ಕೊನೆಗೂ ಸಂಗಮ್ ಜಂಕ್ಷನ್ ಚಿಕ್ಕನಸಾಲು ಮತ್ತು ಆನಗಳ್ಳಿ ರಸ್ತೆ ತಡೆಗೋಡೆ ತೆರವು : ಆದರೂ ಅಪಾಯ ತಪ್ಪಿದ್ದಲ್ಲಾ – ಭವಿಸ್ಯದಲ್ಲಿ ಪ್ಲೈ ಒವರ್ ಬೇಕು- ಅಂಡರ್ ಪಾಸ್ ಆದಸ್ಟು ಬೇಗನೆ ಅಗತ್ಯವಿದೆ

JANANUDI NETWORK
ಕೊನೆಗೂ ಸಂಗಮ್ ಜಂಕ್ಷನ್ ಚಿಕ್ಕನಸಾಲು ಮತ್ತು ಆನಗಳ್ಳಿ ರಸ್ತೆ ತಡೆಗೋಡೆ ತೆರವು
 ಆದರೂ ಅಪಾಯ ತಪ್ಪಿದ್ದಲ್ಲಾ - ಭವಿಸ್ಯದಲ್ಲಿ ಪ್ಲೈ ಒವರ್ ಬೇಕು- ಅಂಡರ್ ಪಾಸ್ ಆದಸ್ಟು ಬೇಗನೆ ಅಗತ್ಯವಿದೆ

ಕುಂದಾಪುರ, ಜೂ.12: ರಾಷ್ಟ್ರ ಹೆದ್ದಾರಿ 66 ನವ ನಿರ್ಮಾಣದ ಭರಾಟೆಯಲ್ಲಿ ಹಲವಾರು ತೊಡಕುಗಳು ಆಗುತ್ತಲೆ ಇವೆ. ಅದರಲೊಂದು ಸಂಗಮ್ ಜಂಕ್ಷನಿನ ಚಿಕ್ಕನಸಾಲು ರಸ್ತೆ ಮತ್ತು ಆನಗಳ್ಳಿಗೆ ಹೋಗಿ ಬರುವ ರಸ್ತೆಯಲ್ಲಿ ಸಮರ್ಪಕವಾದ ಕ್ರಾಸಿಂಗ್ ಕೊಡದೆ, ವಾಹನಗಳು, ಪಾದಚಾರಿಗಳಿಗೆ ಚಿಕ್ಕನಸಾಲು ರಸ್ತೆಯಿಂದ, ಚಿಕ್ಕನಸಾಲು ರಸ್ತೆಯ ಮತ್ತು ಆನಗಳಿ ರಸ್ತೆಯ ನಿವಾಸಿಗಳಿಗೆ ಕುಂದಾಪುರಕ್ಕೆ ಬರಲು ಹೋಗಲು ಬಹಳ ತ್ರಾಸದಾಯಕವಾಗುತಿತ್ತು. ಅವಘಡಕ್ಕೆ ಕೂಡ ಅವಕಾಶವಾಗಿದ್ದರಿಂದ, ಹೆದ್ದಾರಿ ಇಲಾಖೆ ಸಂಗಮ್ ಜಂಕ್ಷನ್‍ನಲ್ಲಿ ಚಿಕ್ಕನಸಾಲು ರಸ್ತೆಗೆ ಎದುರಾಗಿ ಹೆದ್ದಾರಿಯಲ್ಲಿ ಬ್ರಹತ್ ಗಾತ್ರದ ತಡೆಗೋಡೆಗಳನ್ನು ಇಟ್ಟು, ಆನಗಳ್ಳಿ ಮತ್ತು ಹೆದ್ದಾರಿ ದಾಟಿದ ನಂತರ ಇರುವ ಚಿಕ್ಕನಸಾಲು ರಸ್ತೆಗೆ ಹೋಗಲು ಸುಮಾರು 1 ಕಿ.ಮಿ ದೂರ ಸಾಗಿ ಮತ್ತೊಂದು ಮುಗ್ಗಲಲ್ಲಿ ವಾಪಸು ಬರಬೇಕಿತ್ತು.


