ಕ್ರೈಸ್ತ ಸಮಾಜದ ಪ್ರಸ್ತೂತ ಪರಿಸ್ಥಿಯ ಸಮಗ್ರ ಅವಲೋಕನ ಸಿಬಿರ:ಸಂಪನ್ಮೂಲ ವ್ಯಕ್ತಿಯಾಗಿ ಡಾ|ನೊರ್ಬರ್ಟ್ ಲೋಬೊ

ಕ್ರೈಸ್ತ ಸಮಾಜದ ಪ್ರಸ್ತೂತ ಪರಿಸ್ಥಿಯ ಸಮಗ್ರ ಅವಲೋಕನ ಶಿಬಿರ :ಸಂಪನ್ಮೂಲ ವ್ಯಕ್ತಿಯಾಗಿ ಡಾ|ನೊರ್ಬರ್ಟ್ ಲೋಬೊ


ಕುಂದಾಪುರ,ಮಾ. 25: ನಮ್ಮ ಭಾರತದ, ಕರ್ನಾಟಕದ ಮತ್ತು ಕರಾವಳಿ ಜಿಲ್ಲೆಗಳಲ್ಲಿನ ಕ್ರೈಸ್ತ ಸಮಾಜದ ಪ್ರಸ್ತೂತ ಸಮಗ್ರ ಅವಲೋಕನ ಶಿಬಿರ ಇಲ್ಲಿನ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಗಂಣದಲ್ಲಿ ರವಿವಾರ ನೆಡೆಯಿತು.


