ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು ಎಚ್ಚಿತಕೊಂಡು ನಿವಾಸಿಗಳ ಸಮಸ್ಯೆಗಳು ಬಗೆಹರಿಸಲು ಸಾರ್ವಜನಿಕರು ಒತ್ತಾಯ.
ಶ್ರೀನಿವಾಸಪುರ: ಪಟ್ಟಣದ ವಾಸಿಗಳೆ ಎಚ್ಚರ ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ನಿಶ್ಚಿತ. ಪಟ್ಟಣದಲ್ಲಿ ಶ್ವಾನ ಸಂತತಿ ಮಿತಿ ಮೀರಿ ಬೆಳೆದಿದ್ದು, ಬೀದಿ ನಾಯಿಗಳ ಉಪಟಳವು ಪಟ್ಟಣದವಾಸಿಗಳೆ ನಿದ್ದೆಗೆಡಿಸಿದೆ. ದಿನ ಬೆಳಗಾದರೆ ರಸ್ತೆಯಲ್ಲಿ ಠಳಾಯಿಸುವ ಶ್ವಾನಗಳ ಹಿಂಡು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಮಕ್ಕಳ ಮೇಲೆ ಎರಗುವುದು ಸಾಮಾನ್ಯವಾಗಿದೆ.
ಪಟ್ಟಣದ ಬಹುತೇಕ ವಾರ್ಡಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ ಪಟ್ಟಣದ ಅಜಾದ್ ರಸ್ತೆ ಹೃದಯ ಭಾಗದಲ್ಲಿರುವ ಈ ಮಾರುಕಟ್ಟೆಯಲ್ಲಿ ಕುರಿ ಹಾಗೂ ಕೋಳಿ ಮಾಂಸ, ಮಾರಾಟ ಮಳಿಗೆಗಳಿವೆ. ಇಲ್ಲಿ ವಾರದ ಏಳೂ ದಿನವು ವಹಿವಾಟು ನಡೆಯುತ್ತದೆ. ಸುಮಾರು 50 ವರ್ತಕರ ಕುಟುಂಬಗಳಿಗೆ ಅನ್ನದ ಮಾರ್ಗ ಕಲ್ಪಿಸಿದೆ. ಮಸೀದಿಗೆ ಸೇರಿದ ಮಳಿಗೆಗಳಲ್ಲಿ ಅಂಗಡಿ ತೆರೆದಿದ್ದಾರೆ. ಇನ್ನು ಕೆಲವರು ಖಾಸಗಿ ಕಟ್ಟಡಗಳಲ್ಲಿ ಮಳಿಗೆ ನಡೆಸುತ್ತಿದ್ದಾರೆ.
ಮಾಂಸದಂಗಡಿ ಮುಂದೆ ಶ್ವಾನಗಳ ಓಡಾಟ ಹೆಚ್ಚಾಗಿದೆ. ಜನ ಪ್ರದೇಶವಾಗಿದ್ದು ಮಾಂಸ ಮಾರುಕಟ್ಟೆ ಹಾಗೂ 2 ಮಸೀದಿಗಳು ಅಜಾದ್ ರಸ್ತೆಯಲ್ಲಿ ಇರುವುದರಿಂದ ಪ್ರತಿ ನಿತ್ಯ ಹೆಚ್ಚಿನ ಜನಸಂಖ್ಯೆ ಓಡಾಡುವ ಪ್ರದೇಶವಾಗಿದ್ದು 20 ರಿಂದ 25 ಹೆಚ್ಚು ಬೀದಿ ನಾಯಿಗಳು ಪ್ರತಿನಿತ್ಯ ಗುಂಪು ಗುಂಪುಗಳಾಗಿ ರಸ್ತೆಯಲ್ಲಿ ಓಡಾಡುತ್ತಾ ಇದ್ದು ಮಕ್ಕಳು ಟ್ಯೂಷನ್ಸ್ ಶಾಲೆಗಳಿಗೆ ಹೋಗಿ ಬರಲು ಕಷ್ಟಕರವಾಗಿದೆ ಸಾರ್ವಜನಿಕರು ದ್ವಿಚಕ್ರ ವಾಹನಗಳು ಮತ್ತು ಮಸೀದಿಗೆ ಪ್ರಾರ್ಥನೆ ತರಳುವ ವ್ಯಕ್ತಿಗಳಿಗೆ ಬೀದಿ ನಾಯಿಗಳಿಂದ ಭಯ ಬೀತರಾಗಿದ್ದಾರೆ.
