ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಕೆ.ಜಿ.ಎಫ್ ಚೆಕ್‍ಡ್ಯಾಂಗಳನ್ನು ನಾಶ – ಚೆಕ್‍ಡ್ಯಾಂ ಇಲ್ಲವೆಂದು ಅಧಿಕಾರಿಗಳ ತಪ್ಪು ವರದಿ – ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡರ ಹೋರಾಟದ ನೇತೃತ್ವ
ಕೆ.ಜಿ.ಎಫ್ ಜ-20, ಕೆ.ಜಿ.ಎಫ್ ತಾಲ್ಲೂಕಿನ, ಕ್ಯಾಸಂಬಳ್ಳಿ ವ್ಯಾಪ್ತಿಯ ಖಾಜಿಮಿಟ್ಟಹಳ್ಳಿ, ಕಣ್ಣೂರು ಬಳಿರುವ ಚೆಕ್‍ಡ್ಯಾಂಗಳನ್ನು ನಾಶ ಮಾಡಿ ರಾಜಕಾಲುವೆ ಮತ್ತು ಸರ್ಕಾರಿ ಹುಲ್ಲುಬನ್ನಿಗಳನ್ನು ಒತ್ತುವರಿ ಮಾಡಿಕೊಂಡು ರಾಜಾರೋಷವಾಗಿ ಖಾಸಗಿ ಸೋಲಾರ್ ಪೆಪ್‍ಟೆಕ್ ಮಾಲೀಕರ ವಿರುದ್ಧ ಮತ್ತು ನಕಲಿ ದಾಖಲೆ ಸೃಷ್ಠಿಸಿಕೊಟ್ಟ ಅಧಿಕಾರಿಗಳ ವಿರುದ್ದ ಕ್ರಮಿಲ್ ಮೊಕದ್ದಮೆ ದಾಖಲಿಸಿ ಅನುಮತಿಯನ್ನು ರದ್ದು ಮಾಡಿ ಸೋಲಾರ್ ಕಂಪನಿಯಿಂದ ಪಡೆದಿರುವ ವಿದ್ಯುತ್‍ನ್ನು ಖಡಿತಗೊಳಿಸಿ ಮುಖಾಂತರ ಬೆಸ್ಕಾಂ ಇಲಾಖೆ ಮುಂದೆ ಹೋರಾಟ ಮಾಡಿ ಜೊತೆಗೆ 3 ದಿನದೊಳಗಾಗಿ ಸರ್ವೇ ಮಾಡಿ ವರದಿಯನ್ನು ನೀಡಬೇಕು ಮತ್ತು 3 ದಿನಗಳ ಕಾಲ ವಿದ್ಯುತ್ ಸಂಪರ್ಕ ಪಡೆಯಬಾರದೆಂಧು ತಹಶೀಲ್ದಾರ್‍ರವರು ಜೆ.ಇ ಮತ್ತು ಎ.ಡ್ಬ್ಯೂ,ಇ ರವರಿಗೆ ಸೂಚಿಸಿದರು
ಹೋರಾಟದ ನೇತೃತ್ವ ವಹಿಸಿ ಮಾತನಾಡಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಬಯಲು ಸೀಮೆಯ ಕೆರೆಗಳ ಅಭಿವೃದ್ಧಿ ಜೊತೆಗೆ ಅಂತರಜಲ ಅಬಿವೃದ್ಧಿ ಪಡಿಸುವ ದೃಷ್ಟಿಯಿಂದ ಸರ್ಕಾರ ಸಾವಿರಾರು ಕೋಟಿ ಅನುದಾನಗಳನ್ನು ಚೆಕ್‍ಡ್ಯಾಂ ನಿರ್ಮಾಣ ಮಾಡಲು ಬಿಡುಗಡೆ ಮಾಡಿ ಕರ್ನಾಟಕದಲ್ಲಿ ಕೋಲಾರ ಜಿಲ್ಲೆ, ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಆದರೆ ಅಧಿಕಾರಿಗಳ ಬೇಜವಾಬ್ದರಿತನ ಹಾಗೂ ಭ್ರಷ್ಟಾಚಾರತೆಗೆ ಕೆ.ಜಿ.