ಜನವರಿ 30 ಗಾಂಧೀಜಿಯ ಹುತಾತ್ಮ ದಿನವನ್ನು ದೇಶ ಮರೆಯಬಾರದು: ಎಸ್‍ಡಿಪಿಐ


Report & photo: Elyas Muhammad Thumbe 

ಜನವರಿ 30 ಗಾಂಧೀಜಿಯ ಹುತಾತ್ಮ ದಿನವನ್ನು ದೇಶ ಮರೆಯಬಾರದು: ಎಸ್‍ಡಿಪಿಐ


ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು 1948, ಜನವರಿ 30ರಂದು ಗುಂಡಿಕ್ಕಿ ಹತ್ಯೆಗೈಯ್ಯಲಾಯಿತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಮುಂಚೂಣಿಯಲ್ಲಿದ್ದರು. ಅವರ ಸರ್ವ ಧರ್ಮ ಸಮಭಾವ, ಅಹಿಂಸಾವಾದ, ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತತ ಸಿದ್ಧಾಂತದ ಬದ್ಧತೆ ಮೇಲೆ ದೇಶ ಕಟ್ಟುವ ಕನಸನ್ನು ಕಂಡಿದ್ದರು. ಆದರೆ ಸಂಘಪರಿವಾರದ ಕೋಮುವಾದಿ ನಾಥೂರಾಮ್ ಗೋಡ್ಸೆ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದಿದ್ದನು. ಇದು ದೇಶದ ಪ್ರಥಮ ಭಯೋತ್ಪಾದನಾ ಕೃತ್ಯವಾಗಿದೆ. ಈ ಬಲಿದಾನದಿಂದ ಗಾಂಧೀಜಿಯ ಸಿದ್ಧಾಂತಕ್ಕೆ ಯಾವುದೇ ತೊಡಕಾಗಬಾರದು. ಕೋಮುವಾದಿ ಶಕ್ತಿಗಳ ವಿಭಜನವಾದಿ, ಮಾನವ ವಿರೋಧಿ ಮನಸ್ಥಿತಿ ಸೋಲಬೇಕು. ಗಾಂಧೀಜಿಯ ಬಲಿದಾನ ವ್ಯರ್ಥವಾಗಬಾರದು. ದೇಶದ ಎಲ್ಲ ನಾಗರಿಕರು ಮತ್ತು ಹೊಸ ತಲೆಮಾರು ಕೋಮುಶಕ್ತಿಗಳ ವಿರುದ್ಧ ಧ್ವನಿ ಎತ್ತಲು ಕೈಜೋಡಿಸಬೇಕು. ಈಗ ಮೆರೆಯುತ್ತಿರುವ ಗೋಡ್ಸೆವಾದಿಗಳ ಎಲ್ಲ ಕುತಂತ್ರಗಳನ್ನು ಸೋಲಿಸಬೇಕು. ಜನವರಿ 30 ಗಾಂಧಿ ಬಲಿದಾನ ದಿನವನ್ನು ದೇಶದ ಜನರು ಎಂದೆಂದಿಗೂ ಮರೆಯಬಾರದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.