ವರದಿ: ಶಬ್ಬೀರ್ ಅಹ್ಮದ್
ಕೋಲಾರ – ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸಿ, ಪ್ರಜಾಪ್ರಭುತ್ವವವನ್ನು ಉಳಿಸಬೇಕೆಂದು ರೈತ ಸಂಘ ಮನವಿ
ಕೋಲಾರ, ಮೇ.02: ರಾಜ್ಯದಲ್ಲಿ ತೀವ್ರವಾದ ಬರಗಾಲದ ಜೊತೆಗೆ ಆಲಿಕಲ್ಲು ಮಳೆಯಿಂದ ಸಂಪೂರ್ಣ ಬೆಳೆ ನಾಶವಾಗಿದ್ದರೂ ಅದರ ಕಡೆ ಗಮನಹರಿಸಬೇಕಾದ ಸಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಮತ್ತು ಶಾಸಕರು ರೆಸಾರ್ಟ್‍ನಲ್ಲಿ ಮೋಜಿ ಮಸ್ತಿಯಲ್ಲಿ ತೊಡಗಿದ್ದು, ಜನಸಾಮಾನ್ಯರ ಸಮಸ್ಯೆಗಳನ್ನು ಮರೆತಿರುವ ಸರ್ಕಾರವನ್ನು ವಜಾಗೊಳಿಸಿ, ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸಿ, ಪ್ರಜಾಪ್ರಭುತ್ವವವನ್ನು ಉಳಿಸಬೇಕೆಂದು ಮೆಕ್ಕೆ ವೃತ್ತದಲ್ಲಿ ಸಮ್ಮೀಶ್ರ ಸರ್ಕಾರದ ಭೂತ ದಹನ ಮಾಡಿ ಉಪ ತಹಶೀಲ್ದಾರ್ ಹೇಮಾವತಿರವರ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ರಾಜ್ಯದಲ್ಲಿ ತೀವ್ರವಾದ ಬರಗಾಲಕ್ಕೆ ಸಿಲುಕಿ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮತ್ತು ಮೇವಿಗಾಗಿ ಆಹಾಕಾರ ವಿದ್ದು, ಜನರಿಗೆ ಉದ್ಯೋಗವಿಲ್ಲದೆ ಜಾನುವಾರುಗಳನ್ನು ಸಂತೆಗಳಲ್ಲಿ ಕಟುಕರ ಕೈಗೆ ಕೇಳಿದ ಬೆಲೆಗೆ ನೀಡಿ ತಮ್ಮ ಜೀವನ ನಿರ್ವಹಣೆಗಾಗಿ ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಸಮರ್ಪಕವಾಗಿ ಜಾರಿಯಾಗದ ಉದ್ಯೋಗ ಖಾತ್ರಿಯೋಜನೆ ಹಾಗೂ ಬರಗಾಲದ ಅನುದಾನಗಳು ಇದರ ಜೊತೆಗೆ ಸಮರ್ಪಕವಾಗಿ ಬರಗಾಲ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಒತ್ತಡದಲ್ಲಿ ಸಂಪೂರ್ಣವಾಗಿ ಜನರ ಸಮಸ್ಯೆಗಳನ್ನು ಮರೆತಿರುವ ಸಮಯದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಬಿರುಗಾಳಿ ಮತ್ತು ಆಲಿಕಲ್ಲು ಮಳೆಗೆ ಸಂಪೂರ್ಣವಾಗಿ ಕೈಗೆ ಬಂದ ಬೆಳೆ ನಾಶವಾಗುತ್ತಿದೆ. ತೀವ್ರವಾದ ಸಮಸ್ಯೆಗಳಿಂದ ಬಳಲುತ್ತಿರುವ ರಾಜ್ಯದ ಜನರ ಕಷ್ಟಸುಖಕಕ್ಕೆ ಸ್ಪಂಧಿಸಬೇಕಾದ ಸಮಿಶ್ರ ಸರ್ಕಾರ ಹಗ್ಗಾಜಗ್ಗಾಟ ಒಂದು ಕಡೆಯಾದರೆ, ಮತ್ತೊಂದು ಕಡೆ ಆರುವರೆ ಕೋಟಿ ಜನ ಸಂಖ್ಯೆಯ ಪ್ರಥಮ ಪ್ರಜೆಯಾದ ಮಾನ್ಯ ಮುಖ್ಯ ಮಂತ್ರಿಗಳ ಜನರ ಸಮಸ್ಯೆಗಳಿಗೆ ಸ್ಪಂಧಿಸದೆ ರೆಸಾರ್ಟ್ ರಾಜಕಾರಣ ಜೊತೆಗೆ ಮೋಜಿ ಮಸ್ತಿಯಲ್ಲಿ ಸರ್ಕಾರ ಮತ್ತು ಶಾಸಕರು ತೊಡಗಿರುವುದು ರಾಜ್ಯದ ಜನರ ಆಕ್ರೋಷಕ್ಕೆ ತುತ್ತಾಗಿದ್ದಾರೆ. ಮತ್ತೊಂದಡೆ ಜನರ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ದುಡಿಯಬೇಕಾದ ಸರ್ಕಾರಗಳು ಇಂದು ಹಣದಿಂದ ಹಣಕ್ಕಾಗಿ, ಹಣಕ್ಕೋಸರ ಮಾತುಬರದ ಮೂಕ ಪ್ರಾಣಿಗಳಂತೆ ಬೀದಿ ಜಗಳವಾಡಿಕೊಂಡು, ಪ್ರಜಾಪ್ರಭುತ್ವವವನ್ನು ಕಗ್ಗೋಲೆಮಾಡಿ ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಬಲಿಪಶು ಮಾಡಿಕೊಳ್ಳುತ್ತಿರುವ ಸಮಿಶ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗಳಿಸಿ, ಜನರ ಸಮಸ್ಯೆಗಳಿಗೆ ಸ್ಪಂಧಿಸಬೇಕು ಹಾಗೂ ಪ್ರಜಾಪ್ರಭುತ್ವವನ್ನು ಆಳು ಮಾಡುತ್ತಿರುವ 224 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಅಗ್ರಹಿಸಿದರು.
ಮನವಿ ನೀಡಿ ಮಾತನಾಡಿದ ಉಪ ತಹಶೀಲ್ದಾರ್ ಹೇಮಾವತಿ ಮಾತನಾಡಿ ನೀವು ಈ ಮನವಿ ಅನುಕೂಲಕರವಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ರಾಷ್ಟ್ರಪತಿಯವರಿಗೆ ಕಳುಹಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾದ್ಯಕ್ಷೆ ಎ.ನಳಿನಿ, ಬಂಗವಾದಿ ನಾಗರಾಜಗೌಡ, ಮುನಿಯಪ್ಪ, ಚಂದ್ರಪ್ಪ, ಕೆಂಬೋಡಿ ಕೃಷ್ಣೇಗೌಡ, ರಾಜೇಶ್, ಪುರುಷೋತ್ತಮ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಅಶ್ವತಪ್ಪ, ಬೇತಮಂಗಲ ಮಂಜುನಾಥ್, ವೆಂಕಟೇಶಪ್ಪ, ಚಿಕ್ಕಣ್ಣ, ಮುಂತಾದವರಿದ್ದರು,