ಕೋಲಾರ ಜಿಲ್ಲೆಯಿಂದ ವರ್ಗಾವಣೆಯಾದರೂ ನಿಮ್ಮಗಳ ಮತ್ತು ಜನತೆ ತೋರಿರುವ ಪ್ರೀತಿ ವಿಶ್ವಾಸ ಭಾಂದ್ಯವಗಳನ್ನು ಹಾಗೂ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ : ನಿರ್ಗಮಿತ ಜಿಲ್ಲಾಧಿಕಾರಿ ಜೆ.ಮಂಜುನಾಥ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ ಜಿಲ್ಲೆಯಿಂದ ವರ್ಗಾವಣೆಯಾದರೂ ನಿಮ್ಮಗಳ ಮತ್ತು ಜನತೆ ತೋರಿರುವ ಪ್ರೀತಿ ವಿಶ್ವಾಸ ಭಾಂದ್ಯವಗಳನ್ನು ಹಾಗೂ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ : ನಿರ್ಗಮಿತ ಜಿಲ್ಲಾಧಿಕಾರಿ ಜೆ.ಮಂಜುನಾಥ್

 

 

 

ಕೋಲಾರ,ಮಾ,22- ಕೋಲಾರ ಜಿಲ್ಲೆಯಿಂದ ವರ್ಗಾವಣೆಯಾದರೂ ನಿಮ್ಮಗಳ ಮತ್ತು ಜನತೆ ತೋರಿರುವ ಪ್ರೀತಿ ವಿಶ್ವಾಸ ಭಾಂದ್ಯವಗಳನ್ನು ಹಾಗೂ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ರಾಜ್ಯ ಮಟ್ಟದ ಯಾವೂದೇ ಹುದ್ದಗೆ ಹೋದರೂ ಕೋಲಾರ ಅಭಿವೃದ್ದಿಗೆ ಪ್ರಥಮ ಅದ್ಯತೆ ನೀಡುವುದಾಗಿ ನಿರ್ಗಮಿತ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭರವಸೆ ನೀಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ಬೀಳ್ಗೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಜಿಲ್ಲೆಯ ಜನತೆಯು ನೀಡಿದ ಸಹಕಾರದಿಂದ ಅನೇಕ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ಸಾಧ್ಯವಾಯಿತು. ಕಳೆದ ಒಂದೂವರೆ ವರ್ಷದ ಆಡಳಿತವು ಅನೇಕ ಅನುಭವಗಳನ್ನು ನೀಡಿದ್ದು ಇದರಿಂದ ಹೆಚ್ಚಿನ ಜ್ಞಾನ ಹೊಂದಲು ಪೂರಕವಾಯಿತು ಎಂದರು.
ಕೋಲಾರವು ರಾಜಧಾನಿ ಬೆಂಗಳೂರಿಗೆ ಸಮೀಪವಾಗಿದ್ದರೂ ನಿರೀಕ್ಷಿತ ಅಭಿವೃದ್ದಿಯಲ್ಲಿ ಹಿನ್ನಡೆ ಕಂಡು ಬರುತ್ತಿದ್ದರಿಂದ ಕೈಗಾರಿಕೆಗಳಿಗೆ ಹೆಚ್ಚಿನ ನೀಡಲಾಯಿತು. ಇವುಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡಲಾಯಿತು. ಶಾಂತಿ ಸುವ್ಯವಸ್ಥೆಗಳು ಸಮರ್ಪಕವಾಗಿದ್ದಲ್ಲಿ ಕೈಗಾರಿಕೆಗಳು ಬರಲು ಹಾಗಾಗಿ ವಿಶೇಷ ನಿಗವಹಿಸಿ ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಯಿತು ಎಂದು ಹೇಳಿದರು.