ಎಫ್ ತಾಲ್ಲೂಕು ಕ್ಯಾಸಂಬಳ್ಳಿ ಹೋಬಳಿ ಖಾಜಿ ಮಿಟ್ಟಹಳ್ಳಿ ಹಾಗೂ ಕಣ್ಣೂರು ವ್ಯಾಪ್ತಿಯ ಸುಮಾರು 60 ಲಕ್ಷ ವೆಚ್ಚದ ಮೂರು ಚೆಕ್‍ಡ್ಯಾಂಗಳನ್ನೇ ನಾಶಮಾಡಿ ಖಾಸಗಿ ಕಾರ್ಪೋರೇಟ್ ಸೋಲಾರ್ ಕಂಪನಿ ಮಾಲೀಕರಾದ ಪುಟ್ಟಸ್ವಾಮಿಗೌಡ ರಾಜಾರೋಷವಾಗಿ ನಾಶ ಮಾಡುವ ಜೊತೆಗೆ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಸೋಲಾರ್ ಘಟಕವನ್ನು ಸ್ಥಾಪನೆ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಆ ಜಾಗದಲ್ಲಿ ಯಾವುದೇ ಚೆಕ್‍ಡ್ಯಾಂ ಅಥವಾ ರಾಜಕಾಲುವೆ ಇಲ್ಲವೆಂದು ತಪ್ಪು ವರದಿ ನೀಡಿ ಅನುಮತಿ ನೀಡಲು ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಹ ನೀಡಿರುವ ಅಧಿಕಾರಿಗಳ ವಿರುದ್ಧ, ಅಸಮದಾನ ವ್ಯಕ್ತಪಡಿಸಿದರು.
ನಿವೃತ್ತ ತಹಶೀಲ್ದಾರ್ ರವರು ಅದು ಖಾಸಗಿ ಚೆಕ್‍ಡ್ಯಾಂ, ಮತ್ತು ಸರ್ಕಾರಿ ಜಮೀನಿನನ್ನು ಸೋಲಾರ್ ಕಂಪನಿಯಲ್ಲಿ ಇಲ್ಲ ಎಂದು ಸಮರ್ಥನೆ ಮಾಡಿಕೊಂಡಾಗ ನೀವು ತಹಶೀಲ್ದಾರ್‍ರಾಗಿ ಏನು ಕೆಲಸ ಮಾಡಿದ್ದೀರಿ ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಸೋಲಾರ್ ಕಂಪನಿಯಿಂದ ಯಾವ ರೈತರಿಗೆ ಲಾಭ ಮತ್ತು ಸರ್ಕಾರದವರಿಗೆ ಎಷ್ಟು ಲಾಭ ಕಾರ್ಪೊರೇಟ್‍ರವರಿಗೆ ಎಷ್ಟು ಲಾಭ ಎಂಬುದು ಗೊತ್ತಿದೆ. ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಚೆಕ್‍ಡ್ಯಾಂ ನಿರ್ಮಾಣ ಮಾಡಿದ್ದರೆ ಅದನ್ನು ಒಡೆಯಲು ಅವಕಾಶ ವಿದೇಯೇ, ಮತ್ತು ಸರ್ಕಾರಿ ಹುಲ್ಲುಬನ್ನಿನಲ್ಲಿ ಮಂಜೂರು ಮಾಡಲು ಅವಕಾಶವಿದೇಯೇ ಅವಕಾಶ ಇಲ್ಲದಿದ್ದರು ಇದುವರೆಗೂ ಯಾಕೆ ರದ್ದು ಮಾಡಲು ಯಾಕೆ ವರದಿ ಮಾಡಿ ತಪ್ಪಿತಸ್ಥರ ವಿರುದ್ದ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಆಕ್ರೋಶ ವ್ಯಕ್ತಪಡಿಸಿದರು
ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಸರ್ಕಾರಿ ಹಾಗೂ ಜನ ಸಾಮಾನ್ಯರ ಅಬಿವೃದ್ಧಿ ಕೆಲಸಗಳಿಗೆ ಹಾಗೂ ಜಾನುವಾರುಗಳ ಮೇವು ನೀರಿಗಾಗಿ ಗೋಮಾಳ ಜಮೀನುಗಳನ್ನು ಮೀಸಲಿಡಲು ಅಧಿಕಾರಿಗಳಿಗೆ ವರ್ಷಾನುಗಟ್ಟಲೆ ಜಮೀನು ಹುಡುಕಲು ಅವಕಾಶಬೇಕು ಆದರೆ ಕಾರ್ಪೋರೇಟ್ ಕಂಪನಿ ಮಾಲೀಕರು ಸೋಲಾರ್ ನಿರ್ಮಾಣ ಮಾಡಲು ಒಂದೇ ದಿನದಲ್ಲಿ ನೂರಾರು ಎಕರೆ ಜಮೀನನ್ನು ಮಂಜೂರು ಮಾಡಿ ಸರ್ವೆ ಮಾಡಿಸಿ ಆ ಜಮೀನನ್ನು