ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಗುಜರಾತ್‌ನ ಸ್ಟ್ಯಾಚ್ಯು ಆಫ್ ಯೂನಿಟಿ ಸಮೀಪ ನ.17 ರಂದು ರಾಜ್ಯ ಮಟ್ಟದ ಆರ್ಯ ವೈಶ್ಯ ಯುವಕರ ಏಕತಾ ಸಮಾವೇಶ

ಶ್ರೀನಿವಾಸಪುರ: ಗುಜರಾತ್‌ನ ಸ್ಟ್ಯಾಚ್ಯು ಆಫ್ ಯೂನಿಟಿ ಸಮೀಪ ನ.17 ರಂದು ರಾಜ್ಯ ಮಟ್ಟದ ಆರ್ಯ ವೈಶ್ಯ ಯುವಕರ ಏಕತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆರ್ಯ ವೈಶ್ಯ ಯುವಜನ ಮಹಾಸಭಾದ ಅಧ್ಯಕ್ಷ ಶಬರೀಶ್ ತಿಳಿಸಿದ್ದಾರೆ.
ಸುಗಟೂರು ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏಕತಾ ಸಮಾವೇಶದಲ್ಲಿ ರಾಜ್ಯದ 330 ವಾಸವಿ ಯುವಜನ ಸಂಘಗಳಿಂದ 850 ಯುವಕರು ಭಾಗವಹಿಸಲಿದ್ದಾರೆ. ಸಮಾವೇಶದ ದಿನ 850 ಅಡಿ ಉದ್ದದ ರಾಷ್ಟ್ರ ಧ್ವಜವನ್ನು ಏಕತಾ ಮೂರ್ತಿ ವರೆಗೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಸಮಾವೇಶದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ ಯುವ ಜನರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಆರ್ಯ ವೈಶ್ಯ ಯುವ ಸಮುದಾಯದ ಪಾತ್ರ ಕುರಿತು ಚರ್ಚಿಸಲಾಗುವುದು. ಸಮಾವೇಶದ ಬಳಿಕ ಸುತ್ತಮುತ್ತಲಿನ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಹಿಂದಿರುಗಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಆರ್ಯ ವೈಶ್ಯ ಯುವಕ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ಇದ್ದರು.