JANAUDI.COM NETWORK
ಕ್ಲಾಸಿಕ್ ಪವರ್ ಲಿಫ್ಟರ್ ಎಶ್ಯನ್ ಛಾಂಪಿಯೆನ್ ಸತೀಶ್ ಖಾರ್ವಿ, ನಾಗಶ್ರೀಗೆ ರೊಟರ್ಯಾಕ್ಟ್ ಮತ್ತು ಕಲಾಮ್ರತ್ ಸಂಘದಿಂದ ಸನ್ಮಾನ
ಕುಂದಾಪುರ, ಡಿ. 13: ಕಜಕಿಸ್ಥಾನಲ್ಲಿ ನಡೆದ ಏಶ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಛಾಂಪಿಯೆನ್ ಶಿಪ್ನಲ್ಲಿ ಕ್ಲಾಸಿಕ್ ಪವರ್ ಲಿಫ್ಟಿಂಗ್ನಲ್ಲಿ ಒವರ್ ಆಲ್ ಛಾಂಪಿಯೆನ್ ಆದ ಸತೀಶ್ ಖಾರ್ವಿ ಮತ್ತು ಅದೇ ಏಶ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ನಲ್ಲಿ ಹಲವು ಪದಕ ಗೆದ್ದ ನಾಗಶ್ರೀ ಗಣೇಶ್ ಶೇರುಗಾರ್ ಇವರನ್ನು ರೊಟರ್ಯಾಕ್ಟ್ ಕುಂದಾಪುರ ದಕ್ಷಿಣ ಮತ್ತು ಕಲಾಮ್ರತ್ ಸಾಂಸ್ಕ್ರತಿಕ ಸಂಘದಿಂದ ಹಕ್ರ್ಯುಲಸ್ ಜಿಮನಲ್ಲಿ ಸನ್ಮಾನ ಫಲ ಪುಷ್ಪ ನೀಡಿ ಹಾರ ಶಾಲು ಹಾಕಿ ಸನ್ಮಾನಗೊಳಿಸಲಾಯಿತು.
ಲಿಫ್ಟರ್ ಸತೀಶ್ ಕಜಕಿಸ್ಥಾನದಲ್ಲಿ ಮಾಸ್ಟರ್ 1 ರ, 40-50 ವಯೋಮಾನದ 66 ಕೆ.ಜಿ. ವಿಭಾಗದಲ್ಲಿ ಸ್ಕಾವ್ಯಾಟ್ ನಲ್ಲಿ ಚಿನ್ನ, ಬೆಂಚ್ ಪ್ರೆಸ್ನಲ್ಲಿ ಬೆಳ್ಳಿ, ಡೆಡ್ ಲಿಫ್ಟ್ನಲ್ಲಿ ಚಿನ್ನ ಗಳಿಸಿ ಕೂಟದ ಈ ವಿಭಾಗದಲ್ಲಿ ಹೆಚ್ಚು ಅಂಕ ಪಡೆದು ಮತ್ತೊಂದು ಚಿನ್ನದ ಪದಕೆ ಪಡೆದು ಛಾಂಪಿಯೆನ್ ಶಿಪನ್ನು ತನ್ನದಾಗಿಸಿಕೊಂಡಿದ್ದಾರೆ. ಸತೀಶ್ ಖಾರ್ವಿ ಕುಂದಾಪುರದವರಾಗಿದು ಹಕ್ರ್ಯುಲಸ್ ಜಿಮ್ಮ್ನ ವ್ಯವಸ್ಥಾಪಕರಾಗಿದ್ದಾರೆ ನಾಗಶ್ರೀ 18 ರ ಒಳಗಿನ ವಯೊಮಾನ. 63 ಕೆ.