ಉತ್ತಮ ಆಡಳಿತ ನಿರ್ವಹಣೆಗೆ ಅಧಿಕಾರಿಗಳ ವಿಶ್ವಾಸ ಪಡೆಯ ಬೇಕು. ಪ್ರೀತಿಯಿಂದ ಮಾತನಾಡಿ ಅವರಿಂದ ಕೆಲಸ ಪಡೆಯ ಬೇಕು. ಉತ್ತಮ ಕೆಲಸಗಳನ್ನು ನಿರ್ವಹಿಸಿದಾಗ ಅವರನ್ನು ಶ್ಲಾಘಿಸುವ ಮೂಲಕ ಉತ್ತೇಚಿಸಿದರೆ ತಮ್ಮ ಕರ್ತವ್ಯದಲ್ಲಿ ಹೆಚ್ಚಿನ ಕಾಳಜಿವಹಿಸುತ್ತಾರೆ ಈ ಮೂಲಕ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ನಿಭಾಯಿಸಲು ಸಾಧ್ಯವಾಗುತ್ತೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಧಿಕಾರ ವಹಿಸಿ ಕೊಂಡ ನಂತರ ಸಂಸತ್ ಚುನಾವಣೆ, ಡಿಸಿಸಿ ಬ್ಯಾಂಕ್ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಆರೋಗ್ಯ ಇಲಾಖೆಯ ಅಭಿವೃದ್ದಿಗೆ ಒತ್ತು ನೀಡಿರುವುದರಿಂದ ಪ್ರಶಸ್ತಿಗಳು ಗಳಿಸಲು ಸಾಧ್ಯವಾಯಿತು, 100 ಹಾಸಿಗೆಯ ಆಸ್ಪತ್ರೆ, ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಅನುಷ್ಠನ, ಯರ್‍ಗೋಳ್ ಯೋಜನೆ, ಚೆಕ್‍ಡ್ಯಾಮ್‍ಗಳ ನಿರ್ಮಾಣ, 16 ಎಕರೆ ಜಮೀನು ಕ್ರಿಕೆಟ್ ಸ್ಟೇಡಿಯಂಗೆ ಮಂಜೂರಾತಿ , ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲಾದ ಪ್ರಕರಣಗಳ ಕಂದಾಯ ಇಲಾಖೆಯ ಪಿ. ನಂಬರ್, ಗಣೇಶೋತ್ಸವ, ಸಿ.ಎ.ಎ ಪ್ರತಿಭಟನೆಯ ಘಟನಾವಳಿಗಳು, ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ, ಉದ್ಯೋಗ ಮೇಳ ಯಶಸ್ವಿಗೊಳಿಸಲಾಯಿತು ಎಂದರು.
ಟೋರಿಸಂ ಇಲಾಕೆಯಲ್ಲಿ 111 ಮಂದಿಗೆ ಟ್ಯಾಕ್ಸಿ ಮಂಜೂರಾತಿ, ಹಳೇ ಡಿಸಿ ಕಚೇರಿಯನ್ನು ಮ್ಯೂಸಿಯಂ, ಹಲಸು 49 ತಳಿಗಳ ಮೇಳ, ಮಾವು ಮೇಳಾ, ನರಸಾಪುರ, ಕೋಲಾರಮ್ಮ ಕೆರೆಯ ಜೂತೆಗೆ ಈಗಿನ ಡಿಸಿ ಕಚೇರಿ ಹಿಂಭಾದ ಕೆರೆಯಲ್ಲಿ ಬೋಟಿಂಗ್ ಉದ್ಯಾನವನ, ವಾಕಿಂಗ್ ಪಾಥ್, ನಗರದ ಸ್ಟೇಡಿಯಂ ಅಭಿವೃದ್ದಿ, ಅಮೃತ ಯೋಜನೆಯಡಿ ಯು.ಜಿ.ಡಿ. ಯರ್‍ಗೋಳ್ ಪೈಪುಗಳ ಅಳವಡಿಕೆ, ರಸ್ತೆಗಳ ಅಭಿವೃದ್ದಿ ಟೆಂಡರ್ ಸಹ ಅಗಿತ್ತು ಅದರೆ ನೆರೆಹಾವಳಿಯಿಂದಾಗಿ ನೆನಗುದಿಗೆ ಬಿದ್ದಿತು. ಕಂದಾಯ ಇಲಾಖೆಯಲ್ಲಿದ್ದ ಖಾಲಿ ಹುದ್ದಗಳ ಭರ್ತಿ, ಮುಂತಾದ ಸಾಧನೆಗಳನ್ನು ವಿವರಿಸಿದರು.
ನೂತನ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸ್ವಾಗತ ಸಮಾರಂಭದಲ್ಲಿ ಮಾತನಾಡಿ ಜಿಲ್ಲೆಯ ಜನತೆ ಒರಟಾದರೂ ಪ್ರೀತಿ, ವಿಶ್ವಾಸಗಳು ಅಪಾರವಾಗಿದೆ ಎಂಬುವುದನ್ನು ಈ ಹಿಂದೆ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ನಿಧನರಾದಗ ಟಿ.ವಿ.ಗಳಲ್ಲಿ ಅದನ್ನು ಕಂಡೆ ಎಂದು ನೆನಪಿಸಿದರು.
