ಕೋಲಾರ-ನ-11, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನಕಲಿ ಬಿತ್ತನೆ ಬೀಜದಿಂದ ನಷ್ಟವಾಗಿರುವ ಟೆಮೋಟೋ ಆಲೂಗಡ್ಡೆಗೆ 2 ಲಕ್ಷ ಪರಿಹಾರ ನೀಡಿ ನಕಲಿ ಬಿತ್ತನೆ ಬೀಜ ನಿಯಂತ್ರಣಕ್ಕೆ ಕಾನೂನು ರಚನೆ ಮಾಡುವಂತೆ ಹಾಗೂ ಕೆ.ಸಿ.ವ್ಯಾಲಿ 3ನೇ ಹಂತದ ಶುದ್ದೀಕರಣಕ್ಕಾಗಿ ರೈತ ಸಂಘದಿಂದ ಯರಗೋಳ್ ಉದ್ಗಾಟನಗೆ ಆಗಮಿಸಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರಿಗೆ ನಷ್ಟ ಆಲೂಗಡ್ಡೆ ಬೆಳೆ ಸಮೇತ ಮನವರಿಕೆ ಮಾಡಿ ಮನವಿ ನೀಡಿ ಒತ್ತಾಯಿಸಲಾಯಿತು.
ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರ ರಕ್ಷಣೆಗಾಗಿ ಸರ್ಕಾರ ಪ್ರತಿ ಪಂಚಾಯ್ತಿಗೊಂದು ಘೋಶಾಲೆ ತೆರೆದು ಜಾನುವಾರುಗಳ ರಕ್ಷಣೆ ಮಾಡುವ ಜೊತೆಗೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳ ವ್ಯವಸ್ಥಾಪಕರಿಗೆ ರೈತರಿಂದ ಬಲವಂತದ ಸಾಲ ಹಾಗೂ ನೋಟೀಸ್ ನೀಡದಂತೆ ಆದೇಶ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾನ್ಯ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದರು.
5-6 ವರ್ಷಗಳಿಂದ ಜಿಲ್ಲಾದ್ಯಂತ ಟೆಮೋಟೋ, ಆಲೂಗಡ್ಡೆ, ಕ್ಯಾಪ್ಸಿಕಂ ಬೆಳೆಗಳಿಗೆ ಬಾದಿಸುತ್ತಿರುವ ಅಂಗಮಾರಿ, ಊಜಿ, ನುಸಿರೋಗ, ಲಕ್ಷಾಂತರ ರೂಪಾಯಿ ಔಷದಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬಾರದೆ ಹಾಕಿ ಬಂಡವಾಳ ಕೈಗೆ ಸಿಗದೆ ಸಂಕಷ್ಟದಲ್ಲಿರುವ ರೈತರಿಗೆ ಕಾಡುತ್ತಿರುವ ಪ್ರಶ್ನೆ ಎಂದರೆ ಜಿಲ್ಲೆಯ ರೈತರಿಗೆ ಕೆ.ಸಿ.ವ್ಯಾಲಿ ವರದಾನವೋ? ಶಾಪವೋ ತಿಳಿಯದಂತಾಗಿದೆ ಎಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಕೆ.ಸಿ.ವ್ಯಾಲಿ ನೀರನ್ನು 3ನೇ ಹಂತದ ಶುದ್ದೀಕರಣ ಮಾಡಿ, ರೈತರಲ್ಲಿರುವ ಸಂಶಯವನ್ನು ದೂರ ಮಾಡಬೇಕೆಂದು ಒತ್ತಾಯ ಮಾಡಿದರು.