ಪಟ್ಟಣದ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಶಾಲಾ ಮಕ್ಕಳು ಶಾಲೆಗೆ ಹೋಗಿ ಬರಲು ಭಯದಿಂದ ರಸ್ತೆಯಲ್ಲಿ ಹೋಡಾಡಲು ಕಷ್ಟವಾಗಿದೆ ವೃದ್ದರು ಹಾಗೂ ಸಾರ್ವಜನಿಕರಿಗೆ ದಿನನಿತ್ಯ ಸಂಚರಿಸಲು ಕಷ್ಟಕರವಾಗಿದ್ದು ಇತ್ತೀಚಿನ ದಿನಗಳಲ್ಲಿ ಪಟ್ಟಣದ ಗಫಾರ್ ಖಾನ್ ಮೊಹಲ್ಲಾ ಹಾಗೂ ಜಾಕೀರ್ ಹುಸೇನ್ ಮೊಹಲ್ಲಾ ಬೀದಿ ನಾಯಿಗಳ ಹಾವಳಿಯಿಂದ ಮೇಕೆಗಳಿಗೆ, ಮಕ್ಕಳಿಗೆ, ಕಚ್ಚಿರುವ ಘಟನೆ ನಡೆದಿದೆ ಮೊಹಲ್ಲಾ ಗೃಹವಾಸಿಗಳು ತಮ್ಮ ಮಕ್ಕಳಿಗೆ ಬೀದಿನಾಯಿಗಳ ಹಾವಳಿಯಿಂದ ಆಟವಾಡಲು ಬಿಡುತ್ತಿಲ್ಲ ಪುರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದೆ ರೀತಿಯಲ್ಲಿ ಪಟ್ಟಣದ ವಾರ್ಡಗಳಿಗೆ ಬೇಟಿ ನೀಡಿ ಸಾರ್ವಜನಿಕರ ಕಷ್ಟಗಳು ಹಾಗೂ ಕುಂದು ಕೊರತೆಗಳನ್ನು ಬಗೆಹರಿಸುವ ಜವಾಬ್ದಾರಿ ಪುರಸಭೆ ಅಧಿಕಾರಿಗಳಾಗಿದ್ದು ಇದರ ಬಗ್ಗೆ ವಾರ್ಡಗಳಿಗೆ ಬೇಟಿ ನೀಡದೆ ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ತಮ್ಮ ಕೆಲಸದಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡಗಳಲ್ಲಿ ಸಮಸ್ಯೆಗಳ ಬಗೆಹರಿಸಲು ಪುರಸಭೆ ಅಧಿಕಾರಿಗಳು ಪಟ್ಟಣದ ಪ್ರವಾಸ ಕೈಗೊಳ್ಳಬೇಕು. ಪುರಸಭೆ ವ್ಯಾಪ್ತಿಯಲ್ಲಿ ವಾಸವಿರುವ ನಾಗರೀಕರ ಕಷ್ಟಗಳನ್ನು ಹಗೂ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ವಾರ್ಡಗಳಿಗೆ ಭೇಟಿ ನೀಡಿ ನಿವಾಸಿಗಳ ಕಷ್ಟ ಹಾಗೂ ಸಮಸ್ಯೆ ಬಗೆಹರಿಸಬೇಕು ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು ಎಚ್ಚಿತಕೊಂಡು ಪಟ್ಟಣದ ನಿವಾಸಿಗಳ ಸಮಸ್ಯೆಗಳು ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.