ಬಡ ಕುಟುಂಬಗಳನ್ನು ಹಾಗೂ ಪ್ರಕೃತಿ ಸಂಪತ್ತು ಉಳಿಸಲು ಈ ಹೋರಾಟ ಮಾಡಲಾಗುವುದೆಂದರು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ವಕ್ಕಲೇರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ್,ಫಾರೂಕ್‍ಪಾಷಾ, ವಡ್ಡಹಳ್ಳಿ ಮಂಜುನಾಥ್,ಯಲುವಳ್ಳಿ ಪ್ರಭಾಕರ್, ಆನಂದ್, ಸುಧಾಕರ್, ವಿನೋದ್, ಜಗದೀಶ್,ಸಾಗರ್, ರಂಜಿತ್, ಮೇಲಾಗಣಿ ದೇವರಾಜ್, ಸುಪ್ರೀಂ ಚಲ, ಪುತ್ತೇರಿ ರಾಜು, ಹೊಸಹಳ್ಳಿ ವೆಂಕಟೇಶ್, ಕೆ.ಜಿ.ಎಫ್ À್ಷ ಕ್ಯಾಸಂಬಳ್ಳಿ ಪ್ರತಾಪ್, ಐತಂಡಹಳ್ಳಿ ಅಂಬರೀಶ್, ರವಿ, ಮತ್ತಿತರಿದ್ದರು.