ಈ ಸಮಸ್ಯೆಯಿಂದ ಜನರಿಗೆ ಎಣ್ಣೆಯ ಕಾವಲಿಯಿಂದ ನೇರವಾಗಿ ಬೆಂಕಿಗೆ ಬೀಳುವಂತೆ ಆಗಿ, ಚಿಕ್ಕನಸಾಲು ಮತ್ತು ಆನಗಳ್ಳಿ ನಿವಾಸಿಗಳಿಗೆ ಸಂಗಂಮ್ ಜಂಕ್ಷನ್ ಬಹಳ ತೊಂದರೆಯುಂಟಾಗಿದ್ದು ಮಾತ್ರವಲ್ಲಾ, ಚಿಕ್ಕನಸಾಲು ರಸ್ತೆಯ ವ್ಯಾಪರಿಗಳಿಗೆ ತೀವ್ರ ಹೊಡೆತವೂ ಉಂಟಾಗಿತ್ತು.
ಈಗ ಸಹಾಯಕ ಕಮಿಷನರ್ ಡಾ|ಎಸ್.ಎಸ್.ಮಧುಕೇಶ್ವರ್ ಅವರು ಕಛೇರಿಯಲ್ಲಿ ಸಭೆ ನೆಡೆಸಿ ಗುತ್ತಿಗೆದಾರ ಕಡೆಯ ಅಧಿಕಾರಿಗಳಿಗೆ ಸಂಗಂ ಜಂಕ್ಷನ್‍ನಲ್ಲಿ ಇಟ್ಟಿರುವ ತಡೆಗೋಡೆಯನ್ನು ತೆರವುಗೊಳಿಸ ಬೇಕೆಂದು ಸ್ಪಷ್ಟ ಸೂಚನೆ ಮೇರೆಗೆ ತಡೆ ಗೋಡೆಯನ್ನು ತೆರವು ಗೊಳಿಸಿದ್ದಾರೆ.
ಹೆದ್ದಾರಿ ಇಲಾಖೆಯ ಗುತ್ತಿಗೆ ಅಧಿಕಾರಿಗಳೆ ಹೇಳಿಕೊಳ್ಳುವಂತೆ ಇಲ್ಲಿ ಅಂಡರ್ ಪಾಸ್ ಮಾಡ ಬೇಕಿತ್ತು ಆದರೆ ಯೋಜನೆಯಲ್ಲಿ ಇಲ್ಲಾ, ಈಗ ಯೋಜನೆಯನ್ನು ನವಿಕ್ರತ ಮಾಡಲು ಹೆಚ್ಚು ಸಮಯ ತಗಲುತ್ತದೆ ಎಂದು ಹೇಳುತ್ತಾರೆ. ಈ ಪರಿಸರದ ಜನ ಮೊದಲೇ ಎಚ್ಚೆತ್ತುಕೊಳ್ಳದಿದ್ದು ಆಶ್ಚರ್ಯವೇ ಸರಿ. ಮೂರು ಕೈಯ್ ಹತ್ತಿರ ಅಂಡರ್ ಪಾಸ್ ಇದ್ದದ್ದು ಫ್ಲೈ ಒವರ್ ಆಗಲು ಹೋರಾಟ ಆರಂಭಿಸಿದಾಗಲೆ, ಸಂಗಮ್ ಜಂಕ್ಷನ್ ಎನು ಬರುತ್ತೆ ಎಂದು ಎಚ್ಚೆತ್ತುಕೊಳ್ಳ ಬೇಕಿತ್ತು.
