ಕೊರೊನಾ ಸ್ವಯಂಸೇವಕರಾಗಿ: ಯುವಕ ಸಂಘಗಳಿಗೆ ಯುವಜನ ಒಕ್ಕೂಟ ಕರೆ.
ಕುಂದಾಪುರ,ಎ .1 ಕೊರೊನಾ ಲಾಕ್‌ಡೌನ್‌ನಿಂದ ತಾಲೂಕಿನಾದ್ಯಂತ ಇರುವ ಮಕ್ಕಳಿಲ್ಲದ ವೃದ್ಧರು, ವಿಧವೆಯರು,ದಿನಗೂಲಿ ಕಾರ್ಮಿಕರು, ವಿಶೇಷವಾಗಿ ಮಾರಣಾಂತಿಕವಾದ ಖಾಯಿಲೆ ಪೀಡಿತರು ದಿಕ್ಕು ತಪ್ಪಿದವರಂತಾಗಿದ್ದಾರೆ. ಗ್ರಾಮದ ಮೂಲೆ ಮೂಲೆಗಳಲ್ಲಿ ವಾಸಿಸುವ ಇಂತಹ ಹಲವರು ಆಹಾರ ಮತ್ತು ಔಷಧಗಳ ಕೊರತೆಯಿಂದ ಅಸ್ವಸ್ಥರಾಗಿದ್ದಾರೆ. ಇದು ಯುದ್ದೋಪಾದಿಯಲ್ಲಿ ನಾವೆಲ್ಲರೂ ಸ್ವಇಚ್ಚೆಯಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾದ ಒಂದು ಸಂಧರ್ಭವಾಗಿದೆ. ಆ ಕಾರಣಕ್ಕಾಗಿ ಅಗತ್ಯವಾಗಿ ಕುಂದಾಪುರ ತಾಲೂಕಿನ ಎಲ್ಲಾ ಯುವಕ ಸಂಘಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಸದ್ರಿ ವಿವರಿಸಿದ ಕಾರ್ಯದಲ್ಲಿ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಜೊತೆ ಈ ಲಿಂಕ್ (https://covid19.karnataka.gov.in/coronawarrior.html) ಮೂಲಕ ನೋಂದಾಯಿಸಿ ಕೊಂಡು ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳುವಂತೆ ಕುಂದಾಪುರ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಕೆ. ಸನ್ಮತ್ ಹೆಗ್ಡೆ ವಿನಂತಿಸಿದ್ದಾರೆ.
ಕೊರೊನಾ ಒಂದು ಮಾರಕ ಖಾಯಿಲೆಯಾಗಿದ್ದು ಇದೊಂದು ಮುಗಿಯದ ಹೋರಾಟವಾಗಿದೆ ಆದರೂ ಕನಿಷ್ಠ ಲಾಕ್‌ಡೌನ್ ಮುಗಿಯುವ ಅವಧಿಯ ತನಕವಾದರೂ ನಮ್ಮ ಅಕ್ಕಪಕ್ಕದ ಮನೆಗಳಲ್ಲಿರುವ ಆ ಅಶಕ್ತರಿಗೆ ಈ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಕೂಡಾ ಹೌದು ಆ ಕಾರಣಕ್ಕಾಗಿ ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಸ್ವ ಇಚ್ಛೆಯಿಂದ ತೊಡಗಿಸಿಕೊಳ್ಳೋಣ ಎಂದವರು ಪತ್ರಿಕಾ ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.