ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ: ಶಾಲಾ ಹಂತದಲ್ಲಿ ಮಕ್ಕಳಿಗೆ ದೇಶ ಭಕ್ತಿ ಮತ್ತು ಶಿಸ್ತು ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ದೊಡ್ಡದು – ಮದರ್ ಥೆರೆಸಾ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ
ಕೋಲಾರ: ಶಾಲಾ ಹಂತದಲ್ಲಿ ಮಕ್ಕಳಿಗೆ ದೇಶ ಭಕ್ತಿ ಮತ್ತು ಶಿಸ್ತು ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ದೊಡ್ಡದು ಎಂದು ಮದರ್ ಥೆರೆಸಾ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ ಹೇಳಿದರು. ನಗರದ ಮದರ್ ಥೆರೆಸಾ ಶಾಲೆಯಲ್ಲಿ ಭಾರತ ಸೇವಾದಳವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಭಾರತ ದೇಶ ಸ್ವಾತಂತ್ಯ್ರಗಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಶಾಲಾ ಮಕ್ಕಳು, ಯುವಕ ಯುವತಿಯರನ್ನು ಹೋರಾಟಕ್ಕೆ ಧುಮುಕುವಂತೆ ಮಾಡುವಲ್ಲಿ ಭಾರತ ಸೇವಾದಳ ದೊಡ್ಡ ಪಾತ್ರವಹಿಸಿದ್ದು, ಈಗ ಶಾಲಾ ಮಕ್ಕಳಿಗೆ ಶಿಸ್ತು, ಸೌಹಾರ್ದತೆ, ಭಾವೈಕ್ಯತೆ, ಸಮಾನತೆ, ದೇಶ ಭಕ್ತಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕುರಿತು ಅಭಿಮಾನ ಗೌರವ ಮೂಡಿಸುವ ಕಾರ್ಯದಲ್ಲಿ ಉತ್ತಮ ಕಾರ್ಯ ಸಲ್ಲಿಸುತ್ತಿದೆಯೆಂದರು.ಮೂವತ್ತು ವರ್ಷಗಳಹಿಂದೆ ತಾವು ಭಾರತ ಸೇವಾದಳದ ಆಕರ್ಷಣೆಗೊಳಗಾಗಿ ಸಮಾಜ ಸೇವಾ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿದ್ದು, ಅಂದಿನಿಂದ ಇಂದಿನವರೆವಿಗೂ ಬಿಳಿ ಬಟ್ಟೆಗಳನ್ನು ತೊಡುವಂತೆ ಪ್ರೇರೇಪಿಸಿದೆಯೆಂದರು.
ಮದರ್ ಥೆರೆಸಾ ಶಾಲೆಯಲ್ಲಿ ಭಾರತ ಸೇವಾದಳದ ಘಟಕವನ್ನು ಆರಂಭಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕರ್ನಾಟಕದ ನಾ.ಸು.ಹರ್ಡೀಕರ್ರಿಂದ ಸ್ಥಾಪಿಸಲ್ಪಟ್ಟ ಹಿಂದೂಸ್ತಾನ್ ಸೇವಾದಳ ಸಂಘಟನೆಯು ಸ್ವಾತಂತ್ರ್ಯ ನಂತರ ರಾಜಕೀಯ ರಹಿತ ಸಂಘಟನೆಯಾಗಿ ಭಾರತ ಸೇವಾದಳವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಾಲಾ ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸುವ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಿದೆಯೆಂದರು.
ಜಿಲ್ಲಾ ಭಾರತ ಸೇವಾದಳ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಸುಭಾಷ್ ಚಂದ್ರಬೋಸ್ರ ಸಹವರ್ತಿಯಾಗಿದ್ದ ಐ.ಎನ್.ಎ ರಾಮರಾವ್, ಜಾಫರ್ ಷರೀಫ್ ಮತ್ತಿತರರು ಭಾರತ ಸೇವಾದಳವನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ವಿವರಿಸಿದರು.
ಶಾಲಾ ಮುಖ್ಯ ಶಿಕ್ಷಕ ಹನುಮಪ್ಪ ಮಾತನಾಡಿ, ಭಾರತ ಸೇವಾದಳವತಿಯಿಂದ ತಮ್ಮ ಶಾಲೆಯ ಮಕ್ಕಳಿಗೆ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಕುರಿತು ಮಾಹಿತಿ ನೀಡುತ್ತಿರುವುದು ಸಂತಸ ತಂದಿದೆಯೆಂದರು.
ಭಾರತ ಸೇವಾದಳದ ಸಂಘಟಕ ದಾನೇಶ್, ಶಾಲಾ ಮಕ್ಕಳಿಗೆ ಸುಮಾರು ಒಂದು ಗಂಟೆ ಅವ„ಯಲ್ಲಿ ರಾಷ್ಟ್ರ ಧ್ವಜವನ್ನು 1906 ರಿಂದ 1947 ರವರೆಗೂ ಸುಮಾರು 7 ಧ್ವಜಗಳನ್ನು ರಾಷ್ಟ್ರಧ್ವಜವಾಗಲು ಹಂತ ಹಂತವಾಗಿ ರೂಪಿಸಲಾಗಿದೆ. ಅಂತಿಮವಾಗಿ 1931 ರಲ್ಲಿ ಆಂಧ್ರಪ್ರದೇಶದ ಮಚಲೀಪಟ್ಟಣದ ಪಿಂಗಳಿ ವೆಂಕಯ್ಯ ಅವರು ತ್ರಿವರ್ಣ ಧ್ವಜ, ಮಧ್ಯ ಭಾಗದಲ್ಲಿ ನೂಲು ತೆಗೆಯುವ ಚರಕವನ್ನು ರೂಪಿಸಿದ್ದರು. ಆನಂತರ 1947 ಜುಲೈ 22 ರಂದು ತ್ರಿವರ್ಣ ಧ್ವಜ ಮಧ್ಯ ಭಾಗದಲ್ಲಿ ಅಶೋಕ ಚಕ್ರವುಳ್ಳ ಇಂದಿನ ರಾಷ್ಟ್ರಧ್ವಜವನ್ನು ಅಂಗೀಕರಿಸಲಾಯಿತೆಯೆಂದು ವಿವರಿಸಿದರು.
ರಾಷ್ಟ್ರ ಧ್ವಜವನ್ನು ಹಾರಿಸುವ, ಮಡಚುವ ವಿಧಾನ, ಸಂಗ್ರಹಿಸಿಡುವ ಪದ್ಧತಿ, ಆರೋಹಣ, ಅವರೋಹಣ ಸಂಪ್ರದಾಯ, ಹಾಡಬೇಕಾದ ಗೀತೆಗಳು ಮತ್ತಿತರ ವಿಚಾರಗಳನ್ನು ಮಕ್ಕಳಿಗೆ ತರಬೇತಿ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾ„ಕಾರಿ ಜೈದೀಪ್ ಭಾಗವಹಿಸಿದ್ದರು.