ಈಗ ಇಲ್ಲಿ ವಾಹನಗಳ ಕ್ರಾಸಿಂಗ್, ಪಾದಚಾರಿಗಳು ಈ ಜಂಕ್ಷನ್ ದಾಟುವುದೊಂದು ಜೀವಕ್ಕೆ ಅಪಾಯ ಒಡ್ಡುವ ಸ್ಥಿತಿ ನಿರ್ಮಾಣಾವಾಗಿದೆ. ಯೋಹನೆಗಳು ರೂಪಿಸುವಾಗ ಯಾರೂ ಕೂಡ ಭವಿಸ್ಯದ ದ್ರಷ್ಟಿಯಿಂದ ಚಿಂತಿಸುವುದಿಲ್ಲಾ, ಜನರೂ ಕೂಡ ಮುಂಜಾಗ್ರತೆ ವಹಿಸಿಕೊಳ್ಳುತ್ತಿಲ್ಲಾ, ಈಗ ಆನಗಳ್ಳಿಗೆ ಹೊಸ ಅಗಲವಾದ ಸೇತುವೆ ನಿರ್ಮಾಣವಾಗಿದೆ, ಒಂದು ವೇಳೆ ಆನಗಳ್ಳಿ ರಸ್ತೆ ಅಗಲಿಕರಣಗೊಂಡರೆ, ಬೈಂದೂರು ಕಡೆಯಿಂದ ಬರುವಂತಹ ಘನ, ಲಘು ವಾಹನಗಳೆಲ್ಲವೂ ಸಂಗಮ್ ಜಂಕ್ಷನ್‍ನಿಂದ ಆನಗಳ್ಳಿ ಮಾರ್ಗವಾಗಿ ಬಸ್ರೂರು, ಹಾಲಾಡಿ ಸಿದ್ದಾಪುರ, ನಗರ ಸಾಗರಕ್ಕೆ ತೆರಳುವುವು. ಆಗ ಇಲ್ಲಿನ ಸ್ಥಿತಿ ತೀವ್ರ ಅಪಾಯಕಾರಿ ಮಟ್ಟದಲ್ಲಿ ಬೆಳೆಯುವುದರಲ್ಲಿ ಸಂಷಯವೇ ಇಲ್ಲಾ. ಇಲ್ಲಿ ಅಂಡರ್ ಪಾಸ್ ಅಥವ ಸಿಗ್ನಲ್ ಲೈಟ್ ಅಥವ ದೋಹ ಖಟಾರ್‍ನಲ್ಲಿ ಇರುವಂತೆ ರೌಂಡ್ ಸರ್ಕಲ್ (ಸರ್ಕಲನಲ್ಲೆ ಸುತ್ತು ಹೊಡೆದು ನಿರ್ಗಮಿಸುವುದು. ಆದರೆ ವಾಹನ ಸಂಚಾರ ಜನ ಸಂಚಾರ ಮತ್ತು ವಾಹನಗಳ ಮತ್ತು ಪಾದಚಾರಿ ಜನರ ರಕ್ಷಣೆಗೆ ಅಂಡರ್ ಪಾಸ್ ಮಾಡುವುದೇ ಒಳಿತು. ಆದರೆ ಮುಂದಿನ ಹಲವು ವರ್ಷಗಳ ನಂತರ ಇಲ್ಲಿ ವಾಹನ ದಟ್ಟಣೆಗಳಿಂದ ಗೋವಾದಲ್ಲಿ ಇರುವಂತೆ, ಇಲ್ಲಿನ ಸಮೀಪದ ಗಂಗೊಳ್ಳಿ ನದಿಗೆ ಎರಡು ಅಂತಸ್ತಿನ ಸೇತುವೆ ಮತ್ತು ಪ್ಲೈ ಒವರ್ ಸೇತುವೆ ಒಟ್ಟಿಗೆ ನಿರ್ಮಿಸುವ ಅಗತ್ಯ ಕಂಡು ಬರುವುದರಲ್ಲಿ ಅನುಮಾನವಿಲ್ಲಾ.