ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ನಿಧಿಯಿಂದ ೨೫೦ ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ ವಿನಿಯೋಗಿಸಿ, ಶರತ್ತು ಭೇದಭಾವವಿಲ್ಲದೆ ಶುದ್ದ ಹ್ರದಯದಿಂದ ಎಲ್ಲರನ್ನೂ ಪ್ರೀತಿಸಿ – ಶ್ರೀ ವಿನಾಯಕಾನಂದಜೀ

JANANUDI NETWORK

 

ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ನಿಧಿಯಿಂದ ೨೫೦ ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ ವಿನಿಯೋಗಿಸಿ, ಶರತ್ತು ಭೇದಭಾವವಿಲ್ಲದೆ ಶುದ್ದಹ್ರದಯದಿಂದ ಎಲ್ಲರನ್ನೂ ಪ್ರೀತಿಸಿ - ಶ್ರೀ ವಿನಾಯಕಾನಂದಜೀ

ಕುಂದಾಪುರ:ಜೂ.೨೦ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಸಂಯಮ, ತಾಳ್ಮೆ, ಪ್ರೀತಿಯಿಂದ, ತಮ್ಮ ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿ,  ವಿದ್ಯಾರ್ಥಿ ಜೀವನದಲ್ಲಿ  ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ  ಆ ಜೀವನವನ್ನು ಸರಿಯಾಗಿ  ವಿನಿಯೋಗಿಸಿ.  ಮೋಜಿನ ಕಡೆಗೆ ಗಮನಹರಿಸಿದರೆ ಜೀವನಪೂರ್ತಿ ಪಶ್ಚಾತಾಪ ಕಷ್ಟಪಡ ಬೇಕಾದಿತು.. ವಿದ್ಯಾರ್ಥಿಗಳು ಸ್ವಯಂ ಜ್ಯೋತಿಗಳಾಗಿ ಜಗತ್ತಿಗೆ ಬೆಳಕಾಗುವ ಜ್ಯೋತಿಗಳಾಗಬೇಕು’ ಎಂದು ಕಾರ್ಕಳ ಬೈಲೂರು ಮಠ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ವಿನಾಯಕಾನಂದಜೀ ಮಹಾರಾಜ್‌ ಹೇಳಿದರು.

        ಅವರು ಇಲ್ಲಿನ ಜೂನಿಯರ್‌ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿನಿಧಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಸಂದೇಶ ನೀಡಿದರು.

ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಆಗ ನಮ್ಮನ್ನು ನಾವು ಜಯಿಸಲು ಸಾಧ್ಯ. ಪರಿಸ್ಥಿತಿ ನಮ್ಮ ಕೈವಶದಲ್ಲಿರಬೇಕು. ನಾವು ಪರಿಸ್ಥಿತಿಯ ಕೈಗೊಂಬೆಗಳಾಗಬಾರದು. ನೈತಿಕತೆ ಬಿಟ್ಟು ಭೌತಿಕ ಭೋಗದ ಕಡೆಗೆ ಗಮನ ಹರಿಯಬಾರದು. ತಮ್ಮ ಇಂದ್ರಿಯಗಳನ್ನು ಗೆದ್ದುಕೊಳ್ಳುವ ಶಕ್ತಿಯನ್ನು ಪಡೆದುಕೊಳ್ಳಿ. ದೈಹಿಕ, ನೈತಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಧಾರ್ಮಿಕ ಬೆಳವಣಿಗೆಯನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಎನ್ನುತ್ತಾ,ಎಲ್ಲಾ ಧರ್ಮಗಳ ಉದ್ದೇಶ ಒಂದೇ,   ಜೀವನದಲ್ಲಿ ಶುದ್ದ ಮನಸಿನಿಂದ, ಯಾವ ಶರತ್ತು ಇಲ್ಲದೆ, ಯಾವ ಭೇದ ಭಾವವೂ ಇಲ್ಲದೆ ಎಅಲ್ಲರನ್ನೂ ಪ್ರೀತಿಸಿ

      ಹತ್ತನೆ ಕ್ಲಾಸು, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷಣದ ಸುಮಾರು 250 ಜಾತಿ ಭೇದವಿಲ್ಲದೆ ಅರ್ಹ ವಿದ್ಯಾರ್ಥಿಗಳಿಗೆ 7 ಲಕ್ಷ ರೂ. ಸಹಾಯಧನ ನೀಡಲಾಯಿತು.ಪ್ರತಿಭಾವಂತ ವಿದ್ಯಾರ್ಥಿಗಳಾದ ರಾಜ್ಯಮಟ್ಟದಲ್ಲಿ  ರೇಂಕ್‌ಗಳನ್ನು ಪಡೆದ ಭಂಡಾರ್‌ಕಾರ್ಸ್‌ ಪದವಿ ಕಾಲೇಜಿನ ಮಹಾಲಕ್ಷ್ಮೀ ಉಪ್ಪಿನಕುದ್ರು, ಮಮತಾ ನಾವುಂದ, ಸುಕನ್ಯಾ ಬೀಜಾಡಿ, ಆರ್‌.ಎನ್‌. ಶೆಟ್ಟಿ ಪ.ಪೂ. ಕಾಲೇಜಿನ ಅಂಕಿತಾ ಶೆಟ್ಟಿ ಬೇಲೂ¤ರು, ವೆಂಕಟರಮಣ ಪ.ಪೂ.ಕಾಲೇಜಿನ ಉಮಾ ಹಸ್ನಾ, ವೆಂಕಟ್ರಮಣ ಪ್ರೌಢಶಾಲೆಯ ಸಂಜನಾ ಕೋಟತಟ್ಟು, ತಾಲೂಕಿಗೆ ರ್‍ಯಾಂಕ್‌ ಪಡೆದ ವೆಂಕಟರಮಣ ಕಾಲೇಜಿನ ಅಂಜಲಿ ಶೇಟ್‌, ಕಿರಣ್‌ ಅವರನ್ನು ಸಮ್ಮಾನಿಸಲಾಯಿತು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಗಿಳಿಯಾರು ಕುಶಲ ಹೆಗ್ಡೆ ದತ್ತಿನಿಧಿಯ ಅಧ್ಯಕ್ಷ ಬಿ.ಪ್ರಕಾಶ್ಚಂದ್ರ ಶೆಟ್ಟಿ ವಹಿಸಿ, ಉದ್ಯಮಿ ಜಯಕರ ಶೆಟ್ಟಿ, ಇವರುಗಳು ಶುಭ ಕೋರಿದರು ಅರುಣ್‌ ಕುಮಾರ್‌ ಶೆಟ್ಟಿ, ಉದಯ ಹೆಗ್ಡೆ, ಕಿಶೋರ್‌ ಹೆಗ್ಡೆ, ಸ್ವರೂಪ್‌ ಹೆಗ್ಡೆ ಮತ್ತು ಇತರರು ಸಹಾಯಧನವನ್ನು ವಿತರಿಸಿದರುಪತ್ರಕರ್ತ ಯು.ಎಸ್‌. ಶೆಣೈ ಸ್ವಾಗತಿಸಿ, ನಿರ್ವಹಿಸಿದರು. ಕಿರಣ್ ಭಟ್ ವಂದಿಸಿದರು.