ಪಾರದರ್ಶಕವಾಗಿ ನೊಂದಣಿಯು ಸಹ ಮಾಡಿ ಕೊಟ್ಟು ಸರ್ಕಾರದ ಸಂಬಳ ಪಡೆದು ನಿಯತ್ತಾಗಿ ಶ್ರೀಮಂತರ ಕೆಲಸ ಮಾಡುತ್ತಿರುವುದಕ್ಕೆ ಏಷಿಯನ್ ಪೆಪ್‍ಟೆಕ್ ಸೋಲಾರ್ ಕಂಪನಿ ಅವ್ಯವಸ್ಥೆಯೇ ಉದಾಹರಣೆಯಾಗಿದೆ. ಇದರ ವಿರುದ್ಧ ಸುಮಾರು ಬಾರಿ ಹೋರಾಟ ಹಾಗೂ ಮನವಿ ನೀಡಿದರೂ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿರುವಾಗಿದ್ದಾರೆ.À ಈ ಅವ್ಯವಸ್ಥೆಯನ್ನು ಸರಿಪಡಿಸಿ ಸರ್ಕಾರಿ ಜಮೀನನ್ನು ಉಳಿಸುವ ಜೊತೆಗೆ ಚೆಕ್‍ಡ್ಯಾಂಗಳನ್ನು ನಾಶ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
ಹೋರಾಟದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ರಮೇಶ್‍ರವರು ನನಗೆ 3 ದಿನಗಳ ಕಾಲವಕಾಶ ಸಮಯ ಕೊಡಿ ಮತ್ತು ಚೆಕ್‍ಡ್ಯಾಂಗಳನ್ನು ನಾಶ ಮಾಡಿರುವವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಜೊತೆಗೆ ಕೆರೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಸೋಲಾರ್ ನಿರ್ಮಿಸುತ್ತಿರುವ ಏಷಿಯನ್ ಪೆಪ್‍ಟೆಕ್ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಸರ್ವೆ ಮಾಡಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುವ ಜೊತೆಗೆ ನಿರ್ಲಕ್ಷೆ ಮಾಡಿರುವ ಅಧಿಕಾರಿಗಳ ಮೇಲೂ ಸಹ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ, ಅನುಶ್ರೀ ತಾ.ಅ.ಕ್ಯಾಸಂಬಳ್ಳಿ ಪ್ರತಾಪ್, ಹ.ಸೇ.ಅಧ್ಯಕ್ಷ ವಡ್ಡಹಳ್ಳಿ ಮಂಜುನಾಥ, ಗಣೇಶ್, ಹರೀಶ್, ಮಂಗಸಂದ್ರ ತಿಮ್ಮಣ್ಣ, ಸಿಂಹಘರ್ಜನೆ ವೇದಿಕೆಯ ಪ್ರಸನ್ ಕುಮಾರ್, ವೆಂಕಟೇಶಪ್ಪ, ಅಶ್ವಥಪ್ಪ, ಸಾಗರ್, ರಂಜಿತ್, ಸುಪ್ರಿಂಚಲ, ಮಾಸ್ತಿ ವೆಂಕಟೇಶ್, ರಾಮಸ್ವಾಮಿ, ಆಂಜಿನಪ್ಪ, ಮೀಸೆ ವೆಂಕಟೇಶಪ್ಪ, ಜಗದೀಶ್, ಸುಧಾಕರ್, ಹರೀಶ್, ಯಲ್ಲಪ್ಪ, ಸತೀಶ್, ದನುಷ್, ಅನಿಲ್, ಮಂಜು, ನವೀನ್, ನಾಗರಾಜ್, ಮಂಜುನಾಥ್, ನಾರಾಯಣಪ್ಪ, ಶ್ರೀದರ್, ಬಾಲು, ಪುತ್ತೇರಿ ರಾಜು, ಮುಂತಾದ ಎಲ್ಲಾ ತಾಲ್ಲೂಕು ಪದಾದಿಕರಿಗಳಿದ್ದರು