ಜಿಲ್ಲೆಯ ಜನತೆಯು ಡಿ.ಕೆ.ರವಿ ಅವರ ಮೇಲೆ ಇಟ್ಟಿದ್ದ ಪ್ರೀತಿ ವಿಶ್ವಾಸಗಳು ಜಿಲ್ಲೆಯ ಇತಿಹಾಸದಲ್ಲಿ ಅವಿಸ್ಮರಣೆಯ ಸಂಗತಿಯಾಗಿದೆ. ಅದೇ ರೀತಿ ಜೆ,.ಮಂಜುನಾಥ್ ಅವರು ಜನಪರ ಕೆಲಸಗಳನ್ನು ಮಾಡಿ ಜನಪ್ರಿಯರಾಗಿದ್ದಾರೆ ಎಂಬುವುದು ಜನತೆಯು ತೋರುತ್ತಿರುವ ಪ್ರೀತಿ, ವಿಶ್ವಾಸಗಳಿಂದ ಅರಿತಿರುವೆ ಅವರು ತೋರಿದ ಮಾರ್ಗದರ್ಶನದಲ್ಲಿ ನನ್ನ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತೇನೆಂದರು.
ಜಿಲ್ಲೆಯಲ್ಲಿ ಪ್ರಮುಖವಾಗಿ ನೀರಿನ ಸಮಸ್ಯೆ ಒಂದು ಸವಾಲು ಅಗಿದೆ. ಜೂತೆಗೆ ದರಖಾಸ್ತು, ಪೋಡಿಗಳ ಸಮಸ್ಯೆಗಳು ಬಗೆ ಹರಿಸುವುದು ಸುಲಭವಾದ ಕೆಲಸವಲ್ಲ,ಕೆ.ಸಿ.ವ್ಯಾಲಿ ಸಂಸ್ಕರಣ ನೀರನ್ನು ಕೆರೆಗಳಿಸುತ್ತಿರುವ ಉದ್ದೇಶ ಅಂತರ್ಜಲ ಅಭಿವೃದ್ದಿಯಾಗಿದ್ದು ಅದನ್ನು ಸದ್ಬಳಿಸಿ ಕೊಳ್ಳ ಬೇಕು. ಜಿಲ್ಲೆಗೆ 440 ಎಂ.ಎಲ್.ಡಿ. ನೀರು ಹರಿಸ ಬೇಕಾಗಿದೆ. ಪರಿಸರ ಅಭಿವೃದ್ದಿಗೆ ಹೆಚ್ಚು ಗಿಡಮರಗಳನ್ನು ಬೆಳೆಸ ಬೇಕು, ಕೆರೆ, ಕಾಲುವೆ, ಸರ್ಕಾರಿ ಜಾಗಗಳ ಒತ್ತುವರಿಯನ್ನು ತೆರವು ಮಾಡುವುದು, ಪ್ಲಾಸ್ಟಿಕ್ ನಿರ್ಮೂಲನೆ, ಸ್ವಚ್ಚ ಶನಿವಾರ ಜಾರಿಗೆ ತರ ಬೇಕು. ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆ ಹರಿಸ ಬೇಕಾಗಿರುವುದನ್ನು ಸವಾಲಾಗಿ ಸ್ವೀಕರಿಸಿ ಎಲ್ಲರ ಸಹಕಾರದಿಂದ ಮತ್ತು ಹಿರಿಯ ಜಿಲ್ಲಾಧಿಕಾರಿ ಮಂಜುನಾಥ್ ಮುಂತಾದವರ ಮಾರ್ಗದರ್ಶನದಲ್ಲಿ ಜನಪರವಾಗಿ ಪಾರದರ್ಶಕ ಆಡಳಿತ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿ.ಇ.ಓ. ದರ್ಶನ್ ಮಾತನಾಡಿ ಮಾದ್ಯಮಗಳು ಟೀಕೆಯ ಟಿಪ್ಪಟಣೆಗಳ ಜೂತೆಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುತ್ತಿರುವುದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಾದರಿಯಾಗಿದೆ. ಇದರಿಂದ ಇನ್ನು ಹೆಚ್ಚಿನ ಕೆಲಸ ಮಾಡಲು ಉತ್ಸಾಹ ತುಂಬಿದಂತಾಗುವುದು. ಅನೇಕ ವಿಷಯಗಳ ಮಾಹಿತಿಯನ್ನು ನೀಡುವ ಮೂಲಕ ಉತ್ತಮ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ. ಕಾನೂನು ವ್ಯಾಪ್ತಿಯಲ್ಲಿ ಕೆಲಸ ನಿರ್ವಹಣೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಮೊಬೈಲ್ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗದು, ಇಂಥಹ ಸಂಧರ್ಭದಲ್ಲಿ ಮೇಸೇಜ್, ವಾಟ್ಸಆ್ಯಪ್ ಮಾಡಿ ಬಿಡುವಿನ ನಂತರ ಅದಕ್ಕೆ ಉತ್ತರಿಸಲು ಸಾಧ್ಯವಾಗತ್ತೆ ಇದನ್ನು ಯಾರು ಅನ್ಯತಾ ಭಾವಿಸಬಾರದು ಎಂದು ಹೇಳಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಇದ್ದಾಗ ನನಗೆ ಯಾವೂದೇ ಸಮಸ್ಯೆಗಳು ನಿಭಾಯಿಸಲು ಧೈರ್ಯವಿತ್ತು ಅವರ ಮಾರ್ಗದರ್ಶನ ನನಗೆ ಧೈರ್ಯ ಸ್ಥರ್ಯ ತುಂಭುತ್ತಿತ್ತು. ಅವರ ಅಗಲಿಕೆ ನಿಮ್ಮಂತೆ ನನಗೂ ನೋವುಂಟಾಗಿದೆ. ಅವರು ಎಲ್ಲೆ ಇದ್ದರೂ ಸಂರ್ಪಕದಲ್ಲಿದ್ದು ಅವರ ಸಲಹೆಗಳನ್ನು ಪಡೆದು ಮುಂದುವರೆಯುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಶಾಸಕ ಕೆ.