ಕೋಲಾರ: ಭಾರತ ಫೌರತ್ವ ಕಾಯಿದೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ

 ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಕೋಲಾರ: ಭಾರತ ಫೌರತ್ವ ಕಾಯಿದೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ.

 

 

 

 ಭಾರತ ಪೌರತ್ವ ಕಾಯಿದೆಯ ಮೂಲ ಸ್ವರೂಪವನ್ನು ಅರ್ಥಮಾಡಿಕೊಳ್ಳದೆ ದಿವಾಳಿ ಅಂಚಿನಲ್ಲಿರುವ ಕಾಂಗ್ರೆಸ್ಸಿಗರು ಹಾಗೂ ಸ್ವಯಂ ಘೋಷಿತ ಬುದ್ದಿಜೀವಿಗಳು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗಳಿಗೆ ಪ್ರಚೋಧನೆ ನೀಡಿ ದೇಶದಲ್ಲಿ ಅಶಾಂತಿಯನ್ನುಂಟುಮಡುತ್ತಿದ್ದಾರೆ, ಇದಕ್ಕೆ ಕಾರಣಕರ್ತರಾದವರ ಮೇಲೆ ಕಾನೂನು ರೀತಿ ಕ್ರಮಜರುಗಿಸಬೇಕೆಂದು ವಿಧಾನಪರಿಷತ್ತಿನ ಸದಸ್ಯ ವೈ.ಎ.ನಾರಾಯಣಸ್ವಾಮಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ ಭಾರತ ಪೌರತ್ವ ಖಾಯಿದೆಯಿಂದ ಯಾವುದೇ ಸಮುಧಾಯದವರೆಗೆ ಅನ್ಯಾವಾಗುವುದಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚೆ ನಡೆದು ಖಾಯಿದೆಯನ್ನು ಅನುಷ್ಠಾನಗೊಳಿಸಲಗಿದೆ. ಶಾಸನ ಸಭೆಗಳಲ್ಲಿ ಚರ್ಚೆ ನಡೆಸಲು ಯೋಗ್ಯತೆ ಇಲ್ಲದವರು ಅಲ್ಪ ಸಂಖ್ಯಾತರನ್ನು ಓಲೈಸಿಕೊಳ್ಳಲು ಪ್ರತಿಭಟನೆಗಳಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಕಾಯಿದೆ 1977ರಲ್ಲಿ ಜಾರಿಗೆ ತಂದಿದ್ದು ಕೆಲವೊಂದು ತಿದ್ದುಪಡಿಗಳನ್ನು ಮಾತ್ರ ಮಾಡಲಾಗಿದೆ. ಇದರಿಂದ ಭಾರತದ ಯಾವುದೇ ನಾಗರೀಕರಿಗೆ ತೊಂದರೆಯಾಗುವುದಿಲ್ಲ. ವಿಶೇಷವಾಗಿ ಮುಸಲ್ಮಾನ ಬಂದುಗಳಿಗೆ ತೊಂದರೆ ಇಲ್ಲ. ಇಷ್ಟು ವರ್ಷಗಳ ಕಾಲ ಮುಸಲ್ಮಾನರನ್ನು ಓಟ್ ಬ್ಯಾಂಕ್‍ಗಾಗಿ ಬಳಸಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷ ಮುಳುಗುವ ಹಂತಕ್ಕೆ ತಲುಪಿರುವುದರಿಂದ ಉಸಿರಾಡಕೊಳ್ಳಲು ಈ ಕಾಯಿದೆಯ ವಿರುದ್ಧ ಅಪಪ್ರಚಾರ ನಡೆಸಿ ಅವರನ್ನು ಓಲೈಸಿಕೊಳ್ಳಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮಂಗಳುರಿನಲ್ಲಿ ನಡೆದ ಗಲಬೆಗೆ ಪಕ್ಕದ ಕೇರಳ ರಾಜ್ಯದಿಂದ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ. ಹಾಗೂ ಮಾಜಿ ಸಚಿವ ಯು.ಟಿ.ಖಾಧರ್ ರವರೇ ನೇರ ಹೊಣೆಗಾರರಾಗಿದ್ದಾರೆ. ಪೋಲೀಸರ ಶಸ್ತ್ರಾಸ್ತ್ರಗಳನ್ನು ಕದಿಯಲು ಹಾಗೂ ಪೋಲೀಸ್ ವಾಹನಗಳಿಗೆ ಬೆಂಕಿ ಹಚ್ಚುವುದು ಮತ್ತು ಕಲ್ಲು ತೂರಾಟ ನಡೆಸಿದರೆ ಪೋಲೀಸರು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವೇ? ಈ ಗಲಭೆಗಳಿಗೆ ನೇರಹೊಣೆಗಾರರು ಕಾಂಗ್ರೆಸ್ಸಿನವರೆ ಆಗಿದ್ದಾರೆ. ಇವರಿಂದ ಇಬ್ಬರು ಅಮಾಯಕರು ಜೀವ ಕಳೆದುಕೊಳ್ಳ ಬೇಕಾಯಿತು ಎಂದು ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡ ವೈಎಎನ್ ರಾಜಕಾರಣ ಮಾಡಬೇಕು ಆದರೆ ಇಂತಹ ಸಂದರ್ಭಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಬಾರದು, ಮಂಗಳೂರಿನಲ್ಲಿ ಕಫ್ರ್ಯೂ ಇದ್ದರೂ ಬುದ್ದಿಜೀವಿಗಳು ಎನಿಸಿಕೊಂಡವರು ಮಂಗಳೂರಿಗೆ ಬೇಟಿ ನೀಡುವುದು ಎಷ್ಟು ಸಮಂಜಸ ಎಂದು ಪ್ರೆಶ್ನಿಸಿ ಯಾರ ಹೆಸರನ್ನೂ ಹೇಳದೆ ಬುದ್ದಿಜೀವಿಗಳು ಹಾಗೂ ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎ.ಎನ್.ಜಯರಾಮರೆಡ್ಡಿ, ಕೊಟ್ರಗೂಳಿ ನಾರಾಯಣಸ್ವಾಮಿ, ಬಂಗವಾದಿ ನಾಗರಾಜ್, ಬಲ್ತಮರಿ ರೆಡ್ಡಪ್ಪ, ದೇವಲಪಲ್ಲಿ ರಘು, ನಂಜುಂಡಗೌಡ, ರಮೇಶ್, ಕಲ್ಲೂರು ಶ್ರೀನಾಥ್‍ಬಾಬು ಇತರರು ಉಪಸ್ಥಿತರಿದ್ದರು.