ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉತ್ತಮ ಮೌಲ್ಯಗಳ ಜೊತೆಗೆ ಉತ್ತಮ ಶಿಕ್ಷಣ ನೀಡುತ್ತಿದೆ : ಶಾಸಕ ಕೆ.ಆರ್.ರಮೇಶ್‍ಕುಮಾರ್

ರಾಯಲ್ಪಾಡು : ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉತ್ತಮ ಮೌಲ್ಯಗಳ ಜೊತೆಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ರಾಯಲ್ಪಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈಗಿರುವ ಶೌಚಾಲಯ ಜತೆಗೆ ಶಾಲಾಕಾಲೇಜು ಸಿಬ್ಬಂದಿಗಳಿಗೆ, ಹೆಣ್ಣು ಮಕ್ಕಳ ಶೌಚಾಲಯಗಳಿಗೆ 24ಲಕ್ಷ ರೂ ಅನುದಾನ ಬಿಡುಗಡೆ ಮಾಡಿಸುವುದಾಗಿ ಹಾಗೂ ಶಾಲಾ ಕಾಲೇಜಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನೆಲ್ಲಾ ಈಡೇರಿಸುವುದಾಗಿ ಭರವಸೆ ನೀಡಿದರು.
ಗುತ್ತಿಗೆದಾರರು ಸರ್ಕಾರದಿಂದ ಬಿಡುಗಡೆಯಾಗುವ ಯಾವುದೇ ಕಾಮಗಾರಿಯನ್ನಾಗಲಿ ಮನಬಂದತೆ ಕಾಮಗಾರಿಗಳನ್ನು ಕೈಗೊಳ್ಳಬಾರದು. ಕಾಮಗಾರಿಗಳನ್ನ ಮಾಡುವುದಕ್ಕಿಂತ ಕಾಮಗಾರಿಯ ಕೆಲಸಕಾರ್ಯಗಳಲ್ಲಿ ಒಳ್ಳೇಯ ಗುಣಮಟ್ಟವನ್ನು ಕಾಪಾಡುವುದು ಮುಖ್ಯವೆಂದರು.
ಗ್ರಾಮದ ಶಾಲಾ ಸ್ಥಳಕ್ಕೆ ವಿಶೇಷವಾದ ಸ್ಥಾನಮಾನವಿದೆ. ಸ್ವಾತಂತ್ರ್ಯ ಪೂರ್ವದಿಂದಲೇ ಶಾಲಾವರಣದಲ್ಲಿ ಎಷ್ಟೋ ಮಹನೀಯರು ಓಡಾಡಿರುವ ಸ್ಥಳವಾಗಿದ್ದು ಇಲ್ಲಿನ ಪುರತಾನ ಕಟ್ಟಡವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮದೆಲ್ಲಾಗಿದೆ. ಹೋಬಳಿಯ ಕೇಂದ್ರವಾಗಿರುವ ರಾಯಲ್ಪಾಡಿನ ಶಾಲಾ ಕಾಲೇಜ್‍ಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದರು.
ಜಿ.ಪಂ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ತಾ.ಪಂ. ಅಧ್ಯಕ್ಷ ಆರ್.ವಿ.ನರೇಶ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‍ರೆಡ್ಡಿ, ಎಪಿಎಂಸಿ ಸದಸ್ಯ ಪೆದ್ದಿರೆಡ್ಡಿ, ಅಭಯಂತರರಾದ ಎಲ್.ಕೆ.ಶ್ರೀನಿವಾಸಮೂರ್ತಿ, ಗೋವಿಂದಪ್ಪ, ಪ್ರಾಂಶುಪಾಲ ವಿ.ವೆಂಕಟರಮಣ, ಮುಖ್ಯ ಶಿಕ್ಷಕ ಪಿ.ಮಾರಣ್ಣ, ಗ್ರಾಮದ ಮುಖಂಡರಾದ ಆರ್.ಗಂಗಾಧರ್, ಎನ್.ಶಿವನ್, ಶ್ರೀನಿವಾಸರಾವ್,ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ, ಕೆ.ಎಸ್.ಮದನಮೋಹನರೆಡ್ಡಿ, ಸಿ.ಎಸ್.ವೆಂಕಟರಮಣಪ್ಪ, ಸಿ.ಎಸ್.ದಿನೇಶ್, ಎಸ್.ಎನ್.ವೆಂಕಟೇಶ್, ಆರ್.ವಿ.ನಾಗರಾಜ, ಸತ್ಯೇಂದ್ರಬಾಬು, ಸತೀಶ್‍ರೆಡ್ಡಿ,ಗೋಪಾಲಕೃಷ್ಣ,ಎಸ್‍ಡಿಎಂಸಿ ಅಧ್ಯಕ್ಷ ಸುಬ್ರಮಣ್ಣಚಾರಿ, ಸಿ.ವಿ.ಮಂಜುನಾಥ್, ಆರ್.ವಿ.ಅಶೋಕ್,ವಿಶ್ವನಾಥರೆಡ್ಡಿ, ಗುತ್ತಿಗೆದಾರ ಗಿರೀಶ್‍ಆರಾಧ್ಯ ಇದ್ದರು.

ರಾಯಲ್ಪಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಶಾಸಕ ಕೆ.ಆರ್.ರಮೇಶ್‍ಕುಮಾರ್ ಭೂಮಿ ಪೂಜೆ ನೆರವೇರಿಸಿದರು.