ಜಿ. ಜೂನಿಯರ್ ವಿಭಾಗದಲ್ಲಿ ಕ್ಲಾಸಿಕ್ ಪವರ್ ಲಿಫ್ಟ್ನ ಸ್ಕ್ವ್ಯಾಟ್ ನಲ್ಲಿ, ಬೆಂಚ್ ಪ್ರೆಸ್ನಲ್ಲಿ ಬೆಳ್ಳಿ, ಡೆಡ್ ಲಿಫ್ಟ್ ನಲ್ಲಿ ಚಿನ್ನದ ಪದಕ ಗೆದ್ದು ಒವರ್ ಆಲ್ ನಲ್ಲಿ ಬೆಳ್ಳಿ ಪದಕ ಗೆದಿದ್ದಾರೆ. ಇವರು ಕುಂದಾಪುರ ಉಪ್ಪಿನಕುದ್ರಿನವರಾಗಿದ್ದು ಆಳ್ವಾಸ್ ಕಾಲೇಜಿನ್ ವಿದ್ಯಾರ್ಥಿಯಾಗಿದ್ದಾರೆ ಅವರಿಗೆ ಆಳ್ವಾಸ್ ಕಾಲೇಜಿನ ಪ್ರಮೋದ್ ಕುಮಾರ್ ಶೆಟ್ಟಿ ಕೋಚಿಂಗ್ ನೀಡಿದ್ದರು
‘ನೀವು ಕುಂದಾಪುರ ಮಣ್ಣಿನ ಸುವಾಸನೆಯನ್ನು ವಿಶ್ವ ಮಟ್ಟಕ್ಕೆ ತಲುಪಿಸಿದ್ದಿರಿ, ನಿಮ್ಮ ಸಾಧನೆಯಿಂದ ನಮ್ಮ ಊರಿಗೆ ಜಿಲ್ಲೆಗೆ ರಾಜ್ಯಕ್ಕೆ ಅಲ್ಲದೆ ರಾಶ್ಠ್ರಕ್ಕೆ ಕೀರ್ತಿ ತಂದು ಕೊಟ್ಟಿದ್ದಿರಿ, ಹ್ರದಯಾದಾಳಂತರದಿಂದ ಅಭಿನಂದಿಸುವುದರ ಜೊತೆಗೆ, ಇನ್ನೂ ಕೂಡ ಹೆಚ್ಚಿನ ಸಾಧನೆ ಮಾಡಿ ರಾಶ್ಠ್ರಕ್ಕೆ ಕೀರ್ತಿ ತಂದುಕೊಡಿ’ ಎಂದು ಸನ್ಮಾನ ಮಾಡಿದ ಕಲಾಮ್ರತ್ ಸಾಂಸ್ಕ್ರತಿಕ ಸಂಘದ ಅಧ್ಯಕ್ಷ ಪತ್ರಕರ್ತ ಸಾಹಿತಿ ಬರ್ನಾಡ್ ಜೇ,ಕೋಸ್ತಾ ನುಡಿದರು. ಈ ಸನ್ಮಾನ ಕಾರ್ಯದಲ್ಲಿ , ರೊಟರ್ಯಾಕ್ಟ್ ಅಧ್ಯಕ್ಷ ಆಲ್ಡ್ರಿನ್ ಡಿಸೋಜಾ, ಪುರಸಭೆ ಸದಸ್ಯ ಗಿರೀಶ್ ಜಿ.ಕೆ. ಪಾಲ್ಗೊಂಡು ಶುಭ ನುಡಿಗಳನ್ನಾಡಿದರು. ಸತೀಶ್ ಖಾರ್ವಿ ಮತ್ತು ನಾಗಶ್ರೀಗೆ ವಿಶೇಷ ತರಬೇತಿ ನೀಡಿದ ಕೋಚ್ ಜಿ.ವಿ.ಅಶೋಕ್ ಕೆನರಾ ಬ್ಯಾಂಕ್ ನೆರಳಕಟ್ಟೆ ಇವರು ‘ಇವರುಗಳು ಛಲ ಸತತ ಪ್ರಯತ್ನದಿಂದ ಈ ಸಾಧನೆ ಮಾಡಿದ್ದಾರೆಂದು’ ಹೇಳಿದರು.
ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ರೊಟರ್ಯಾಕ್ಟ್ ಸದಸ್ಯರಾದ ವಿಲ್ಬನ್, ಅಂಜಲಿ ಕೆ. ಕಲಾಮ್ರತ್ ಸಾಂಸ್ಕ್ರತಿಕ ಸಂಘದ ಪಾಸ್ಕಲ್ ಡಿಸೋಜಾ, ದಾಮನ್ ಡಿಮೆಲ್ಲೊ, ಜಿಮ್ಮ್ನ ಎಲ್ಲಾ ಸದಸ್ಯರು ಮತ್ತು ಇತರರು ಭಾಗವಹಿಸಿದರು. ಲಿಫ್ಟರ್ ಸತೀಶ ವಂದನೆಗಳನ್ನು ಸಲ್ಲಿಸಿದರು.