ವರದಿ:ಶಬ್ಬೀರ್ ಅಹ್ಮದ್
ಕೋಲಾರ ಕೆನರಾ ಬ್ಯಾಂಕ್ ಸ್ವಉದ್ಯೋಗತರಬೇತಿ : ಅವಕಾಶಗಳನ್ನು ಹುಡುಕಿಕೊಂಡು ಆಶಾವಾದಿಗಳಾಗಿ
ಕೋಲಾರ, ಮೇ.04 ಜೀವನದಲ್ಲಿ ಬರುವ ಕಷ್ಟಗಳಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಆಶಾವಾದಿಗಳಾಗಿ ಸಾಗಬೇಕುಎಂದು ಅಪರಜಿಲ್ಲಾಧಿಕಾರಿ ಪುಷ್ಪಲತಾ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಸ್ವಉದ್ಯೋಗತರಬೇತಿ ಸಂಸ್ಥೆಯಲ್ಲಿ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಆವರು ಮಾತನಾಡಿದರು.
ಕಷ್ಟಗಳಿಲ್ಲದ ಹೊರತಾz Àಜೀವನ ಯಾರಿಗೂ ಇಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆ ಇದ್ದೆಇರುತ್ತದೆ. ವಿಧಗಳು ಬೇರೆ ಇರಬಹುದು, ಸಮಸ್ಯೆಯ ಬಗ್ಗೆ ಚಿಂತಿಸಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವ ಬದಲು ಸಮಸ್ಯೆಗೆ ಪರಿಹಾರ ಹುಡುಕುವುದು ಬುದ್ದಿವಂತರ ಲಕ್ಷಣಎಂದು ಕಿವಿಮಾತು ಹೇಳಿದರು.
ಜೀವನದಲಿ ್ಲಸಿಗುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಹೋಗುವ ಕೌಶಲ್ಯವನ್ನು ಮಹಿಳೆಯರು ಬೆಳಸಿಕೊಳ್ಳಬೇಕು. ಮಹಿಳೆಯರು ತಮ್ಮಲ್ಲಿರುವ ಸಾಮಥ್ರ್ಯದ ಬಗ್ಗೆ ಎಂದು ಕೀಳರಿಮೆ ಪಡಬಾರದು. ಎಷ್ಟೋ ಬಾರಿ ನಮ್ಮಲ್ಲಿ ಸಾಮಥ್ರ್ಯವಿದ್ದರು ಕೂಡ ನಕಾರಾತ್ಮP Àಆಲೋಚನೆಯಿಂದ ಅವಕಾಶಗಳನ್ನು ಕೈಚೆಲ್ಲಿ ಕೊಳ್ಳುತ್ತೇವೆ. ಇದು ನಾವು ಮಾಡುವ ಬಹಳ ದೊq À್ಡತಪ್ಪು ಎಂದು ತಿಳಿಸಿದರು.
ಸಾಧನೆಗೆ ಅಡ್ಡಿದಾರಿಗಳಂತು ಇಲ್ಲ, ಅಡ್ಡದಾರಿಗಳಿಂದ ಗಳಿಸಿದ ಸಾಧನೆ ಶಾಶ್ವತವಾಗಿ ನಿಲ್ಲುವುದಿಲ್ಲ. ಜೀವನದಲ್ಲಿ ಶ್ರಮ ವಹಿಸಿ ದುಡಿದರೆ ಎಂದೂ ಸೋಲಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಆರ್ಥಿಕವಾಗಿ ಶಕ್ತಿವಂತರಾಗಲು ಸ್ವಉದ್ಯೋಗವು ಪೂರಕವಾಗಿದೆ. ಇಂದು ಸ್ವಉದ್ಯೋಗದ ಕ್ಷೇತ್ರ ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ ವಿಪುಲ ಅವಕಾಶಗಳು ಸೃಷ್ಟಿಯಾಗುತ್ತಿವೆ. ಟೈಲರಿಂಗ್ ಮತ್ತು ಎಂಬ್ರಾಯಿಡರಿ ಕ್ಷೇತ್ರಕ್ಕೆ ತನ್ನದೇ ಆದ ಬೇಡಿಕೆ ಇದೆ. ವ್ಯವಸ್ಥಿತವಾಗಿ ಈ ವಲಯದಲಿ ್ಲಕಾರ್ಯ ನಿರ್ವಹಿಸಿದರೆ ಹೆಚ್ಚು ಹಣ ದುಡಿಯಬಹುದು’ ಎಂದರು.
ಕುಟುಂಬದ ಜವಾಬ್ದಾರಿಯ ನಿರ್ವಹಣೆಯ ಜೊತೆಗೆ ಹಲವು ಮಹಿಳೆಯರು ವಿವಿಧ ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವುದು ನೋಡಿದರೆ ಅವರ ಸಾಮಥ್ರ್ಯ ಏನು ಎಂಬುವುದು ಅರಿವಾಗುತ್ತದೆ. ಸಾಧನೆ ಶಿಖರವೇರಿದವರ ಇತಿಹಾಸವು ನಮಗೆ ಆದರ್ಶವಾU Àಬೇಕು ಎಂದು ಹೇಳಿದರು.
ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅಂಬಾಜಿ ತುಲಜಾರಾಮ್ ನವಾಲೆ ಮಾತನಾಡಿ, ಸ್ವಉದ್ಯೋಗವು ಹಲವರ ಬಾಳಿಗೆ ಬೆಳಕನ್ನು ನೀಡುತ್ತಿದೆ. ಸ್ವಾವಲಂಭಿಗಳಾಗ ಬೇಕು ಎಂದು ಭಾವಿಸುವವರಿಗೆ ಸ್ವಉದ್ಯೋಗವು ಉತ್ತಮವಾದ ಕ್ಷೇತ್ರ ಎಂದು ಅಭಿಪ್ರಾಯಪಟ್ಟರು.
ಬ್ಯಾಂಕುಗಳು ಕೂಡ ತಮ್ಮ ಇತಿಮಿತಿಯಲ್ಲಿ ಸ್ವ ಉದ್ಯೋಗಿಗಳಿಗೆ ಸಾಲ ನೀಡುವ ಮೂಲಕ ಬೆಂಬಲ ನೀಡುತ್ತಿವೆ. ಸರಕಾರಗಳು ಕೂಡ ಸಬ್ಸಿಡಿ ಸಾಲಗಳನ್ನು ನೀಡುವ ಮೂಲಕ ಸ್ವಉದ್ಯೋಗಗಳಿಗೆ ಸಹಕಾರ ನೀಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಅಧಿಕಾರಿ ವಿ.ವೆಂಕಟೇಶ್ ಶಾಸ್ತ್ರಿ, ತರಬೇತಿ ಸಂಸ್ಥೆಯ ನಿರ್ದೇಶಕg Àಮಾಕಾಂತ್ ಯಾದವ್ ಬಿ, ತರಬೇತು ದಾರರಾದ ಕೆ.ವಿ ವಿಜಯ್‍ಕುಮಾರ್, ದೇವಲಪಲ್ಲಿ ಎನ್. ಗಿರೀಶ್‍ರೆಡ್ಡಿ, ಎನ್.ವಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.