JANANUDI.COM NETWORK
ಗ್ರೇಸಿ ಟೀಚರ್ ಹೆಸರಲ್ಲಿ ಎಸ್.ವಿ.ಎಸ್. ಶಾಲಾ ಕೊಠಡಿ ಕಟ್ಟಲು ಹಾಗೂ ಅವರ ಸವಿ ಸ೦ಸ್ಮರಣ ನಿಧಿಗೆ ಅವರ ಅಭಿಮಾನಿ ಶಿಷ್ಯರಿಂದ ರೂಪಾಯಿ 20 ಲಕ್ಷ ದೇಣಿಗೆ
ಗಂಗೊಳ್ಳಿ, ಡಿ.28: ಇತ್ತೀಚೆಗೆ ನಿಧನ ಹೊಂದಿದ ಗ್ರೇಸಿ ಟೀಚರ್ ಎಂದೇ ಅವರ ಶಿಷ್ಯರಿಂದ ಕರೆಯಲ್ಪಟ್ಟು ಖ್ಯಾತರಾದ ಗ್ರೇಸಿ ಡಿಆಲ್ಮೇಡಾ ಇವರ ನೆಚ್ಚಿನ ಶಿಷ್ಯ ಅಭಿಮಾನಿಗಳು ಅವರು ಕಲಿಸಿದ ಸರಸ್ವತಿ ಹಿ.ಪ್ರಾ. ಶಾಲೆಯಲ್ಲಿ ಅವರ ಹೆಸರಿನಲ್ಲಿ ಒಂದು ಕೊಠಡಿ ಕಟ್ಟಲು ರೂಪಾಯಿ 10 ಲಕ್ಷ ಹಾಗೂ ಅವರ ಸವಿ ನೆನಪಿನ ಸಂಸ್ಮರಣ ನಿಧಿಗಾಗಿ ಅವರ ಅಭಿಮಾನಿ ಶಿಷ್ಯರಿಂದ ರೂಪಾಯಿ 10 ಲಕ್ಷ ಒಟ್ಟಿಗೆ ರೂಪಾಯಿ 20 ಲಕ್ಷ ದೇಣಿಗೆಯ ಠೋಕನ್ ಎಡ್ವಾನ್ಸ್, ಗ್ರೇಸಿ ಟೀಚರ್ ಅಭಿಮಾನಿ ಶಿಷ್ಯರು ಕೊಡಲ್ಪಟ್ಟ ಚೆಕ್ಕನ್ನು ಗ್ರೇಸಿ ಟಿಚರ್ ಪುತ್ರ ರೋಜರಿ ಕ್ರೆ.ಕೋ.ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಇವರು ಶಾಲಾ ಶತಮಾನೋತ್ತರ ಬೆಳ್ಳಿ ಹಬ್ಬದ ಉದ್ಘಾಟನ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವದ ಸಂದರ್ಭದಂದು ಸಾಂಕೇತಿಕವಾಗಿ ಜಿ. ಎಸ್ ವಿ.ಎಸ್ ಅಸೋಶಿಯೆಷನ್ ಗಂಗೊಳ್ಳಿ ಇದರ ಅಧ್ಯಕ್ಷರಾದ ಡಾ|ಯು. ಕಾಶಿನಾಥ್ ಪಿ. ಪೈ ಇವರಿಗೆ ಹಸ್ತಾತಂರಿಸಿದರು.
