ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ: ದೇಶದ ಪ್ರತಿ ಪ್ರಜೆಯೂ ಹೆಮ್ಮೆ ಪಡುವ ಕಾರ್ಗಿಲ್ ವಿಜಯ ದಿನ – ರೈತ ಸಂಘ
ಕೋಲಾರ: ದೇಶದ ಪ್ರತಿ ಪ್ರಜೆಯೂ ಹೆಮ್ಮೆ ಪಡುವ ಕಾರ್ಗಿಲ್ ವಿಜಯ ದಿನವನ್ನು ರೈತ ಸಂಘದಿಂದ ದೇಶಕ್ಕೆ ಅನ್ನ ಹಾಕುವ ರೈತರ ತೋಟದಲ್ಲಿ ಗಿಡ ನೆಡುವ ಮುಖಾಂತರ ಆಚರಣೆ ಮಾಡಿ ವೀರ ಯೋದರನ್ನು ಸ್ಮರಣಿಸುತ್ತಾ ಸೈನಿಕ ಮತ್ತು ರೈತರನ್ನು ಒಂದೇ ದೇಹದ ಎರಡು ಕಣ್ಣುಗಳಂತೆ ರಕ್ಷಣೆ ಮಾಡಬೇಕೆಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಸರ್ಕಾರಗಳಿಗೆ ಕಿವಿ ಮಾತು ಹೇಳಿದರು.
ಗಿಡ ನೆಟ್ಟು ಮಾತನಾಡಿದ ಹಿರಿಯ ಪ್ರಗತಿಪರ ರೈತ ಆಂಜಿನಪ್ಪ ಬದ್ದ ವೈರಿಗಳ ಜೊತೆ ಸೆಣಸಾಡಿ 1999ರ ಮೇ ಜುಲೈ ತಿಂಗಳಲ್ಲಿ ನಡೆದ ಯುದ್ದದಲ್ಲಿ ಭಾರತಕ್ಕೆ ಜಯ ತಂದುಕೊಟ್ಟ ಎಲ್ಲಾ ನಮ್ಮ ದೇಶದ ಸೈನಿಕ ಅಣ್ಣ ತಮ್ಮಂದಿರಿಗೆ ಕೋಟಿ ಕೋಟಿ ನಮನಗಳು ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾನೆಂಧರೆ ಅದಕ್ಕೆ ಕಾರಣ ನಮ್ಮನ್ನು ಚಳಿ, ಗಾಳಿ, ಮಳೆಗೆ ಅಂಜದೆ ದೈರ್ಯದಿಂದ ಗಡಿ ಕಾಯುತ್ತಿರುವ ಸೈನಿಕರು ಸಾಹಸ ಮೆರೆದು ಎದುರಾಳಿಗಳ ಎದೆ ನಡುಗಿಸುವ ನಮ್ಮ ಹೆಮ್ಮೆಯ ಸೈನಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗದ ರೀತಿ ಗೌರವಿಸಬೇಕಾದ ಜವಬ್ದಾರಿ ನಮ್ಮನ್ನಾಳುವ ಸರ್ಕಾರಗಳ ಮೇಲಿದೆ.
ಇಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋದರ ಕುಟುಂಬಗಳನ್ನು ಸರ್ಕಾರಗಳು ನಿರ್ಲಕ್ಷೆ ಮಾಡುತ್ತಿವೆ. ಕೊಟ್ಟ ಮಾತಿನ ಆಶ್ವಾಸನೆಗಳು ಈಡೇರುತ್ತಿಲ್ಲವೆಂಬುದು ವಿಷಾಧನೀಯ, ಎಂಧು ಸರ್ಕಾರಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಸರ್ಕಾರ ಸೈನಿಕರನ್ನು ಮತ್ತು ರೈತರನ್ನು ಗೌರವದಿಂದ ಕಂಡು ಯಾವುದೇ ಕಾರಣಕ್ಕೂ ನಿರ್ಲಕ್ಷೆ ಮಾಡಬಾರದು ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡುವ ಕಾರ್ಗಿಲ್ ವಿಜೋತ್ಸವದ ದಿನವನ್ನು ದೇಶದ ಹಬ್ಬದ ಜೊತೆಗೆ ಪ್ರತಿಯೊಂದು ಮನೆಯಲ್ಲೂ ಹಬ್ಬದ ರೀತಿ ಆಚರಣೇ ಮಾಡಬೇಕೆಂದು ಸಲಹೆ ನೀಡಿದರು.ಈ ನೀಯೋಗದಲ್ಲಿ ಉಮಾಗೌಡ, ನಾಗರಾಜ್, ಸುನೀತಾ, ರತ್ನಮ್ಮ, ಸೃಷ್ಠಿ, ರೋಜ, ಮಂಜುಳಾ, ಕೋಮಲ, ನಾಗಮ್ಮ, ಮುಂತಾದವರಿದ್ದರು.