ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಗ್ರಾಮೀಣ ಪ್ರದೇಶಗಳನ್ನು ಮರೆತಿರುವ ಜನಪ್ರತಿನಿದಿಗಳನ್ನು ಹುಡುಕಿಕೊಟ್ಟು ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು- ರೈತಸಂಘ
ಕೋಲಾರ: ಮಾ.30: ನಗರಕ್ಕೆ ಸೀಮಿತವಾಗಿ ಗ್ರಾಮೀಣ ಪ್ರದೇಶಗಳನ್ನು ಮರೆತಿರುವ ಜನಪ್ರತಿನಿದಿಗಳನ್ನು ಹುಡುಕಿಕೊಟ್ಟು ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ರೈತಸಂಘದ ಕಾರ್ಯಕರ್ತರು ಜಿಲ್ಲಾಡಳಿತವನ್ನು ಪತ್ರಿಕಾ ಹೇಳಿಕೆಯ ಮುಖಾಂತರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ವಿಶ್ವಾದ್ಯಾಂತ ಕೋರೋನಾ ವೈರಸ್ ರೋಗಕ್ಕಿಂತ ಹಸಿವಿನ ರೋಗಕ್ಕೆ ತುತ್ತಾಗುವ ಲಕ್ಷಣಗಳು ಕಾಣಿಸುತ್ತಿವೆ. ಮತ್ತೊಂದೆಡೆ ಚುನಾವಣೆ ಸಮಯದಲ್ಲಿ ಕೈಕಾಲು ಮುಗಿದು ಮತ ಪಡೆದ ಶಾಸಕರು ಗ್ರಾಮೀಣ ಪ್ರದೇಶವನ್ನು ಸಂಪೂರ್ಣವಾಗಿ ಮರೆತು ನಗರ ಪ್ರದೇಶಕ್ಕೆ ಸೀಮಿತವಾಗಿದ್ದಾರೆ. ಈ ಕೋರೋನಾ ದೇಶದ ಲಾಕ್ಡೌನ್ ಅವಕಾಶವನ್ನೇ ಉಪಯೋಗಿಸಿಕೊಳ್ಳುತ್ತಿರುವ ಅಂಗಡಿ ಮಾಲೀಕರ ಕೃಷಿ ಕೆಲಸಕ್ಕೆ ಬೇಕಾಗುವ ವಸ್ತುಗಳಾ ಗೊಬ್ಬರ, ಔಷದಿ, ಟೈನು, ದಾರಗಳನ್ನು ದುಪ್ಪಟ್ಟು ಮಾರುವ ಜೊತೆಗೆ ಜನರ ದಿನನಿತ್ಯ ವಸ್ತುಗಳಾದ ಅಕ್ಕಿ, ಬೇಳೆ, ಎಣ್ಣೆ ಮತ್ತಿತರ ಪದಾರ್ಥಗಳನ್ನು ದುಪ್ಪಟ ಬೆಲೆಗೆ ಮಾರಾಟ ಮಾಡುತ್ತಿದ್ದು, ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹ ಕೇವಲ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಮಾತ್ರ ಇದರ ವಿರುದ್ದ ದ್ವನಿ ಮಾಡುತ್ತಿದ್ದಾರೆ. ಜನಪ್ರತಿನಿದಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಎಲ್ಲಾ ಕ್ಷೇತ್ರಗಳ ಗ್ರಾಮೀಣ ಪ್ರದೇಶಗಳನ್ನು ಮರೆತಿರುವ ಇವರನ್ನು ಹುಡುಕಿಕೊಟ್ಟು, ದುಪ್ಪಟ್ಟು ಬೆಲೆ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ರೈತರು ಬೆಳೆದಂತಹ ಬೆಳೆಗಳಿಗೆ ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆ ಎತ್ತಿಕೊಂಡು ಹೋದರೆ 5-10 ರೂ ಕೇಳುತ್ತಾರೆ. ಆದರೆ ಗ್ರಾಹಕರಿಗೆ ದುಪ್ಪಟು ಬೆಲೆಗೆ ಮಾರಾಟಮಾಡುತ್ತಾರೆ. ಅದೇ ರೀತಿ ಗ್ರಾಮೀಣ ಪ್ರದೇಶದ ಜನತೆಗೆ ಮಾಸ್ಕ್, ಸ್ನಾನಿಟೈಜರ್, ಮತ್ತು ಅಗತ್ಯವಸ್ತುಗಳು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜನರು ಜನಪ್ರತಿನಿದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ಅಸಮಾದಾನ ವ್ಯಕ್ತಪಡಿಸಿದರು.
ಈ ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಮಂಗಸಂದ್ರ ನಾಗೇಶ್, ಸುಪ್ರೀಂಚಲ, ವಿನೋದ್, ಜಗದೀಶ್, ಅಶ್ವತಪ್ಪ, ಐತಾಂಡಹಳ್ಳಿ ಮಂಜುನಾಥ್, ಮುಂತಾದವರಿದ್ದರು.