ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ: ಉಚಿತ ಕಾನೂನು ನೆರವಿಗಾಗಿ ಕಕ್ಷಿದಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ `ಪ್ರೆಂಟ್ ಆಫೀಸ್’ ಆರಂಭ
ಕೋಲಾರ: ಉಚಿತ ಕಾನೂನು ನೆರವು ಬಯಸಿ ಬರುವ ಕಕ್ಷಿದಾರರಿಗೆ ನೆರವಾಗಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ `ಪ್ರೆಂಟ್ ಆಫೀಸ್’ ವಿಭಾಗವನ್ನು ಆರಂಭಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ಕರೆ ನೀಡಿದರು. ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿ ಆವರಣದಲ್ಲಿ ಆಫೀಸ್ವಿಭಾಗವನ್ನು ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರದ ಆದೇಶದ ಮೇರೆಗೆ ಉಚಿತ ಕಾನೂನು ಬಯಸಿ ಬರುವ ಕಕ್ಷಿದಾರರಿಗೆ ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವಶ್ಯಕವಿರುವ ಅರ್ಜಿಗಳನ್ನು ಕಾನೂನು ನೊಟೀಸುಗಳು, ನ್ಯಾಯಾಲಯದ ಮನವಿ ಪತ್ರಗಳು, ಅವಶ್ಯಕ ಅರ್ಜಿಗಳನ್ನು ಸಿದ್ದಪಡಿಸಿಕೊಡುವ ಮತ್ತು ಇತರೆ ಕಾನೂನು ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಈ ಕಚೇರಿ ಆರಂಭಿಸಲಾಗಿದೆ ಎಂದು ತಿಳಿಸಿದರು. ಅನೇಕರು ಉಚಿತ ಕಾನೂನು ನೆರವು ಸಿಗುವ ಕಲ್ಪನೆಯೇ ಇಲ್ಲದೇ ಸಂಕಷ್ಟಕ್ಕಿಡಾಗಿರುವ ಪ್ರಸಂಗಗಳು ಇಲ್ಲದಿಲ್ಲ, ಅಂತಹವರಿಗೆ ಉಚಿತ ನೆರವಿನ ಕುರಿತು ಅರಿವು ಮೂಡಿಸುವ ಕೆಲಸವನ್ನು ಸುಶೀಕ್ಷಿತರು ಮಾಡಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು, ಕಾರ್ಮಿಕರಿಗೆ ಕಾನೂನು ಸೇವಾ ಪ್ರಾಧಿಕಾರ ಕಾನೂನಿನ ಅರಿವು ನೆರವನ್ನು ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು, ಇದರ ಪ್ರಯೋಜನ ಪಡೆಯಲು ಕಕ್ಷಿದಾರರು ಮುಂದಾಗಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಸಿ.ಹೆಚ್.ಗಂಗಾದರ `ಪ್ರೆಂಟ್ ಆಫೀಸ್, ಕಛೇರಿ ಕಚೇರಿ ದಿನಗಳಲ್ಲಿ ಬೆಳಗ್ಗೆ 10:30 ರಿಂದ ಸಂಜೆ 6 ಗಂಟೆ ವರೆಗೂ ಕಾರ್ಯನಿರ್ವಹಿಸುವುದು ಈ ಕಛೇರಿಯಲ್ಲಿ ಒಬ್ಬರು ಪ್ಯಾನಲ್ ವಕೀಲರು ಸೇರಿದಂತೆ ಅರೆಕಾಲಿಕ ಕಾನೂನು ಸೇವಕರು ಇದ್ದು, ಅವರು ಕಕ್ಷಿದಾರರಿಗೆ ಅಥವಾ ಸಾರ್ವಜನಿಕರ ಪ್ರಕರಣಗಳಿಗೆ ಸಂಬಂಧಿಸಿದ ಅವಶ್ಯಕ ಅರ್ಜಿಗಳನ್ನು ನೋಟಿಸ್ಗಳನ್ನು ಉಚಿತವಾಗಿ ಸಿದ್ದಪಡಿಸಿಕೊಡುತ್ತಾರೆ. ಈ ಕಛೇರಿಯ ಸೇವೆಯನ್ನು ಬಳಸಿಕೊಳ್ಳಬೇಕೆಂದು ಸಾರ್ವಜನಕರಿಗೆ ಕಿವಿಮಾತು ಹೇಳಿದರು.
ನ್ಯಾಯ ಕೋರಿ ಬರುವವರಿಗೆ ಉಚಿತ ಕಾನೂನಿನ ನೆರವು ನೀಡುವ ಅಗತ್ಯವಿದೆ, ಅದರಲ್ಲೂ ಮಹಿಳೆಯರು, ವಿಕಲಚೇತನರು, ಆದಾಯದ ಮಿತಿಯೊಳಗೆ ಇರುವವರು ಸೇರಿದಂತೆ ಯಾರೇ ಬಂದರೂ ಈ ಕಚೇರಿಯಲ್ಲಿ ಸಿಗುವ ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಬಡತನ, ಆರ್ಥಿಕ ಹಿನ್ನಡೆಯಿಂದಾಗಿ ಅನೇಕರು ನ್ಯಾಯ ಪಡೆಯುವಲ್ಲಿ ವಿಫಲವಾದ ಪ್ರಕರಣಗಳು ಇವೆ, ಅಂತಹ ಸಂದರ್ಭದಲ್ಲಿ ಅಂತಹ ಸಂಕಷ್ಟದಲ್ಲಿರುವ ಕಕ್ಷಿದಾರರು ಪ್ರೆಂಟ್ ಆಫೀಸ್ ನೆರವು ಪಡೆಯಬಹುದು, ತಮ ಸಮಸ್ಯೆಗೆ ಪರಿಹಾರವನ್ನು ಉಚಿತವಾಗಿ ಹುಡುಕಿಕೊಳ್ಳಲು ನೆರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಚ ಟಿ.ಆರ್.ಜಯರಾಮ್ ಪ್ಯಾನಲ್ ವಕೀಲರಾದ ಕೆ.ಆರ್.ಧನರಾಜ್,ಎಂ.ನಾರಾಯಣಸ್ವಾಮಿ ಸೋಮಶೇಖರ್,ವೆಂಕಟಾಚಲಪತಿ,ಶ್ರೀನಿವಾ