ಗ್ರೇಸಿ ಟೀಚರ್ ಅವರ ಶಿಷ್ಯರಿಗೆ ಅಚ್ಚು ಮೆಚ್ಚಿನವರಾಗಿದ್ದರು. ಎಲ್ಲರನ್ನು ಸಮಾನವಾಗಿ ಕಂಡು ಶಿಕ್ಷಣ ದಾನ ಮಾಡಿದ ಗ್ರೇಸಿ ಟೀಚರ್ ಸರಸ್ವತಿ ಹಿ.ಪ್ರಾ. ಶಾಲೆಯಲ್ಲಿ ನಿರಂತರವಾಗಿ 42 ವರ್ಷ ಸೇವೆ ಸಲ್ಲಿಸಿ, ಸುಮಾರು 2000 ಕ್ಕೂ ಮಿಕ್ಕಿ ಶಿಷ್ಯ ವ್ರಂದವನ್ನು ಸಂಪಾದಿಸಿ ಕೊಂಡಿದ್ದರು. ಇಂದು ಅವರ ಶಿಷ್ಯರು ದೇಶ ವಿದೇಶಗಳಲ್ಲಿ ನೆಲೆಸಿ ಖ್ಯಾತ ನಾಮರಾಗಿದ್ದಾರೆ. ಇವರಲ್ಲಿ ಕೆಲವರು ತಮ್ಮ ಟೀಚರ್ ಇವರ ಸ್ಮರ್ಣಾರ್ಥ ಎನಾದರೂ ಮಾಡ ಬೇಕೆಂಬ ಹಂಬಲ ವ್ಯಕ್ತ ಪಡಿಸಿದರಿಂದ ಶಾಲಾ ಆಡಳಿತ ಮಂಡಳಿ ಇಂತಹ ಅವಕಾಶ ಮಾಡಿಕೊಟ್ಟಿದ್ದರು. ಗ್ರೇಸಿ ಟೀಚರ್ ವ್ಯಕ್ತಿತ್ವ ನೋಡಿದರೆ, ಇಂತಹ ದೇಣಿಗೆಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ದೊರಕುವ ಸಾಧ್ಯತೆ ಇದೆಯೆಂದು ಅವರ ಶಿಷ್ಯರು ಅಂದುಕೊಳ್ಳುತ್ತಾರೆ.
ಈ ಸಂದರ್ಬದಲ್ಲಿ ಸಮಾರಂಭದ ಉದ್ಘಾಟಕರರಾದ ಶಾಲಾ ಹಳೆ ವಿದ್ಯಾರ್ಥಿ, ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ ಇದರ ಧರ್ಮದರ್ಶಿಗಳಾದ ಶ್ರೀ ದೇವರಾಯ್ ಸೇರುಗಾರ್, ಭಾರತೀಯ ವೈದ್ಯ ಸಂಘ, ಕುಂದಾಪುರ ಶಾಖೆಯ ಅಧ್ಯಕ್ಷರು ಚಿನ್ಮಯಿ ಅಸ್ಪತ್ರೆಯ ಖ್ಯಾತ ಪ್ರಸೂತಿ ತಜ್ಞೆ ಶ್ರೀದೇವಿ ಕಟ್ಟೆ, ಕಮರ್ಶಿಯಲ್ ಅಂಕೌಂಟೆಂಡ್ ಟ್ಯಾಕ್ಸ್ ಪ್ರಾಕ್ಟಿಷಿನಿಯರ್ ನಾಗ ಪ್ರಸಾದ್ ಪೈ. ಎಮ್.ಬಿ., ಜಿ.ಎಸ್.ವಿ.ಎಸ್ ಅಸೋಶಿಯೆಷನ್ ಗಂಗೊಳ್ಳಿ ಇದರ ಕಾರ್ಯದರ್ಶಿ ಎಚ್ ಗಣೇಶ್ ಕಾಮತ್, ಜಿ. ಎಸ್ ವಿ.ಎಸ್ ಅಸೋಶಿಯೆಷನ್ ಗಂಗೊಳ್ಳಿ ಇವರಿಂದ ನಡೆಸಲ್ಪಟ್ಟ ಎಲ್ಲಾ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಎಮ್.ಸದಾಶಿವ್ ನಾಯ್ಕ್ , ಶಾಲಾ ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ರೂಪಶ್ರೀ ಆಚಾರ್ಯ, ಶಾಲಾ ಮುಖ್ಯೋಪಾಧಯರಾದ ಜಿ.ವಿಶ್ವನಾಥ್ ಭಟ್, ಶಾಲಾ ಅಡಳಿತ ಮಂಡಳಿ ಸದಸ್ಯ ರಾಮನಾಥ್ ನಾಯಕ್ ಮುಂತಾದ ಗಣ್ಯರುವೇದಿಕೆಯಲ್ಲಿ ಉಪಸ್ಥಿತರಿದ್ದರು.