ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ ಆಫ್ ಸ್ಕೂಲ್ಸ್(ಕ್ಯಾಮ್ಸ್) ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ  ಮಲತಾಯಿ ಧೋರಣೆ ವಿರುದ್ಧ  ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ ಆಫ್ ಸ್ಕೂಲ್ಸ್(ಕ್ಯಾಮ್ಸ್) ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ  ಮಲತಾಯಿ ಧೋರಣೆ ವಿರುದ್ಧ  ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಕೋಲಾರ,ಜೂ.20: ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ ಆಫ್ ಸ್ಕೂಲ್ಸ್(ಕ್ಯಾಮ್ಸ್) ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಮಲತಾಯಿ ಧೋರಣೆ ವಿರುದ್ಧ ಜೂ, 22ರ ಸೋಮವಾರ ಬೆಳಗ್ಗೆ 10-00 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಕೋಲಾರ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ಬೋಧಕ, ಬೋಧಕೇತ್ತರ ಸಿಬ್ಬಂದಿ ಜೊತೆಗೂಡಿ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ (ಖಾಸಗಿ ಶಾಲೆ ಸಿಬ್ಬಮದಿ ವರ್ಗದವರಿಗೆ ಪ್ಯಾಕೇಜ್ ಘೋಷಿಸಿದೆ) ಸಿಬ್ಬಂದಿ ವರ್ಗದವರ ಜೀವನ ಡೋಲಾಯಮಾನವಾಗಿದ್ದು, ಕೂಡಲೇ ಸರ್ಕಾರ ಪ್ಯಾಕೇಜ್ ಘೋಷಿಸುವಂತೆ ಪ್ರತಿಭಟನೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಎ.ಸದಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.