ಸಂಪನ್ಮೂಲ ವ್ಯೆಕ್ತಿಯಾಗಿ ಅರ್ಥ ಶಾಸ್ತ್ರದ ಪ್ರಾಧ್ಯಾಪಕ ಡಾ||ನೊರ್ಬರ್ಟ್ ಲೋಬೊ ಆಗಮಿಸಿ ಪ್ರಸ್ತೂತ ಕ್ರೈಸ್ತ ಸಮಾಜದ ಎಳು ಬೀಳುವಿನ ಸಮಗ್ರ ಅಂಕಿ ಅಂಶಗಳ ಜೊತೆ ವಿವರಣೆ ನೀಡಿದರು. ಮೊದಲು ನಮ್ಮ ಸಮಾಜದ ಜನರು ಉತ್ತಮ ಕ್ರಷಿಕರಾಗಿದ್ದು, ಭೂ ಸುಧಾರಹಣೆ ಕಾತ್ದೆ ಬಂದ ಮೇಲೆ, ಉಳುವನೇ ಒಡೆಯನಾಗಿ ಸಮಾಜದಲ್ಲಿ ಗೌರವಯುತ ಜೀವನ ನೆಡೆಸಿದರು. ನಂತರದ ದಿನಗಳಲ್ಲಿ ಕ್ರಷಿಗೆ ಮಹತ್ವ ಕೊಡದೆ, ಸ್ವಲ್ಪ ಕಲಿತು ಮುಂಬಯಿ, ಮತ್ತು ಗಲ್ಪ್ ದೇಶಗಳ ಹಣದ ಆಮಿಶಕ್ಕೆ ಒಳಗಾಗಿ ಸ್ಥಾನಂತರ ಪರಿಸ್ಥಿತಿ ನಿರ್ಮಾಣವಾಯಿತು. ಅಲ್ಲಿಗೆ ಹೋದ ನಮ್ಮವರು, ಅಲ್ಲಿಯವರೂ ಆಗಲಿಲ್ಲಾ, ಇಲ್ಲಿಯವರಾಗಿಯು ಗುರುತಿಸಿಕೊಳ್ಳಲು ಕಷ್ಟದ ಪರಿಸ್ಥಿತಿ ನಿರ್ಮಾಣವಾದಂತಾಯಿತು. ಎರಡೊ ಒಂದೊ ಮಕ್ಕಳಿಗೆ ಜನ್ಮ ಕೊಟ್ಟು ಸಣ್ಣ ಕುಟುಂಬಗಳಾಗಿ ಸಮಾಜದ ಜನಸಂಖ್ಯೆ ಕ್ಷೀಣಿಸಿತು. ಇವತ್ತು ಗಲ್ಪ ರಾಷ್ಟ್ರಗಳಲ್ಲಿ ಸಂಜೆಯಾಗುವ ಲಕ್ಷಣ ಕಂಡು ಬರುತ್ತದೆ. ಆಲ್ಲಿನ ರಾಷ್ಟ್ರಗಳಲ್ಲಿ ಉದ್ಯೋಗ ಅವಾಕಾಶಗಳು ಕಡಿಮೆಯಾ ತೊಡಗಿವೆ. ಈಗಾಗಲೇ ಹಲವಾರು ಉದ್ಯೋಗಗಳನ್ನು ಕಡಿತಕೊಂಡು ಉದ್ಯೋಗ ಕಳೆದುಕೊಂಡು ಹಲವು ಸಾವಿರ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹಾಗಾಗಿ ನಮ್ಮವರು ಎಚ್ಚೆತ್ತುಕೊಳ್ಳಬೇಕು. ನಮ್ಮ ದೇಶದಲ್ಲೆ ಉದ್ಯೋಗಗಳನ್ನು ಆರಿಸಿಕೊಳ್ಳ ಬೇಕು, ಸ್ವಂತ ಉದ್ದಿಮೆಗಳನ್ನು ನೆಡೇಸಲು ಮುಂದೆ ಬರಬೇಕು. ಇವತ್ತು ಪ್ರಪಂಚಾದ್ಯಂತಹ ಥರಹ ಥರಹದ ಯಂತ್ರೋಪಕರಣ, ಆಧುನಿಕ ತಂತ್ರ ಜ್ನಾನದಿಂದ ಮಾನವನ ಅವಶ್ಯಕತೆ ಕಡಿಮೆಯಾಗಿ ಉದ್ಯೊಗಗಳ ಬರ ಉಂಟಾಗಿದೆ. ಸಂಬಳದ ಕೆಲಸಗಳು ಕಡಿಮೆಯಾಗುತ್ತಿವೆ, ಅದಕ್ಕಾಗಿ ಯಂತ್ರೋಪಕರಣಗಳು ಸ್ಥಾನ ಪಡೆದಿವೆ. ಹಾಗೇ ಇಂಜಿನಿಯರಿಂಗ್, ವಾಣಿಜ್ಯ ಕುರಿತ ವಿದ್ಯಾಭಾಸ ಮಾಡಿದವರಿಗೆ ಉದ್ಯೋಗ ಲಭಿಸುವುದು ಕಷ್ಟವಾಗಿದೆ, ಉದ್ಯೋಗ ದೊರೆತರೂ ಅಲ್ಪ ವೇತನ ದೊರೆಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇವತ್ತು ಇಂಜಿನಿಯರಿಂಗ್ ಉದ್ಯೋಗದ ವೇತನಕ್ಕಿಂತ ಕಾರ್ಪೆಂಟರ್, ಟೈಲರಿಂಗ್, ಎಲಕ್ಟ್ರಶಿಯನ್ ಥರಹದ ವಿವಿಧ ರೀತಿಯ ಕೌಶಲ್ಯ ಭರಿತ ಕೆಲಸಗಳಿಗೆ ಅವಕಾಶವು ಹೆಚ್ಚು ತ್ ಹಾಗೇ ಸಂಬಳವೂ ಹೆಚ್ಚು ದೊರಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮವರು ಹೊರ ದೇಶದ ಕೆಲಸದ ಹುಚ್ಚು ಬಿಟ್ಟು, ನಮ್ಮಲ್ಲಿಯೆ ಸರಕಾರಿ ವ್ರತ್ತಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿ ಸಮಾಜದ ಸೇವೆ ಮಾಡಲು ಮುಂದೆ ಬರಬೇಕು. ಹಾಗೇ ರಾಜಕೀಯದಲ್ಲಿ ಮುಂದೆ ಬಂದು ಸಮಾಜದ ಇತರ ಜನರೊಡನೆ ಬೆರೆತು ಜೀವಿಸಬೇಕು, ಸಹಕಾರಿ ತತ್ವವಗಳನ್ನು ಅವಲಂಬಿಸಬೇಕು, ಸಮೂದಾಯಗಳಲ್ಲಿ ಕೈಜೋಡಿಸಬೇಕು, ನಮ್ಮ ಶಿಕ್ಷಣ ಸಂಸ್ಥೆಗಳು ಕ್ರಷಿ, ಕುಲಕಸುಬು, ಸ್ವಸಹಾಯ ಸಂಘಗಳ ರಚನೆ ಬಗ್ಗೆ ತಿಳುವಳಿಕೆ ನೀಡಬೇಕು’ ಎಂದು ಸವಿಸ್ತಾರವಾಗಿ ವಿವರಣೆ ನೀಡಿದರು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪಸ್ರ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಆಶಿರ್ವಚಿಸಿದರು. ಕುಂದಾಪುರ ಚರ್ಚಿನ ಪಾಲನಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರು. ಕೋಟೇಶ್ವರ ಚರ್ಚಿನ ಧರ್ಮಗುರು ವಂ|ಸಿರಿಲ್ ಮಿನೇಜೆಸ್ ಉಪಸ್ಥಿತರಿದ್ದರು. ಕುಂದಾಪುರ ವಲಯ ಎಲ್ಲಾ ಚರ್ಚಗಳ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಗುರಿಕಾರರು, ಸದಸ್ಯರು, ವಲಯದ ಕಥೊಲಿಕ್ ಸಭೆಯ ಎಲ್ಲಾ ಘಟಕಗಳ ಪದಾಧಿಕಾರಿಗಳು, ಸದಸ್ಯರು, ವಲಯದ ಘಟಕಗಳ ಕಥೊಲಿಕ್ ಸ್ತ್ರೀ ಸಂಘಟನೇಯ ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಧರ್ಮ ಭಗಿನಿಯರು ಹಾಜರಿದ್ದರು. ಕುಂದಾಪುರ ವಲಯ ಚರ್ಚ್‍ಗಳ ಪಾಲನ ಮಂಡಳಿ ಕಾರ್ಯದರ್ಶಿ ಲೀನಾ ತಾವ್ರೊ ಕಾರ್ಯಕ್ರಮವನ್ನು ನೆಡೆಸಿಕೊಟ್ಟು ವಂದಿಸಿದರು.