ಕೋಯಿಕ್ಕೋಡ್ ಏರ್ ಇಂಡಿಯಾ ವಿಮಾನ ಅಪಘಾತ:ಮೃತರ ಸಂಖ್ಯೆ 19ಕ್ಕ ಎರಿಕೆ, ಇನ್ನೂ ಹಲವರ ಸ್ಥಿತಿ ಗಂಭೀರ

JANANUDI.COMNETWORK

ನಿನ್ನೆರಾತ್ರಿ  ದುಬೈ ನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ  ರನ್‌ವೇಯಿಂದ ಜಾರಿ ಉಂಟಾದ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಇದುವರೆಗೆ 19 ಮಂದಿ ಮೃತಪಟ್ಟಿದ್ದಾರೆಂದು ಇತ್ತಿಚಿನ ಸುದ್ದಿಯಿಂದ ತಿಳಿದು ಬಂದಿದೆ.

    ದುಬೈಯಿಂದ ಕೇರಳದ ಕೋಯಿಕ್ಕೋಡ್’ಗೆ ಆಗಮಿಸಿದ ಎರ್ ಇಂಡಿಯಾ ಬೊಯಿಂಗ್ 1344 ವಿಮಾನವು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ರನ್-ವೇ ಯಿಂದ ಜಾರಿದ ಪರಿಣಾಮ ವಿಮಾನವು ಜಾರಿತಡೆಗೋಡೆಗೆ 35 ಅಡಿ ಕಣಿವೆಗೆ ಬಿದ್ದು  ಎರಡು ಭಾಗವಾಗಿತ್ತು.   ಹೀಗೆ ಕಣಿವೆಗೆ ಉರುಳಿದ ವಿಮಾನ ಇಬ್ಭಾಗವಾಗಿದ್ದ  ಸ್ಥಳದಲ್ಲಿ ಲಘು ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿತ್ತು. ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಈ ವಿಮಾನದಲ್ಲಿ ಒಟ್ಟು 180 ಜನರು ಪ್ರಯಾಣಿಸುತ್ತಿದ್ದರು. ಇವರಲ್ಲಿ 174 ಜನ ಪ್ರಯಾಣಿಕರು, 4 ಕ್ಯಾಬಿನ್ ಸಿಬ್ಬಂದಿಗಳು ಮತ್ತು ಇಬ್ಬರು ಪೈಲಟ್ ಗಳು ಸೇರಿದ್ದಾರೆ.ಪ್ರಯಾಣಿಕರಲ್ಲಿ 10 ಜನ ಮಕ್ಕಳೂ ಇದ್ದರು.   ದುರ್ಘಟನೆಯ ಮಾಹಿತಿ ಲಭಿಸುತ್ತಿದ್ದಂತೆಯೇ 24 ಆ್ಯಂಬುಲೆನ್ಸ್ ಗಳು ಘಟನಾ ಸ್ಥಳಕ್ಕೆ ದೌಡಾಯಿಸಿವೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಂಡಿದೆ.

 “ಈ ವಿಮಾನದಲ್ಲಿ ದೋಷ ಕಂಡು  ಬಂದು  ಪೈಲಟ್  ವಿಮಾನ ಅವಘಡ ಆಗಿ ಬೆಂಕಿ ಹೊತ್ತಿಕೊಳ್ಳುವ ಅನುಮಾನ ಇದ್ದುದರಿಂದ ವಿಮಾನದಲ್ಲಿದ್ದ ಇಂಧನ ಮುಗಿಯಲು ಆಕಾಶದಲ್ಲಿ ಸುತ್ತು ಹಾಕಿದ್ದರು ಎಂದು ಮುಖ್ಯಪೈಲೆಟ್ ದೀಪಕ್ ಸಾಠೆಯ ಬಂದುಗಳಿಂದ ತಿಳಿದು ಬಂದಿದೆಯೆಂದು ಹೇಳಲಾಗುತ್ತದೆ

ಇಂಧನ ಮುಗಿದ ನಂತರ  ಇಳಿಸುವ ಪ್ರಯತ್ನಮಾಡಿದಾಗ ವಿಮಾನ ರನ್ ವೇ ಯಿಂದ ಜ್ಯಾರಿ ಅವಘಡ ವಾಗಿದೆ.ವಿಮಾನದ ಪೈಲೆಟ್ ದೀಪಕ್ ಸಾಠೆ,ಬಹಳ ಅನುಭವ ಇರುವ ಭಾರತೀಯ ವಾಯುದಳದಲ್ಲಿ ಸೇವೆ ನೀಡಿದವರಾಗಿದ್ದು, ಅವರು ತಮ್ಮ ಪ್ರಾಣ ಕಳೆದು ಕೊಂಡರು, ವಿಮಾನಕ್ಕೆ ಬೆಂಕಿ ತಾಗಿ ಸುಟ್ಟು ಹೋಗದಂತೆ ಎಚ್ಚರ ವಹಿಸಿ ಹಲವರ ಜೀವ ಉಳಿಸಿದ್ದಾರೆಂದು  ತಿಳಿದು ಬಂದಿದೆ.