ಕೊರೊನಾ ವೈರಸ್ ತಡೆಗೆ ಜನತಾ ಕಫ್ರ್ಯು ಜೊತೆಗೆ ಮೆಸ್ಕೊಮ್ ವಿದ್ಯುತ್ ಕಂಪೆನಿ ಸಾಥ್ : ಹಗಲಿಗೂ ಉರಿಯುತ್ತಿರುವ ರಸ್ತೆ ದೀಪ

JANANUDI.COM NETWORK

 

 

ಕೊರೊನಾ ವೈರಸ್ ತಡೆಗೆ ಜನತಾ ಕಫ್ರ್ಯು ಜೊತೆಗೆ ಮೆಸ್ಕೊಮ್ ವಿದ್ಯುತ್ ಕಂಪೆನಿ ಸಾಥ್

                       ಹಗಲಿಗೂ ಉರಿಯುತ್ತಿರುವ ರಸ್ತೆ ದೀಪ

 

 

ಕುಂದಾಪುರ, ಮಾ.22: ಕೊರೊನಾ ವೈರಸ್ ತಡೆಗಾಗಿ ಜನತಾ ಕಫ್ರ್ಯು ಆಚರಿಸಿ ಕುಂದಾಪುರ ಸ್ಥಬ್ದವಾಗಿ ಬಂದಗೆ ಜೊತೆ ನೀಡಿದ ಜನತೆ ಜನಾತ ಕಫ್ರ್ಯು ಯಶಸ್ವಿಯಾಗಲು ಸಹಕರಿಸಿದ್ದಾರೆ.
ಇದರ ಜೊತೆಗೆ ಕುಂದಾಪುರದ ಮೆಸ್ಕೊಮ್ ವಿದ್ಯುತ್ ಸರಬಾರಜು ಕಂಪೆನಿಯೂ ಸಾಥ್ ನೀಡಿದಂತೆ ಕಾಣುತ್ತದೆ. ಇವತ್ತು ಜನತಾ ಕಫ್ರ್ಯು ಬಗ್ಗೆ ಪೋಟೊ ತೆಗೆಯಲು ಹೊಸ ಬಸ್ ನಿಲ್ದಾಣಕ್ಕೆ ಹೋದಾಗ, ಬಸ್ ಸ್ಟ್ಯಾಂಡಿನ ಹತ್ತಿರ ಇರುವ ಅಟೋ ರಿಕ್ಷಾ ಸ್ಟ್ಯಾಂಡ್ ಎದುರು ರಸ್ತೆಯ ಒಂದು ವಿದ್ಯುತ್ ಕಂಬದ ಮೇಲಿರುವ ದೀಪ ಹಗಲಲ್ಲೂ ಉರಿಯುತಿತ್ತು, ನಾನು ಈ  ಪೋಟೊ ತೆಗೆಯುವಾಗ ಸಮಯ ಸುಮಾರು ಬೆಳಿಗ್ಗೆ 11 ಗಂಟೆ, ಆ ದೀಪ ಮತ್ತೆ ಎಷ್ಟೊಂದು ಹೊತ್ತು ಉರಿಯುತಿತ್ತೊ ಗೊತ್ತಿಲ್ಲಾ.
ಹೀಗೆ ಎಷ್ಟೊಂದು ವಿದ್ಯುತ್ ಪೋಲಾಗುತ್ತದೆ ಎಂದು ಇವರಿಗೆ ಅರಿವಿದೆಯಾ? ಸಂಜೆಯ ಹೊತ್ತಿನಲ್ಲಿ ಬೆಳಕು ಇರುವಾಗಲೇ ದಾರಿ ದೀಪ ಉರಿಯಲು ಆರಂಭವಾಗುತ್ತದೆ. ಆದರೆ ಬೆಳಗಿನ ಜಾವ ಕತ್ತಲೆ ಇರುವಾಗಲೇ ರಸ್ತೆ ದೀಪಗಳನ್ನು ಆರಿಸಿ ಬಿಡುತ್ತಾರೆ. ಅದೇ ಸಮಯಕ್ಕೆ ಹಲವಾರು ಜನರು, ಪ್ರಾಯದವರು, ವಾಕಿಂಗ್ ಮಾಡುತಿರುತ್ತಾರೆ. ಅವರಿಗೆ ಎನೂ ಕಾಣದೆ ಕಷ್ಟದಲ್ಲಿ ವಾಕಿಂಗ್ ಮಾಡುತ್ತಾರೆ. ಕೆಲವರು ಟಾರ್ಚ್ ಹಿಡಿಕೊಂಡು ವಾಕಿಂಗ್ ಮಾಡುತಿರುತ್ತಾರೆ. ಮೆಸ್ಕೊಮ್ ನವರೆ ಜನರಿಗೆ ಉಪಯೋಗ ಆಗುವ ಹಾಗೆ ನಿಮ್ಮ ನಡೆ ಇರಲಿ. ಸಂಜೆ ಹೊತ್ತಲ್ಲಿ ಬೆಳಕು ಕಡಿಮೆ ಆಗುವಾಗ ರಸ್ತೆ ದೀಪ ಉರಿಸಿ, ಬೆಳಿಗ್ಗೆ ಕತ್ತಲು ಇರುವಾಗಲೇ ರಸ್ತೆ ದೀಪಗಳನ್ನು ಆರಿಸಬೇಡಿ. ಇತ್ತಿಚಿನ ದಿನಗಳಲ್ಲಿ ಬಿಲ್ಲ್ ರಿಡಿಂಗನಲ್ಲಿ ಕೂಡ ಎಡವಟ್ಟು ಆಗಿ ಕೂಡ ಜನ ಪರಿತಪಿಸುತಿದ್ದಾರೆ.