JANANUDI.COM NETWORK
ಯಾರದೋ ತಪ್ಪು ಯಾರಿಗೋ ಶಿಕ್ಷೆ
ಬೆಂಗಳೂರು: ಇತ್ತೀಚೆಗೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಕಟ್ಟಡ ನಿರ್ಮಿಸಲು ಕಪಾಲಿ ಟಾಕೀಸನ್ನು ಕೆಡವಲಾಗಿತ್ತು, ಕಾರಣ ಆ ಜಾಗದಲ್ಲಿ ಹೊಸ ಮಲ್ಟಿಪ್ಲೆಕ್ಸ್ ಕಟ್ಟಡ ಕಟ್ಟಲಿಕ್ಕಾಗಿ. ಆದರಂತೆ ಆಳ ಪಾಯಕ್ಕಾಗಿ 80 ಅಡಿ ಆಳದಲ್ಲಿ ಗುಂಡಿ ತೆಗೆಯಲಾಗಿತ್ತು. ಪರಿಣಾಮ ಪಕ್ಕದಲ್ಲಿ ಇದ್ದ ಕಟ್ಟಡಗಳಿಗೆ ಹಾನಿಯಾಗಿತ್ತು. ಕಟ್ಟಡ ಪಕ್ಕ ಆಳವಾದ ಗುಂಡಿ ತೆಗೆದ ಕಾರಣ ಕಟ್ಟಡಗಳು ಬಿರುಕು ಬಿಟ್ಟಿದ್ದವು.
ಸಂಜೆ ವೇಳೆಗೆ ಪಕ್ಕದಲ್ಲಿದ್ದ ಎರಡು ಕಟ್ಟಡಗಳು ನೋಡ ನೋಡುತ್ತಿದ್ದಂತೆ ನೆಲಸಮವಾಗಿವೆ. ಈ ದೃಶ್ಯ ಮೊಬೈಲ್ ಕ್ಯಾಮೆರದಲ್ಲಿಯು ಸೆರೆಯಾಗಿದೆ.
ಈಗ ಕಟ್ಟಡ ಕಪಾಲಿ ಥಿಯೇಟರ್ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಿದ್ದಿದ್ದು, ಅದರ ಅಡಿಯಲ್ಲಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಲ್ಟಿಪ್ಲೆಕ್ಸ್ ಕಟ್ಟಡ ಕಾಮಗಾರಿ ರಾತ್ರಿ ವೇಳೆಯೂ ನಡೆಯುತ್ತಿತ್ತು ಹೀಗಾಗಿ ಕಟ್ಟಡ ಬಿದ್ದ ಸಮಯದಲ್ಲಿ ಅಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸುತ್ತಾರೆ.
