ಕೋಲಾರ ಕರೋನಾ ಸೋಂಕಿನಿಂದ ಇಂದು 8 ಜನ ಗುಣಮುಖರಾಗಿ ಬಿಡುಗಡೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಕೋಲಾರ ಕರೋನಾ ಸೋಂಕಿನಿಂದ ಇಂದು 8 ಜನ ಗುಣಮುಖರಾಗಿ ಬಿಡುಗಡೆ

 

 

 

ಕೋಲಾರ : ಕರೋನಾ ಸೋಂಕಿನಿಂದ 8 ಜನ ಗುಣಮುಖರಾಗಿ ಜಿಲ್ಲಾ ಎಸ್.ಎನ್.ಆರ್. ಆಸ್ವತ್ರೆಯಿಂದ ಇಂದು ಬಿಡುಗಡೆಯಾದರು. ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಬಿಡುಗಡೆಯಾದವರಿಗೆ ಹಣ್ಣುಗಳನ್ನು ನೀಡಿ ಬಿಡುಗಡೆ ಮಾಡಿ 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಇರುವಂತೆ ತಿಳಿಸಿದರು.

 

 

 

ಬಿಡುಗಡಯಾದವರ ವಿವರ: ಕೋಲಾರ ತಾಲ್ಲೂಕಿನ ಪಿ-2418, ಪಿ-3007, ಪಿ-3927, ಮಾಲೂರು ತಾಲ್ಲೂಕಿನ ಪಿ-3661, ಕೆ.ಜಿ.ಎಫ್ ತಾಲ್ಲೂಕಿನ ಪಿ-2851, ಬಂಗಾರಪೇಟೆ ತಾಲ್ಲೂಕಿನ ಪಿ-3186, ಮುಳಬಾಗಿಲು ತಾಲ್ಲೂಕಿನ ಪಿ-2849, ಪಿ-2850 ಸಂಖ್ಯೆಗಳ ವ್ಯಕ್ತಿಗಳು ಗುಣಮುಖರಾಗಿ ಬಿಡುಗಡೆ ಹೊಂದಿದರು. ಇವರನ್ನು ತಾಲ್ಲೂಕುವಾರು ಪ್ರತ್ಯೇಕ ಅಂಬ್ಯಲೆನ್ಸ್ ಮೂಲಕ ಅವರ ಮನೆಗಳಿಗೆ ಕಳುಹಿಸಿ ಕೊಡಲಾಯಿತು.

ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ ಕರೋನಾ ಸೋಂಕಿನಿಂದ ಗೆದ್ದ ವ್ಯಕ್ತಿಗಳನ್ನು ಸಮಾಜವು ಗೌರವದಿಂದ ನಡೆಸಿಕೊಳ್ಳಬೇಕು. ಜನರು ಇತರರಿಗೆ ದ್ಯೆರ್ಯ ತುಂಬಿ ಕರೋನಾ ಲಕ್ಷಣಗಳು ಕಂಡುಬಂದ ವ್ಯಕ್ತಿಗಳು ಸ್ವಯಂ ಪೇರಿತರಾಗಿ ಕೋವಿಡ್-19 ತಪಾಸಣೆಯನ್ನು ಮಾಡಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು. ಡಾ. ರಾಧಿಕಾ, ಡಾ.ಚಾರಿಣಿ, ಡಾ. ರಮ್ಯ ಮುಂತಾದವರು ಸೇರಿ ಒಂದು ತಂಡವಾಗಿ ಕೆಲಸ ಮಾಡಿ ಜಿಲ್ಲೆಯಲ್ಲಿ ಕರೋನಾ ಸೊಂಕನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಕರೋನಾ ಸೋಂಕಿನಿಂದ ಗುಣಮುಖರಾದವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಿದರು. ನಮ್ಮಲ್ಲಿ ರೋಗದ ವಿರುದ್ಧ ಹೋರಾಡುವ ಮನೋಸ್ಥೈರ್ಯವನ್ನು ತುಂಬಿದರು. ವೈದ್ಯರು ಯಾವುದೇ ಸಮಯಲ್ಲೂ ಕರೆ ಮಾಡಿದರು ಕೆರೆ ಸ್ವೀಕರಿಸಿ ಸೂಕ್ತ ಮಾರ್ಗದರ್ಶನವನ್ನು ನೀಡಿದರು. ಆಸ್ಪತ್ರೆಯಲ್ಲಿ ಎಲ್ಲರೂ ಸಹಕಾರ ನೀಡಿ ನಮ್ಮನ್ನು ಗುಣಮುಖರಾಗಿ ಮಾಡಿದ್ದಾರೆ ಎಂದು ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ವಿಜಯ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಚಾರಿಣಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಾರಾಯಣಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.