ಕೊರೋನಾದಿಂದ ನೇರಂಬಳ್ಳಿ ವ್ಯಕ್ತಿ ಸಾವು, ಆಸ್ಪತ್ರೆಯವರು ಕಳುಹಿಸಿದ ಶವವೆ ಬೇರೆ :ಕುಂದಾಪುರ ಸ್ಮಶಾನದಲ್ಲಿ ಪ್ರತಿಭಟನೆ

JANANUDI.COM NETWORK

ಕುಂದಾಪುರ, ಅ.23: ಕೊರೊನಾನಿಂದ ಸತ್ತ ವ್ಯಕ್ತಿಯ ಶವದ ಬದಲು ಬೇರೆ  ಶವವನ್ನು ಕಳುಹಿಸಿದ ಘಟನೆ ಕುಂದಾಪುರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಂಬುಲೆನ್ಸ್‌ನಲ್ಲಿ ಬಂದ ಬೇರೆ ಶವವನ್ನು ಕಂಡ ಬಂಧುಗಳು, ಮನೆಯವರು ಹಾಗೂ ಸಾರ್ವಜನಿಕರು ಕುಂದಾಪುರ ಸ್ಮಶಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಾದ ನೇರಂಬಳ್ಳಿಯ 60 ರ ಹರೆಯದ ವ್ಯಕ್ತಿಯೊಬ್ಬರು ಮೃತರಾಗಿದ್ದರು  ಅವರ ಶವವನ್ನು  ಕಳುಹಿಸಿಕೊಡಲಾಗುವುದು ಎಂದು ಮನೆಯವರಿಗೆ ಆಸ್ಪತ್ರೆಯಿಂದ ತಿಳಿಸಲಾಗಿತ್ತು. ಶವವನ್ನು ಕುಂದಾಪುರ ಸ್ಮಶಾನಕ್ಕೆ ತರಲು ಕೋರಿಕೊಂಡ್ಡು ಮನೆಯವರು, ಬಂಧುಗಳು, ಊರವರು ಅಂತ್ಯಕ್ರಿಯೆಗೆ ಬೇಕಾದ ಸಿದ್ದತೆ ಮಾಡಿಕೊಂಡು ಸ್ಮಶಾನಕ್ಕೆ ತೆರಳಿದ್ದರು. ಹಾಗೇ ಬೆಳಿಗ್ಗೆ ೧೦.೩೦ಕ್ಕೆ ಬೇರೆ ವ್ಯಕ್ತಿಯ ಮೃತ ಶರೀರ ಸ್ಮಶಾನಕ್ಕೆ ಆಗಮಿಸಿತು.


      ಆದರೆ ನೇರಂಬಳ್ಳಿಯ ಮೃತ ವ್ಯಕ್ತಿ ಸುಮಾರು ಆರು ಅಡಿ ಎತ್ತರದ ವ್ಯಕ್ತಿಯಾಗಿದ್ದು ಆದರೆ ಕಳುಹಿಸಿಕೊಟ್ಟ ಶವ ಗಿಡ್ಡದಾಗಿದ್ದು,, ಮನೆಯವರಿಗೆ ಮೃತ ದೇಹ ಕಂಡು ಇದು ನಮ್ಮ ಮನೆಯವರ ಮೃತ ದೇಹ ಅಲ್ಲವೆಂಬ ಸಂದೇಹವಾಗಿದ್ದು, ಆದರೆ ಶವ ತೆರೆಯಬಾರದು ಎಂಬ ಒತ್ತಡದ ನಡುವೆಯೂ ‘ಏನಾದರಾಗಲಿ ಎಂದು’ ಶವ ಪರೀಕ್ಷಿಸುವಾಗ, ಕಳುಹಿಸಿಕೊಟ್ಟ ಶವ ಯುವಕನೊಬ್ಬನದಾಗಿತ್ತು.  ಇದು ನಮ್ಮ ಮೃತದೇಹ ಅಲ್ಲವೆನ್ನುತ್ತಿದ್ದಂತೆ ಅಂಬುಲೆನ್ಸ್ ಸಿಬ್ಬಂದಿಗಳು ಶವ ಕೊಂಡುಹೋಗಲು ಯತ್ನಿಸಿದ್ದರು.

