ವರದಿ: ಶಬ್ಬೀರ್ ಅಹ್ಮದ್
ಕೆ.ಜಿ.ಎಫ್. : ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ;
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ
ಕೋಲಾರ : ಕೆ.ಜಿ.ಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ತ್ರೀಗೆ ಚಿಕಿತ್ಸೆ ನೀಡದೆ ಮಗು ಸಾವಿಗೆ ಕಾರಣರಾದ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ರೈತನ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕವು ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಕೋಲಾರ ಜಿಲ್ಲೆ ಕೆ.ಜಿಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ಈ ಆಸ್ಪತ್ರೆಯಲ್ಲಿ ಮಗುವು ಕಳ್ಳತನವಾಗಿತ್ತು. ಈಗ ಸಮೀನಾ ಎಂಬ ಗರ್ಭಿಣಿ ಸ್ತ್ರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ, ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಅತ್ತ ಗಮನ ಹರಿಸದೆ ಅಮಾನವೀಯವಾಗಿ ವರ್ತಿಸಿ, ಮಗುವಿನ ಸಾವಿಗೆ ಕಾರಣರಾಗಿದ್ದಾರೆ.
ಮಗುವಿನ ಸಾವಿಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ರೈತ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಪ್ರೆಸ್ ಗಣೇಶ್, ದೊಡ್ಡಕುರುಬರಹಳ್ಳಿ ಶಂಕರಪ್ಪ, ಕೊಲದೇವಿ ಗೋಪಾಲಕೃಷ್ಣಮುರ್ತಿ, ತೇರಹಳ್ಳಿ ಚಂದ್ರಪ್ಪ, ಮಣಿಘಟ್ಟ ಮುನಿವೆಂಕಟರೆಡ್ಡಿ, ಕೊಲದೇವಿ ಗಂಗಾಧರ್, ಹುತ್ತೂರು ಶಿವಣ್ಣ, ಜಬೀವುಲ್ಲಾ ಅಬೀದ್ ಖಾನ್ ಮುಂತಾದವರು ಉಪಸ್ಥಿತರಿದ್ದರು.
(ಕಲ್ವಮಂಜಲಿ ರಾಮುಶಿವಣ್ಣ)
ಮೊ. : 8904482075