ಘನತ್ಯಾಜ್ಯ ವಿಂಗಡಿಸಿ ಪುನರ್ಬಳಕೆ ಮಾಡುವುದನ್ನು ಕಲಿಯಿರಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಘನತ್ಯಾಜ್ಯ ವಿಂಗಡಿಸಿ ಪುನರ್ಬಳಕೆ ಮಾಡುವುದನ್ನು ಕಲಿಯಿರಿ 

 

ಕೋಲಾರ : ನಾವು ದಿನ ನಿತ್ಯ ಬಳಕೆ ಮಾಡಿ ಬೇಡವಾದ ವಸ್ತುಗಳ ವಿಂಗಡಿಸಿ ಘನತ್ಯಾಜ್ಯ ವಸ್ತುಗಳನ್ನು ಇ-ವೇಸ್ಟ್ ಅನ್ನು ಪುನರ್ಬಳಕೆಯಾಗುವ ಕೇಂದ್ರಗಳಿಗೆ ಮಾರಾಟ ಮಾಡಬಹುದು ಎಂದು ತೇಜಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಬಿ.ಕೆ. ರೇಣುಕಾ ತಿಳಿಸಿದರು.
ಬುಧವಾರ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ, ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವರದ್ಧಿ ಸಂಸ್ಥೆ ಜಕ್ಕೂರು ಬೆಂಗಳೂರು ಹಾಗೂ ತೇಜಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಂಗಾರಪೇಟೆ ವತಿಯಿಂದ ಕ್ಷೇತ್ರ ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಮತ್ತು ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಒಂದು ದಿನದ ನವೀಕರಿಸಬಹುದಾದ ಇಂಧನ, ಘನ ತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೋಯ್ಲು ವಿಷಯದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ನಾಗೇಂದ್ರ ಕುಮಾರ್ ಮಳೆ ನೀರು ಕೋಯ್ಲು, ಮಳೆ ನೀರು ಸಂರಕ್ಷಣೆ, ಮನೆ ಮಳೆ ಚಾವಣಿಗಳ ಮೇಲೆ ಗ್ರೀನ್ ಹೌಸ್ ಮಳೆ ಬೀಳುವ ನೀರನ್ನು ಶೇಕರಿಸಿ ಆ ನೀರನ್ನು ದಿನ ನಿತ್ಯದ ಕಾರ್ಯಗಳಿಗೆ ಹಾಗೂ ದಿನನಿತ್ಯ ಪುನರ್ಬಳಕೆಗೆ ಬಳಸುವುದರಿಂದ ನೀರಿನ ಅಭಾವವನ್ನು ನಿಯಂತ್ರಿಸಬಹುದು. ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿಸಲು ಪ್ರೊಜೆಕ್ಟರ್ ಮೂಲಕ ಚಿತ್ರಗಳು, ವೀಡಿಯೋ ಮೂಲಕ ತೋರಿಸಿ ನೀರು, ಸೌರಶಕ್ತಿ, ಘನತ್ಯಾಜ್ಯ ಮುಂತಾದವುಗಳ ಬಗ್ಗೆ ಅರಿವು ಮೂಡಿಸಲಾಯಿತು.
ಮಂಜುಳ ಬೀಮ್ ರಾವ್ ಮಾತನಾಡಿ ಸೌರ ಶಕ್ತಿಯ ಬಗ್ಗೆ ಪ್ರಕೃತಿಯ ನಾಶದ ಬಗ್ಗೆ ಗ್ರಾಮಸ್ಥರಿಗೆ ಹೆಚ್ಚಿನ ಅರಿವು ನೀಡಿದರು. ಸೌರ ಶಕ್ತಿಯಿಂದ ಆಗುವ ಲಾಭಗಳು, ವಿದ್ಯುತ್ ಬಿಲ್ ಕಡಿತಗೊಳಿಸುವುದಲ್ಲದೆ, ಹೊಸ ಚಿಗುರು ಹಳೆ ಬೇರಿಗೆ ಬೆಳೆ ನೀಬೇಕು ಎಂದು ತಿಳಿಸಿದರು.

ಶಿಲ್ಪರವರು ಮಾತನಾಡಿ ಪ್ಲಾಸ್ಟಿಕ್ ಬಗ್ಗೆ ತಿಳಿಸುತ್ತಾ ಪ್ಲಾಸ್ಟಿಕ್ ಬಾಟಲ್‍ನಿಂದ ವಿವಿದ ಕಾಯಿಲೆಗಳಿಂದ ಬಳಲುವುದನ್ನು ತಪ್ಪಿಸಬೇಕಾಗಿ. ಪ್ರಾಣಿಗಳನ್ನು ಪ್ಲಾಸ್ಟಿಕ್ ತಿನ್ನುವುದರಿಂದ ಪಾರು ಮಾಡಬೇಕು. ಪ್ಲಾಸ್ಟಿಕ್ ವಸ್ತುಗಳಿಗೆ ಬಳಸುವುದು ಕಾಣಬಹುದು ಅದಷ್ಟು ಪ್ಲಾಸ್ಟಿಕ್ ಅನ್ನು ಉಪಯೋಗಿಸದ ಪೇಪರ್‍ಗಳಿಂದ ತಯಾರಾದ ಬ್ಯಾಗ್‍ಗಳನ್ನು ಬಳಸುವುದರಿಂದ ಪ್ರಕೃತಿ ವಿಕೋಪಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಹಿರಿಯರು, ಸ್ವ-ಸಹಾಯ ಸಂಘದ ಮಹಿಳೆಯರು, ಯುವಕರು, ಯುವತಿಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುನಿವೆಂಕಟಪ್ಪ, ಮುನಿವೆಂಕಟರಾಮಪ್ಪ, ಎಂ.ರಾಮಪ್ಪ, ದೇವರಾಜ್ ಉಪಸ್ಥಿತರಿದ್ದರು.

(ಬಿ.ಕೆ. ರೇಣುಕಾ) ಮೊ :9449182594