ಕೋವಿಡ್-19 ಪ್ರತಿಬಂದಕಾಜ್ಞೆ ಗೊಂದಲ ಬಗೆಹರಿಸಲು ಕಾಂಗ್ರೆಸ್‌ ಆಗ್ರಹ

JANANUDI.COM NETWORK

 

 

ಕೋವಿಡ್-19 ಪ್ರತಿಬಂದಕಾಜ್ಞೆ ಗೊಂದಲ ಬಗೆಹರಿಸಲು ಕಾಂಗ್ರೆಸ್‌ ಆಗ್ರಹ

 

 

ಕೋವಿಡ್-19 ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಕೇಂದ್ರ ಸರಕಾರವು ಸಾರ್ವಜನಿಕರ ಅನಾವಶ್ಯಕ ಚಲನವಲನ ನಿಯಂತ್ರಿಸಲು 21 ದಿನಗಳ ಕಾಲ ಪ್ರತಿಬಂಧಕಾಜ್ಞೆ ಜಾರಿಗೆ ತಂದಿರುತ್ತದೆ.ಪಡಿತರ, ದಿನಸಿ ಸಾಮಾನು , ಮೆಡಿಸಿನ್‌ , ಬ್ಯಾಂಕಿಂಗ್ ಹಾಗೂ ತುರ್ತು ಸೇವೆಗೆ ಅವಕಾಶ ಇದ್ದರೂ ಈ ಬಗ್ಗೆ ಪೋಲಿಸ್ ಇಲಾಖೆಗೆ ಸ್ಪಷ್ಟ ಮಾಹಿತಿ’ ನಿಡದ ಕಾರಣದಿಂದ ಉಡುಪಿ ಜಿಲ್ಲೆಯಲ್ಲಿ ಪೋಲಿಸರು ರಸ್ತೆಗೆ ಇಳಿದವರ ಮೇಲೆ ಅನಾವಶ್ಯಕವಾಗಿ ಲಾಠಿ ಪ್ರಹಾರ ಮಾಡುತ್ತಿದ್ದಾರೆ.

ದಿನಸಿ ಮತ್ತು ತರಕಾರಿ ಹೊಲಸೆಲ್ ಸಾಮಗ್ರಿಗಳ ವಿತರಕರು ಇದಕ್ಕೆ ಹೆದರಿ ಸರಬರಾಜು ಮಾಡಲು ಭಯ ಪಡುತ್ತಿದ್ದಾರೆ. ಅಗತ್ಯ ವಸ್ತುಗಳ ಅಂಗಡಿ ತೆರೆಯಲು ದಿನಕ್ಕೊಂದು ಸಮಯ ಬದಲಾಗುತ್ತಿದ್ದು , ಇದರಿಂದ ಗ್ರಾಮೀಣ ಪ್ರದೇಶದ ಗ್ರಾಹಕರು ಗೊಂದಲದಿಂದ್ದಾರೆ. ಸಾಮಾನುಗಳ ಬೆಲೆಯು ಜಾಸ್ತಿಯಾಗಿವೆ. ಇವೆಲ್ಲರಿಂದ ಭಯಭೀತರಾಗಿರುವ ಕೆಲವರು ಮೆಡಿಸಿನ್ ತರಲು ಕೂಡಾ ಹಿಂಜರಿಯುತ್ತಿದ್ದಾರ

ಜಿಲ್ಲೆಯ ಜನರು ಗೊಂದಲ ಮತ್ತು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು , ಸಂಸದರು , ಶಾಸಕರುಗಳು ಜನತೆಯ ಪರ ಸಹಾಯಕ್ಕೆ ನಿಲ್ಲಬೇಕು . ಜಿಲ್ಲೆಯ ಜನರ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಗೊಂದಲಗಳನ್ನು ನಿವಾರಿಸಬೇಕಾಗಿ  ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಂದಾಪುರ  ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ ಆಗ್ರಹಿಸಿದ್ದಾರೆ.