JANANUDI.COM NETWORK
ಕೊರೊನಾ ವೈರಸ್ ಎಫೆಕ್ಟ್ : ಜನತಾ ಕರ್ಪ್ಯೂಗೆ ಕುಂದಾಪುರದಲ್ಲಿ ಉತ್ತಮ ಬೆಂಬಲ ಬಸ್ ಸಂಚಾರ ಮೆಡಿಕಲ್ ಸೆಂಟರ್, ಪೆಟ್ರೋಲ್ ಬಂಕ್‌ಗಳೂ ಮೀನು ಪೇಟೆ ಬಾರ್, ವಾಯ್ನ್ ಶೊಪ್ ಎಲ್ಲವು ಬಂದ್
ಕುಂದಾಪುರ,ಮಾ.22: ಭಾನುವಾರ ಕೊರೊನಾ ವೈರಸ್ ಗಾಗಿ ನಡೆಸಲು ಕರೆಕೊಟ್ಟಿದ್ದ ಜನತಾ ಕರ್ಪ್ಯೂಗೆ ಕುಂದಾಫುರದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು . ಕುಂದಾಪುರದಲ್ಲಿ ವ್ಯಾಪಾರಸ್ಥರು ಅಂಗಡಿ, ದೊಡ್ಡ ಮಳಿಗೆಗಳು ಬಾಗಿಲು ತೆರೆಯದೇ, ಇದ್ದರಿಂದ, ಬಸ್ ಸಂಚಾರ ಮೆಡಿಕಲ್ ಸೆಂಟರ್, ಪೆಟ್ರೋಲ್ ಬಂಕ್‌ಗಳೂ ಮೀನು ಪೇಟೆ ಬಾರ್, ವಾಯ್ನ್ ಶೊಪ್ ಎಲ್ಲವು ಬಂದ್ ಇದ್ದುದರಿಂದ ಮುಖ್ಯ ಪೇಟೆಯ ರಸ್ತೆಗಳೆಲ್ಲಾ ಜನ ಇಲ್ಲದೆ ಬಿಕೋ ಎನ್ನುತ್ತಿದ್ದವು, ಭಾನುವಾರ ರಜೆಯ ದಿನವಾದ್ದರಿಂದ ಮತ್ತು ಕೊರೊನಾ ಭಯ ಹಾಗೂ ಸಾಮಾಜಿಕ ಕಳಕಳಿಗಿ ಸ್ವಯಂ ರಕ್ಷಣೆ ಅನಿವಾರ್ಯ ಎನ್ನುವುದನ್ನು ಅರಿತು ಜನ ಮನೆಯಲ್ಲೆ ಉಳಿದರು
ಬಸ್, ಕಾರು,. ಆಟೋ ರಿಕ್ಷಾಗಳೂ ನಿಲ್ದಾಣಗಳಿಗೆ ಬರದೇ ಇದ್ದಿದ್ದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು. ಈ ಹಿಂದಿನ ಬಂದ್‌ನಂತೆಯೇ ಈ ಬಾರಿ ಆಗಬಹುದು ಎಂದು ಲೆಕ್ಕಾಚಾರ ಹಾಕಿದ್ದ ಪ್ರಯಾಣಿಕರನ್ನು ಭಾನುವಾರದ ಕರ್ಪ್ಯೂ ಕಂಗೆಡಿಸಿತ್ತು. ಬಹುತೇಕ ಮೆಡಿಕಲ್ ಶಾಪ್‌ಗಳೂ ಇಂದು ಬಾಗಿಲು ತೆರೆಯದೇ ಜನತಾ ಕರ್ಪ್ಯೂ ಭಾಗವಹಿದಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಬಸ್‌ಗಳಿಲ್ಲದೇ ಜನರೂ ಇಲ್ಲದೇ ಬಿಕೋ ಅನ್ನುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಸಾರಿಗೆ ವಾಹನಗಳ ಸಂಚಾರ ಕಾಣಲಿಲ್ಲಾ.. ಕುಂದಾಪುರದ ಮೀನು ಮಾರುಕಟ್ಟೆ, ಮಟನ್ ಸ್ಟಾಲ್‌ಗಳು, ಕೋಳಿ ಅಂಗಡಿಗಳು ಅಂಗಡಿ ಮಾಲಕರೇ ಬಾಗಿಲು ತೆರೆಯದೇ ಬೆಂಬಲ ನೀಡಿದವು.
ಭಾನುವಾರ ಕ್ರಿಶ್ಚಿನಿಯರಿಗೆ ಪವಿತ್ರ ದಿವಸ ಕಡ್ಡಾಯವಾಗಿ ಬಲಿ ಪೂಜೆಯಲ್ಲಿ ಭಾಗವಹಿಸ ಬೇಕಿತ್ತು, ಆದರೆ ಕೊರೊನಾ ಹರಡದಂತೆ ತಡೆಯಲು ಹಾಗೂ ಸಾಮಾಜಿಕ ಕಳಕಳಿಯಿಂದ ಚರ್ಚಗಳಲ್ಲಿ ಸಾರ್ವಜನಿಕರಿಗಾಗಿ ಇದ್ದ ಬಲಿ ಪೂಜೆಗಳು ರದ್ದು ಪಡಿಸಿದ್ದು ಇಗರ್ಜಿ ಮೈದಾನಗಳು ಖಾಲಿ ಖಾಲಿಯಾಗಿದ್ದವು. ಭಕ್ತರೆಲ್ಲರೂ ತಮ್ಮ ಮನೆಯಿಂದಲೇ ದೂರದರ್ಶನದಿಂದ ಬಿತ್ತರವಾಗುವ ಬಲಿ ಪೂಜೆಯನ್ನು ಆಲಿಸಿ ಪೂಜೆಯನ್ನು ಆಚರಿಸಿದರು. ಅಂತೇಯೆ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಪಾಠವಿಲ್ಲದೆ ದೇವಸ್ಥಾನಗಳು ಬಾಗಿಲು ಹಾಕಿದ್ದವು.
ಕುಂದಾಪುರದ ಟ್ರಾಫಿಕ್ ಪೊಲೀಸರು, ಹಾಗೂ ಪೊಲೀಸರು ಗಸ್ತು ತಿರುಗುತಿದ್ದು, ಅನಾವಶ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಮಕ್ಕಳನ್ನು ಗದರಿಸಿ ಮನೆಗೆ ಸೇರುವಂತೆ ಮಾಡಿದ್ದನ್ನು ಕಾಣಲಾಯಿತು. ಕುಂದಾಪುರ ಪುರಸಭೆಯ ಕಾರ್ಮಿಕರು ಮಾತ್ರ ಕರ್ಪ್ಯೂ ಲೆಕ್ಕಿಸದೇ ತಮ್ಮ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದುದು ಕಂಡು ಬಂತು. ಪುರಸಭೆಯ ಎಲ್ಲಾ ವಾಹನಗಳಲ್ಲಿ ಪ್ರದಾನ ಮಂತ್ರಿಗಳು ಜನತಾ ಕರ್ಪ್ಯೂ ಬಗ್ಗೆ ಮಾಡಿದ ಬಾಷಣವನ್ನು ಪ್ರಸಾರ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿತ್ತು.
ರಾಜ್ಯ ಸಂಚಾರಿ ಸಾರಿಗೆ ನಿಗಮದ ಸರ್ಕಾರೀ ಬಸ್‌ಗಳನ್ನು ಕುಂದಾಪುರದ ಡಿಪೋ ಹಾಗೂ ಬಸ್ ನಿಲ್ದಾಣದಲ್ಲಿ ಸಾಲಾಗಿ ನಿಲ್ಲಿಸುವ ಮೂಲಕ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಖಾಸಗೀ ಬಸ್‌ಗಳೂ ರಸ್ತೆಗೆ ಇಳಿಯದೇ ಇದ್ದುದರಿಂದ ಗ್ರಾಮೀಣ ಭಾಗಗಳಲ್ಲಿಯೂ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ. ಕುಂದಾಪುರದ ಎಲ್ಲಾ ಬೀದಿಗಳಲ್ಲಿನ ಅಂಗಡಿಗಳು ಮುಚ್ಚಿದ್ದು ಇಡೀ ಕುಂದಾಪುರ ಬಂದ್ ಗೆ ಸಾಕ್ಷಿಯಾಯಿತು.