      ಆದರೆ ತಕ್ಷಣ ಸ್ಮಶಾನದ ಗೇಟ್ ಹಾಕಿ  ಜನರು  ಬೇರೆ ಯಾರದ್ದೋ ಶವ ಕಳುಹಿಸುವ ಈ ರೀತಿಯ ಯಡವಟ್ಟು ಕೆಲಸ ಮಾಡಿದ ಆಧಿಕಾರಿಗಳ ಅಜಾಗ್ರಾತ ಕ್ರಮಕ್ಕೆ ವಿರೋಧ ವ್ಯಕ್ತವಾಗಿ,  ನಮ್ಮ ಮೃತದೇಹ ತಂದು ಕೊಡುವವರೆಗೆ ಈ ದೇಹವನ್ನು ಹೊರ ಹೋಗಲು ಬಿಡಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ಆರಂಭಿಸಿದರು.

   ನೇರಂಬಳ್ಳಿಯ ನಾಗರಾಜ ಆಚಾರ್ಯ, ಪ್ರಕಾಶ್ ಆಚಾರ್ಯ, ಅಣ್ಣಪ್ಪ ಶೇರಿಗಾರ್ ನೇರಂಬಳ್ಳಿ, ಗೋಪಾಲ್ ಶೇರಿಗಾರ್ ನೇರಂಬಳ್ಳಿ, ಶ್ರೀಧರ ಆಚಾರ್ಯ ವಡೇರಹೋಬಳಿ, ರಾಜಗೋಪಾಲ್ ಆಚಾರ್ಯ ಕೊಟೇಶ್ವರ, ಊರಿನ ಪ್ರಮುಖರು, ಮೃತ ವ್ಯಕ್ತಿಗಳು ಬಂಧುಗಳು ಹಾಗೂ ಇನ್ನಿತರರು ಇದ್ದು ಆಸ್ಪತ್ರೆಯವರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಕೊನೆಗೆ ಆಸ್ಪತ್ರೆಯವರು ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡು ಮೃತ ವ್ಯಕ್ತಿಯ ಶವ ಕಳುಹಿಸಲು ಒಪ್ಪಿಕೊಂಡು ಮತ್ತೊಂದು ಅಂಬುಲೆನ್ಸ್‌ನಲ್ಲಿ ಶವ ಕಳುಹಿಸಿದರು. ನಂತರವೇ ಜನರು ಮೊದಲು ಬಂದಿದ್ದ ಅಂಬುಲೆನ್ಸ್‌ ಗೆ ತೆರಳಲು ಅವಕಾಶ ನೀಡಿದರು. ಕೊನೆಗೆ ನೇರಂಬಳ್ಳಿ ವ್ಯಕ್ತಿಯ ಶವದ ಅಂತ್ಯಕ್ರಿಯೆ ನಡಸಲಾಯಿತು.

   ಕೊರೊನಾ ಹೆಸರಲ್ಲಿ ಬೇಕಾದಷ್ಟು,ಅನಾಹುತಗಳಾಗಿವೆ, ಪಾಸಿಟೀವ್ ಬಂದು ಕೊನೆಗೆ,ನೆಗಿಟೀವ್ ಬರುತ್ತೆ, ಒಂದರೇಡು ದಿವಸ ಚಿಕಿತ್ಸೆ ನೀಡಿ ಲಕ್ಷ ಕಟ್ಟಲೆ ಲೂಟಿ ಮಾಡಿದ್ದಾರೆ, ಕಿಡ್ನಿ ಮತ್ತು ಬೇರೆ ಅಂಗಾಂಗಳನ್ನು ತೆಗೆದು ಮಾಯ ಮಾಡಿದ್ದಾರೆ. ತಲೆನೋವಿಗೆಂದು  .ಆಸ್ಪತೆಗೆ ಬಂದ ಮಹಿಳೆಗೆ ಬೇರೊಂದು ಇಂಜೆಕ್ಷನ್ ನೀಡಿ ಮೃತಳಾಗಿದ್ದ ಘಟನೆಯುನಡೆದಿದೆ. ಇನ್ನೂ ಎನೇನೊ ಅವಾಂತಾರ ಆಗುವುವೊ ಗೊತ್ತಿಲ್ಲಾ.