ಒಂದು ಕಡೆ ಟೆಮೋಟೋಗೆ ಬಿಂಗಿರೋಗ ಮತ್ತೊಂದಡೆ ಆಲೂಗಡ್ಡೆ ಬಿತ್ತನೆ ಮಾಡಿ 2 ತಿಂಗಳು ಕಳೆದರೂ ಕನಿಷ್ಟ ಗೋಳಿಗಾತ್ರದ ಗಡ್ಡೆಯೂ ಸಹ ಬಿಡದೆ ಸಂಪೂರ್ಣವಾಗಿ ಸುಮಾರು 50 ಸಾವಿರ ಎಕರೆ ಆಲೂಗಡ್ಡೆ ಬೆಳೆ ನಾಶವಾಗಿ ಸಂಬಂಧಪಟ್ಟ ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ವಿಜ್ಞಾನಿಗಳನ್ನು ಕರೆಯಿಸಿ ಪರಿಶೀಲನೆ ಮಾಡಿ ಕಡೆಗೆ ಅಜ್ಞಾನಿಗಳಂತೆ ಅನಕ್ಷರಸ್ಥ ರೈತರದೇ ತಪ್ಪು ಎಂದು ವರದಿ ನೀಡಿ ನಕಲಿ ಬಿತ್ತನೆ ಬೀಜ ವಿತರಣೆ ಮಾಡಿದೆ, ಆಲೂಗಡ್ಡೆ ಮಾಲೀಕರನ್ನು ರಕ್ಷಣೆ ಮಾಡಿದ್ದಾರೆಂದು ದೂರು ನೀಡುವ ಜೊತೆಗೆ ಮಾನ್ಯರು ಜಿಲ್ಲಾಧಿಕಾರಿಗಳಿಂದ ನಷ್ಟ ಬೆಳೆ ವರದಿಯನ್ನು ತರಿಸಿಕೊಂಡು ಪ್ರತಿ ಎಕರೆಗೆ ಕನಿಷ್ಠ 2 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಹೋಬಳಿ ಅಧ್ಯಕ್ಷ ಕಾಮಸಮುದ್ರ ಮುನಿಕೃಷ್ಣ ಮಾತನಾಡಿ ಗಡಿಭಾಗದ ರೈತರ ಜೀವ ಹಾಗೂ ಬೆಳೆಯನ್ನು ಹತ್ತಾರು ವರ್ಷಗಳಿಂದ ನಾಶ ಮಾಡುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ನೊಂದ ರೈತರು ಜಾತಕ ಪಕ್ಷಿಗಳಂತೆ ಸರ್ಕಾರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳನ್ನು ಎದುರು ನೋಡುತ್ತಿದ್ದರೂ, ಯಾವುದೇ ಪರಿಹಾರ ಸಿಗುತ್ತಿಲ್ಲ. ಜೊತೆಗೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಡಾನೆಗಳು ಬಂದು ಬೆಳೆ ಅಥವಾ ರೈತರ ಜೀವವನ್ನು ತೆಗೆದಾಗ ಮಾತ್ರ ಸ್ಥಳೀಯ ಶಾಸಕರು ನೆಪಮಾತ್ರಕ್ಕೆ ಮೃತಪಟ್ಟ ರೈತ ಕುಟುಂಬದ ಸದಸ್ಯರಿಗೆ ಮೊಸಳೆ ಕಣ್ಣೀರು ಹಾಕಿ ನಾಪತ್ತೆಯಾದರೆ ಮತ್ತೆ ಸಮಸ್ಯೆಯಾದಾಗ ಕಾಣಿಸಿಕೊಳ್ಳುತ್ತಿದ್ದಾರೆಂದು ದೂರು ನೀಡಿದರು.
ಒಂದು ಕಡೆ ಕಾಡಾನೆಗಳ ಹಾವಳಿ ಮತ್ತೊಂದು ಕಡೆ ಗಡಿಭಾಗಗಳಲ್ಲಿ ಹದಗೆಟ್ಟ ರಸ್ತೆಗಳಿಲ್ಲದೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಪ್ರತಿಯೊಂದು ಸಮಸ್ಯೆಗೂ ನಗರದ ಹೃದಯ ಭಾಗಕ್ಕೆ ಹತ್ತಾರು ಕಿಲೋಮಿಟರ್ ಕಾಡುಗಳಲ್ಲಿ ಕಾಡಾನೆಗಳ ಭಯದಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ. ಮತ್ತು ಕಾಡಾನೆಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಲು ಸರ್ಕಾರ ಶಾಶ್ವತ ಪರಿಹಾರ ನೀಡಬೇಕಾದರೆ ಬನ್ನೇರುಘಟ್ಟ ಮಾದರಿಯಲ್ಲಿ ಆನೆ ಕಾರಿಡಾರ್ ಅಭಿವೃದ್ದಿ ಪಡಿಸಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಮುಖ್ಯ ಮಂತ್ರಿಗಳು ನಿಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ, ಕದರಿನತ್ತ ಗೋವಿಂದಪ್ಪ, ಬೀಮಗಾನಹಳ್ಳಿ ಮುನಿರಾಜು, ವಿಶ್ವ, ಅಪ್ಪೋಜಿರಾವ್, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮುಂತಾದವರು ಇದ್ದರು.