ಕೋಲಾರ: ಜನ-ಮನ ಮೆಚ್ಚುವಂತೆ ಸ್ಥಬ್ದ ಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ ಕೆ.ಎಸ್.ಆರ್.ಟಿ.ಸಿ. ನೌಕರರ ಕೌಶಲ್ಯ ಹಾಗೂ ಕಲಾಭಿರುಚಿಯ ಶ್ರಮ ಸಾರ್ಥಕತೆಯಿಂದ ಕೂಡಿದೆ – ಶಾಸಕ ಕೆ.ಶ್ರೀನಿವಾಸಗೌಡ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಜನ-ಮನ ಮೆಚ್ಚುವಂತೆ ಸ್ಥಬ್ದ ಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ ಕೆ.ಎಸ್.ಆರ್.ಟಿ.ಸಿ. ನೌಕರರ ಕೌಶಲ್ಯ ಹಾಗೂ ಕಲಾಭಿರುಚಿಯ ಶ್ರಮ ಸಾರ್ಥಕತೆಯಿಂದ ಕೂಡಿದೆ – ಶಾಸಕ ಕೆ.ಶ್ರೀನಿವಾಸಗೌಡ


ಕೋಲಾರ: ಜನ-ಮನ ಮೆಚ್ಚುವಂತೆ ಸ್ಥಬ್ದ ಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ ಕೆ.ಎಸ್.ಆರ್.ಟಿ.ಸಿ. ನೌಕರರ ಕೌಶಲ್ಯ ಹಾಗೂ ಕಲಾಭಿರುಚಿಯ ಶ್ರಮ ಸಾರ್ಥಕತೆಯಿಂದ ಕೂಡಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವರು ಸಂತಸ ವ್ಯಕ್ತಪಡಿಸಿದರು.
ನಾಡಪ್ರಭು ಕೆಂಪೇಗೌಡರ 510 ನೇ ಜಯಂತೋತ್ಸವದ ಪ್ರಯುಕ್ತ ನಗರದಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿಯ ವಕ್ಕಲಿಗ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ, ಬಹುವಿಧಧ ಸಂದೇಶ ಸಾರುವ ಸ್ಥಬ್ದಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಹಬ್ಬ ಕನ್ನಡ ರಾಜ್ಯೋತ್ಸವ ಸೇರಿದಂತೆ ಅನೇಕ ಜಯಂತಿ ಕಾರ್ಯಕ್ರಮಗಳಲ್ಲಿ ಕೆ.ಎಸ್.ಆರ್.ಟಿ.ಸಿಯ ನೌಕರರು ತಯಾರಿಸುವ ಸ್ಥಬ್ದ ಚಿತ್ರ ಅರ್ಥಪೂರ್ಣವಾಗಿರುತ್ತದೆ ಎಂದ ಅವರು, ಇದೇ ಕೌಶಲ್ಯವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಿದ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಅಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ ಅವರು ಮಾತನಾಡಿ, ಸಂಸ್ಥೆಯ ಬಸ್ಸುಗಳ ಕಾರ್ಯಾಚರಣೆ ಹೆಚ್ಚಾಗುತ್ತಿದ್ದು ಇದಕ್ಕೆ ಅನುಗುಣವಾಗಿ ಡಿಪೋಗಳ ವಿಸ್ತರಣೆ ಅಗತ್ಯವಾಗಿದ್ದು, ಕೋಲಾರಕ್ಕೆ ವಿಶಾಲ ಜಾಗದ ಹೆಚ್ಚುವರಿ ಡಿಪೋ ನಿರ್ಮಾಣ ಮಾಡಲು ಸೂಕ್ತ ಜಾಗವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಕೆ.ವಿ.ಶಂಕರಪ್ಪ, ವಕ್ಕಲೇರಿ ರಾಮು, ಬಿಸಪ್ಪಗೌಡ, ಅನಿಲ್‍ಕುಮಾರ್, ವೆಂಕಟೇಶಪ್ಪ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ನೌಕರರ ಸಂಘದ ಪದಾದಿಕಾರಿಗಳು ಉಪಸ್ಥಿತರಿದ್ದರು.