ಕೋಲಾರ : ಜಗತ್ತನ್ನು ಆವರಿಸಿರುವ ಕರೋನಾವನ್ನು ನಿರ್ಮೂಲನೆ ಮಾಡಲು ಕರೋನಾ ವಾರಿಯರ್ ಸೇವೆ ಅತ್ಯಗತ್ಯವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ತಿಳಿಸಿದರು . ಇಂದು ವಾರ್ತಾ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕರೋನಾ ವಾರಿಯರ್ಸ್ರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು . ಕೊವಿಡ್ -19 ಸಂದರ್ಭದಲ್ಲಿ ವಾರ್ತಾ ಇಲಾಖೆ , ಕಾರ್ಮಿಕರ ಇಲಾಖೆ , ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಕರೋನಾ ವಾರಿಯರ್ ಕೈಜೊಡಿಸಿ ಕೆಲಸ ಮಾಡುವುದರಿಂದ ಜಿಲ್ಲೆಯಲ್ಲಿ ಕರೋನಾ ನಿಯಂತ್ರಿಸಲು ಸಾಧ್ಯವಾಯಿತು ಎಂದು ತಿಳಿಸಿದರು . ಕರೋನಾ ವಾರಿಯಗಳ ಸೇವೆ ಮುಂದಿನ ದಿನಗಳಲ್ಲಿಯೂ ನೀಡಬೇಕು . ಡೆಂಗ್ಯೂ ಮತ್ತು ಚಿಕ್ಕನ್‌ಗನ್ಯಾ ಕಾಯಿಲೆಯ ಮರಣದ ಶೇಕಡಾವಾರು ಪ್ರಮಾಣಕ್ಕಿಂತ ಕರೊನಾ ಮರಣ ಪ್ರಮಾಣವು ಕಡಿಮೆ ಇದೆ . ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು , ಸಾಮಾಜಿಕ ಅಂತರ ಕಾಪಾಡುವುದರಿಂದ ರೋಗ ಬರದಂತೆ ನೋಡಿಕೊಳ್ಳಬಹುದು . ತಮ್ಮ ತಮ್ಮ ಗ್ರಾಮಗಳಲ್ಲಿ ಅರಿವು ಮೂಡಿಸಿ ರೋಗ ಲಕ್ಷಣ ಇರುವವರು ಕರೋನಾ ಪರೀಕ್ಷೆ ಮಾಡಿಸಿಕೊಳ್ಳವಂತೆ ಅರಿವು ಮೂಡಿಸಬೇಕು ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ಸದ್ಭಾವನ ದಿನದ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು . ವಿಜಯ್ ಕುಮಾರ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ . ಮಾತನಾಡಿ , ಜಿಲ್ಲೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದ್ದರಿಂದ 48 ದಿನಗಳ ಕಾಲ ಜಿಲ್ಲೆಯು ಹಸಿರು ವಲಯದಲ್ಲಿ ಇತ್ತು . ಲಾಕ್‌ಡೌನ್ ತೆರವುಗೊಳಿಸಿದ ನಂತರ ಹೊರ ರಾಜ್ಯದಿಂದ ಬಂದವರಿಂದ ಜಿಲ್ಲೆಯಲ್ಲಿ ಕರೋನ ಪ್ರಕರಣಗಳು ಕಂಡುಬಂದವು . ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದು ತಿಳಿಸಿದರು . ಜ್ವರ , ಕೆಮ್ಮು , ನೆಗಡಿ ಮುಂತಾದ ಯಾವುದೇ ರೀತಿಯ ಕೊರೋನಾ ಲಕ್ಷಣಗಳು ಕಂಡುಬಂದರೆ ತಕ್ಷಣ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಪರೀಕ್ಷೆಯನ್ನು ಮಾಡಿಸಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೇ ಕರೋನಾ ರೋಗದಿಂದ ಗುಣಮುಖರಾಗಬಹುದು . ಜಿಲ್ಲಾಡಳಿತವು ಕರೋನಾ ತಡೆಗಟ್ಟಲು ಸಕಲ ರೀತಿಯಲ್ಲಿ ಸಿದ್ಧವಾಗಿದೆ ಎಂದು ತಿಳಿಸಿದರು . ಕೊಳಗೇರಿಯ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿದೆ . ಆದ್ದರಿಂದ ಕೊಳಗೇರಿಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಮೂಡಿಸಿ ಅವರನ್ನು ಕರೋನಾ ಪರೀಕ್ಷೆಯನ್ನು ಮಾಡಿಸಿಕೊಳ್ಳವಂತೆ ಪ್ರೋತ್ಸಾಹ ನೀಡಬೇಕು . ಉಳಿದ ತಾಲ್ಲೂಕುಗಳಲ್ಲಿ ಕರೋನಾ ಪ್ರಕರಣಗಳು ಕಡಿಮೆ ಇದೆ . ಆರೋಗ್ಯ ದೃಷ್ಟಿಯಿಂದ ಜನರಲ್ಲಿ ಕರೋನಾ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು . ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಗೋಪಾಲ ಕೃಷ್ಣಗೌಡ ಅವರು ಮಾತನಾಡಿ , ಜಿಲ್ಲೆಯಲ್ಲಿ ಕರೋನಾ ನಿಯಂತ್ರಿಸಲು ಕರೋನಾ ವಾರಿಯಗಳು ಸಾಕಷ್ಟು ಶ್ರಮವಹಿಸಿದ್ದಾರೆ . ದೇಶವು ಕರೋನಾ ಮುಕ್ತವಾಗಬೇಕಾದರೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕರೋನಾ ವಾರಿಯರ್‌ಗಳಾಗಿ ಕೆಲಸ ಮಾಡಬೇಕು . ರಡ್ಕಾಸ್ ಸಂಸ್ಥೆಯು ಈಗಾಗಲೇ ಮಾಲೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರತಿ ಗ್ರಾಮಕ್ಕೆ 4 ಜನರನು ,ಕರೋನಾ ವಾರಿಯಗಳಾಗಿ ಹಾಗೂ ವಾರ್ಡ್‌ಗಳಲ್ಲಿ 5 ಜನ ಕರೋನಾ ವಾರಿಯರ್ ರಾಗಿ ನೇಮಿಸಿದ್ದೇವೆ . ಇದೆ ರೀತಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಕರೋನಾ ವಾರಿಯಗಳನ್ನು ನೇಮಿಸಲಾಗುವುದು ಎಂದು ತಿಳಿಸಿದರು . ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇದೆ . ಆದ್ದರಿಂದ ಜಿಲ್ಲೆಯ ಆರೋಗ್ಯವಂತ ಯುವಕರು ರಕ್ತದಾನ ಮಾಡಬೇಕು . ಕರೊನಾ ಮುಕ್ತವಾಗುವರೆಗೂ ಕರೋನಾ ವಾರಿಯಗಳು ತಮ್ಮ ಸೇವೆಯನ್ನು ಹೀಗೆ ಮುಂದುವರಿಸಿ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಗಣೇಶ್ , ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎ.ಪಿ ಸೋಮಶೇಖರ್ ಉಪಾದ್ಯಕ್ಷಾದ ಶ್ರೀನಿವಾಸ್ , ಕರೋನಾ ವಾರಿಯರ್ ಸೇರಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು .