JANANUDI.COM NETWORK
ಕೊರೊನಕ್ಕೆ ಭಯ ಬೀಳದ ಕುಂದಾಪುರದ ಬ್ರಹತ್ ಸಂತೆ
ಎಂದಿನಂತೆ ಸಾಂಘವಾಗಿ ನಡೆದ ಹೆಸರುವಾಸಿ ಕುಂದಾಪುರದ ಶನಿವಾರದ ಸಂತೆ
ಕುಂದಾಪುರ ಮಾ.14: ವಿಶ್ವದಲ್ಲಡೆಯ ದೇಶಗಳು, ಪ್ರಜೆಗಳು ಕೊರೊನಾ ಮಾರಕ ಸಾಂಕ್ರಮಿಕ ರೋಗಕ್ಕೆ ಭಯದಿಂದ ತಲ್ಲಣಿಸುವ ಈ ಸಮಯದಲ್ಲಿ. ಕರ್ನಾಟಕಕ್ಕೂ ಅದರ ಹಾವಳಿ ಆರಂಭವಾಗಿ ಒಬ್ಬರು ಕೂರೊನಾ ಪೀಡೆಗೆ ಬಲಿಯಾಗಿ. ರಾಜ್ಯ ಸರಕಾರ ಒಂದು ವಾರದ ತನಕ ಕರ್ನಾಟಾಕಾದ್ಯಾಂತ ಮಾಲ್, ಚಿತ್ರಮಂದಿರ, ಜಾತ್ರೆ, ನೈಟ್ ಕ್ಲಬ್, ನಾಟಕ, ಸಭೆಗಳು ನಡೆಸದೆ ಇರದೆ ಘೋಷಿತ ಬಂದ್ ಆಚರಿಸಲು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಕೊರೊನಾ ಮಾರಕ ಪೀಡೆಗೆ ಹೆದರಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಕೊರೊನಾ ರೋಗಕ್ಕಿಂತ ಇತರ ಮಾರಕ ರೋಗಗಳಿಂದ ಜನರು ದಿನ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತಿದ್ದಾರೆ ಎಂದು ತಜ್ನ್ ವೈದ್ಯರು ಹೇಳುತಿದ್ದಾರೆ. ಕೊರೊನಾ ವೈರಸ್ ನಾಶ ಮಾಡುವುದಕಿಂತ್ತಲೂ ಮುಖ್ಯವಾಗಿ ಕೊರೊನಾ ತಟ್ಟದಂತೆ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳ ಬೇಕೆಂದು ವೈದ್ಯರು ಸಲಹೆ ನೀಡುತಿದ್ದಾರೆ. ಭಯ ಪಡುವ ಅವಶ್ಯಕತೆಯಿಲ್ಲಾ ಎಂದು ತಿಳಿಸುತ್ತಾರೆ.
