ಕೋಲಾರ ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ 2019ರ ಅಂಗವಾಗಿ ರಕ್ತದಾನ ಶಿಬಿರ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ 2019ರ ಅಂಗವಾಗಿ ರಕ್ತದಾನ ಶಿಬಿರ

ಕೋಲಾರ.ಆ.23: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೋಲಾರ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ, ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ 2019ರ ಅಂಗವಾಗಿ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ವೈದ್ಯಾಧಿಕಾರಿ ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ರಕ್ತದಾನ ಮಾಡುವುದರಿಂದ ಬೇರೋಬ್ಬರ ಪ್ರಾಣ ಉಳಿಸಬಹುದು. ಇಂದಿನ ಯುವಕ ಯುವತಿಯರು ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.
ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು ಪ್ರಾಂಶುಪಾಲೆ ಶಮೀಮ್ ಸಲ್ಮಾ ಅಧ್ಯಕ್ಷತೆ ವಹಿಸಿದ್ದರು. ರಕ್ತನಿಧಿ ವೈದ್ಯಾಧಿಕಾರಿ ಡಾ. ರೇವತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಇಕ್ಬಾಲ್‍ಸಾಬ್, ಯೂಸಫ್‍ಸಾಬ್, ಸ್ಯಯದ್‍ಯೂನುಸ್, ರಜನಿ, ಡಾ.ಎಂ.ವೆಂಕಟರಾಮೇಗೌಡ, ಶಾಹೀನ್‍ತಾಜ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.