ವೈ.ನಂಜೇಗೌಡರು ಕಾರ್ಯಕ್ರಮಕ್ಕೆ ಅಗಮಿಸಿ ನಿಕಟಪೂರ್ವ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಪುಷ್ಪಗುಚ್ಚ ನೀಡಿ ನಿಮ್ಮನ್ನು ಉಳಿಸಿ ಕೊಳ್ಳಲು ಸಾಧ್ಯವಾಗದೆ ಹೋದದ್ದು ನೋವಿನ ವಿಷಾಯವಾಗಿದೆ. ಅದರೆ ನೀವು ಮಾಡಿರುವ ಜನಪರ ಕಾರ್ಯಗಳನ್ನು ನಮ್ಮ ಕ್ಷೇತ್ರದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಹಲವಾರು ವರ್ಷಗಳಿಂದ ಜನತೆ ಹಣ ಕಟ್ಟಿದ್ದರೂ ನಿವೇಶಗಳು ಮಂಜೂರಾತಿ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿದ್ದವರ ಸಮಸ್ಯೆಯನ್ನು ಬಗೆಹರಿಸಿ 1200 ಮಂದಿಗೆ ನಿವೇಶ ಮಂಜೂರಾತಿ ನೀಡಿದರು. ಟೇಕಲ್‍ನಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ 39.5 ಎಕರೆ ಜಮೀನು ಮಂಜೂರಾತಿ, ಚಿಕ್ಕತಿರುಪತಿ ಮತ್ತು ಶಿವಾರ ಪಟ್ಟಣದ ಅಭಿವೃದ್ದಿಗೆ ಮಂಜುನಾಥ್ ಅವರ ಕೊಡುಗೆ ಅಪಾರವಾಗಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಯಾವುದೇ ಅಧಿಕಾರಿಗಳು ಕೋಲಾರಕ್ಕೆ ಬಂದಾಗ ಮತ್ತು ಇಲ್ಲಿಂದ ವರ್ಗಾವಣೆ ಆದಾಗ ಪತ್ರಕರ್ತರ ಸಂಘದಿಂದ ಅಭಿನಂದನೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಪದ್ದತಿ ಹಿಂದಿನಿಂದಲೂ ನಡೆಸಿಕೊಂಡು ಬರುವುದು ವಾಡಿಕೆಯಲ್ಲಿದೆ. ಅದೇ ಹಾದಿಯಲ್ಲಿ ಇಂದು ನಿರ್ಗಮಿತ ಜಿಲ್ಲಾಧಿಕಾರಿ ಜೆ.ಮಂಜುನಾಥ್, ನೂತನ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಸಿ.ಇ.ಓ ದರ್ಶನ್ ರವರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ ಎಂದರು.
ಯಾವುದೇ ಅಧಿಕಾರಿ ತಮ್ಮ ಅಧಿಕಾರಾವಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿ ಜನ ಸಾಮಾನ್ಯರ ಕೆಲಸಗಳಿಗೆ ಸ್ಪಂದಿಸಿ ಜನರು ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಮಾಡಿದಾಗ ಮಾತ್ರ ಸಾರ್ಥಕತೆ ಎಂದ ಅವರು ಹಿಂದಿನ ಜಿಲ್ಲಾಧಿಕಾರಿಗಳಾದ ಡಿ.ಕೆ.ರವಿ, ತ್ರಿಲೋಕಚಂದ್ರ, ಜೆ.ಮಂಜುನಾಥ್ ರವರ ಹಾದಿಯಲ್ಲಿ ನೂತನ ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ರವರು ಸಹ ಸಾಗುವಂತಾಗಲಿ ಎಂದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ.ಗೋಪಿನಾಥ್, ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್, ರಾಜೇಂದ್ರಸಿಂಹ, ರವಿಕುಮಾರ್, ಸಿ.ವಿ.ನಾಗರಾಜ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ಪತ್ರಕರ್ತ ಎಂ.ಜಿ.ಪ್ರಬಾಕರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಭಾಗವಹಿಸಿದ್ದರು.