ಕುಂದಾಪುರದ ಸಂತೆಯ ಬಗ್ಗೆ ಹೆಳುವುದಾದರೆ ಈ ಮಾತು ನಿಜವಾಯಿತು. ಶನಿವಾರದಂದು ನಡೆಯುವ ಕುಂದಾಪುರದ ವಾರದ ಸಂತೆ. ಬಹಳ ಪ್ರಸಿದ್ದಿ ಪಟ್ಟ ಸಂತೆ. ಬ್ರಿಟಿಷರ ಕಾಲದಲ್ಲೆ ಈ ಸಂತೆ ಪ್ರಸಿದ್ದಿ ಪಟ್ಟಿತ್ತು. ಹಿಂದೆ ದೂರದೂರದ ಉರುಗಳಿಂದ ಎತ್ತಿನ ಗಾಡಿ ಮತ್ತು ದೋಣಿಗಳ ಮೂಲಕ ಸರಕುಗಳು ಸರಕುಗಳು ಬರುತ್ತಿದ್ದವು. ಅದಕ್ಕೆ ಪೂರಕವಾಗಿ ಹಿಂದೆ ಈ ಸಂತೆ ನದಿಯ ತಟದ ಹತ್ತಿರಲ್ಲಿನ ಪ್ರದೇಶವಾಗಿರುವ ಇಂದಿನ ಹೊಸ ಬಸ್ ನಿಲ್ದಾಣದ ಪ್ರದೇಶದಲ್ಲಿ ನಡೆಯುತಿತ್ತು.ಈ ಪ್ರದೇಶದ ಸುತ್ತಲೂ ವ್ಯಾಪರ ಮಳಿಗೆಗಳ ಕಟ್ಟಡ ಇತ್ತು. ಒಂದು ದ್ವಾರ ಪೆÇೀಲಿಸ್ ಸ್ಟೇಷನ್ ಇರುವ ಕಡೆ, ಇದು ದೋಣಿಗಳ ಮೂಲಕ ಬಂದ ಸರಕುಗಳಿಗಾಗಿ, ಮತ್ತೊಂದು ದ್ವಾರ ಇವತ್ತು ಎಕ್ಸ್‍ಪ್ರೆಸ್ ಬಸ್ಸುಗಳು ಹೊರಡುವಲ್ಲಿ ಇತ್ತು. ಇದು ಎತ್ತಿನಗಾಡಿಗಳ ಮೂಲಕ ಬರುವ ಸರಕುಗಳಿಗಾಗಿ. ಹೀಗೆ ಇಲ್ಲಿನ ವ್ಯಾಪರ ವಹಿವಾಟು ಹಿಂದಿನಿಂದಲೂ ಜೋರಾಗಿ ನಡೆಯುತಿತ್ತು. ಕುಂದಾಪುರದ ಸಂತೆಗೆ ಸರಕುಗಳನ್ನು ಸಾಗಿಸಲು ಇತರ ಜಿಲ್ಲೆಗಳಿಂದ ವ್ಯಾಪರಿಗಳು ವಾರದ ಮುಂಚೆಯೆ ತಯಾರಿ ನಡೆಸುತ್ತಾರೆ.
ಅದರಂತೆ ಸರಕು ಸರಾಂಜಾಮುಗಳು ಸುಕ್ರವಾರವೇ ಕುಂದಾಪುರಕ್ಕೆ ತಲುಪಿ ಹೋಲ್‍ಸೆಲ್ ವ್ಯಾಪರ ಸುಕ್ರವಾರವೇ ಆರಂಭಗೊಳ್ಳುತ್ತದೆ. ಅದರಂತೆ ನಿನ್ನೆಯ ಸುಕ್ರವಾರ ಸರಕುಗಳು ಕುಂದಾಪುಪ ಸಂತೆ ಮಾರ್ಕೆಟ್‍ಗೆ ತಲುಪಿ, ಇಂದು ಶನಿವಾರ ಕೊರೊನಾ ಪೀಡೆಯ ಯಾವ ಭಯವೂ ಇಲ್ಲದೆ ಸಂತೆ ಎಂದಿನ ಸಂತೆಗಳಂತ್ತೆ ಸಾಂಘವಾಗಿ ನಡೆಯಿತು. ಯಾರ ಮುಖಕ್ಕೂ ಮಾಸ್ಕ್ ದರಿಸಿದ್ದು ಕಾಣಲಿಲ್ಲಾ, ಯಾರ ಮುಖದಲ್ಲೂ ಭಯದ ಛಾಯೆ ಕಂಡು ಬರಲಿಲ್ಲಾ, ಭಯದ ವಾತವರಣವೇ ಇರಲಿಲ್ಲಾ. ಸಂತೆಯಲ್ಲಿ ಎಂದಿನ ಸಂತೆಯಂತ್ತೆ, ವ್ಯಾಪರಸ್ಥರು, ಖರೀದಿದಾರರು ಇದ್ದು, ಕುಂದಾಪುರದ ಸಂತೆ ಕೊರೊನಾಕ್ಕೆ ಕ್ಯಾರೆ ಅನ್ನಲಿಲ್ಲಾ.