ಗೋ ಬ್ಯಾಕ್ ಶೋಬಾ ಅಭಿಯಾನ ಯಶಸ್ವಿಗೊಳಿಸೋಣ.- ಪ್ರಮೋದ್ ಮಧ್ವರಾಜ್
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸಿಆರ್‌ಝಡ್ ಸಮಸ್ಯೆ, ಕಸ್ತೂರಿ ರಂಗನ್ ವರದಿ ಸಮಸ್ಯೆ, ಡೀಮ್ಡ್ ಫಾರೆಸ್ಟ್ ಸಂತ್ರಸ್ತರ ಸಮಸ್ಯೆ, ಕಾಫಿ ಅಡಿಕೆ ಬೆಳೆಗಾರರ ಸಮಸ್ಯೆ ಮುಂತಾದ ಜ್ವಲಂತ ಸಮಸ್ಯೆಗಳಿದ್ದಾಗ್ಯೂ ಸಂಸದೆ ಶೋಬಾ ಕರಂದ್ಲಾಜೆಯವರು ಕಳೆದ ಐದು ವರ್ಷಗಳಲ್ಲಿ ಜನಸಾಮಾನ್ಯರ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ಒಂದೇ ಒಂದು ದಿನವೂ ಪ್ರಯತ್ನಿಸಿಲ್ಲ. ಕೇವಲ ಪ್ರಚೋದನಾಕಾರಿ ಬಾಷಣ ಮಾಡುವ ಮೂಲಕ ಈ ನೆಲದ ಸೌಹಾರ್ಧತೆಯನ್ನು ಆಕೆ ಕೆಡಿಸಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಆಕೆಯ ವಿರುದ್ಧ ಬಿಜೆಪಿಗರೆ ಗೋಬ್ಯಾಕ್ ಶೋಬಾ ಅಭಿಯಾನ ಆರಂಬಿಸಿದ್ದರು. ಶತಾಯಗತಾಯ ಆಕೆಗೆ ಸೀಟು ಕೊಡಲೇಬಾರದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಿಗೆ ಪ್ರದಾನಿ ಮೋದಿಯವರಿಗೆ ಟ್ವೀಟ್ ಅಭಿಯಾನ ಕೂಡಾ ಮಾಡಿದ್ದರು. ಆದರೂ ಆಕೆ ಟಿಕೇಟು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಆಕೆಗೆ ತಾನು ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ ಎಂದು ಅರಿವಾಗಿದೆ. ಆ ಕಾರಣಕ್ಕಾಗಿ ಆಕೆ ನನಗೆ ಓಟು ಕೊಡಬೇಡಿ, ಮೋದಿಗೆ ಓಟು ಕೊಡಿ ಎನ್ನ ತೊಡಗಿದ್ದಾರೆ. ಈ ಕ್ಷೇತ್ರದ ಜನ ವಾರಣಾಸಿಯಲ್ಲಿ ಸ್ಪರ್ಧೆ ಮಾಡಿರುವ ಮೋದಿಯವರ ಹತ್ತಿರ ಹೋಗಿ ಹೇಳಲು ಸಾಧ್ಯವೇ? ಸಾಧ್ಯವಿಲ್ಲ! ನಮಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಹಾಗಾಗಿ ನಾವು ಈ ಬಾರಿ ಶೋಬಾ ಕರಂದ್ಲಾಜೆಯವರನ್ನು ಸೋಲಿಸಬೇಕಾಗಿದೆ. ಸೋಲಿಸುವ ಮೂಲಕ ಅವರ ಪಕ್ಷದವರೆ ಆರಂಬಿಸಿದ ಗೋಬ್ಯಾಕ್ ಶೋಬಾ ಚಳವಳಿಯನ್ನು ಯಶಸ್ವಿ ಗೊಳಿಸಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಆಭ್ಯರ್ಥಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಇಂದು ಕುಂದಾಪುರದ ಆರೆನ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಜಿಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಮಮತಾ ಗಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ, ಕೆಪಿಸಿಸಿ ಐ.ಟಿ ಸೆಲ್ ರಾಜ್ಯ ಉಪಾಧ್ಯಕ್ಷ ಸನ್ಮತ್ ಹೆಗ್ಡೆ, ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ ವಂದಿಸಿದರು.