ಕೆಸಿ ವ್ಯಾಲಿ,ಎತ್ತಿಹೋಳೆ ಯೋಜನೆಗಳ ಅಕ್ರಮಗಳ ಚೆರ್ಚೆಗೆ ಸಿದ್ದ ವೆಂಕಟಶಿವಾಡ್ಡಿ ಸವಾಲ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಕೆಸಿ ವ್ಯಾಲಿ,ಎತ್ತಿಹೋಳೆ ಯೋಜನೆಗಳ ಅಕ್ರಮಗಳ ಚೆರ್ಚೆಗೆ ಸಿದ್ದ ವೆಂಕಟಶಿವಾಡ್ಡಿ ಸವಾಲ್

 

 

 

ಶ್ರೀನಿವಾಸಪುರ:-ಕ್ಚೇತ್ರದ ಅಭಿವೃದ್ಧಿಯಲ್ಲಿ ನಮ್ಮದೂ ದೊಡ್ಡಪಾತ್ರ ಇದೆ ಇದನ್ನು ಹಾಲಿ ಶಾಸಕ ಹಾಗು ಮಾಜಿ ವಿಧಾನಸಭಾ ಅಧ್ಯಕ್ಷರಾಗಿದ್ದ ರಮೇಶಕುಮಾರ್ ಮನಗಾಣಬೇಕು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಲಿ ಶಾಸಕ ರಮೇಶಕುಮಾರ್ ವಿರುದ್ದ ಗುಡಗಿದರು. ಅವರು ಇಂದು ತಾಲೂಕಿನ ಗೌವನಪಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ನಾನು ನಾಲ್ಕು ಬಾರಿ ಶಾಸಕನಾಗಿದ್ದೆ ನಾಲ್ಕು ಬಾರಿ ಸೋಲೂಂಡಿದ್ದೇನೆ ಹಾಗೇನೆ ರಮೇಶಕುಮಾರ್ ನಾಲ್ಕು ಬಾರಿ ಶಾಸಕರಾಗಿದ್ದರು ನಾಲ್ಕು ಬಾರಿ ಅವರನ್ನು ಕ್ಷೇತ್ರದ ಜನತೆ ತಿರಸ್ಕರಿಸಿದ್ದಾರೆ ಅಭಿವೃದ್ದಿ ಮಾಡಲು ಜನತೆ ಇಬ್ಬರಿಗೂ ಸಮಾನ ಅವಕಾಶ ಮಾಡಿಕೊಟ್ಟಿದ್ದಾರೆ ಆದರೆ ಹಾಲಿ ಶಾಸಕರು ಅಭಿವೃದ್ಧಿ ಮಾಡೋ ವಿಚಾರದಲ್ಲಿ ನನ್ನಿಂದ ಅವರಿಗೆ ಅಡ್ಡಿಯಾಗಿದೆ ಎಂದು ನೆಪವೊಡ್ಡಿ ನನ್ನ ಬಗ್ಗೆ ಸಾರ್ವಜನಿಕವಾಗಿ ಇಲ್ಲಸಲ್ಲದ ವಿಷಯ ಮಾತನಾಡಿರುತ್ತಾರೆ. ನನಗೆ ಕಡಿಮೆ ಮತ ನೀಡಿರಬಹುದು ಆದರೆ ಕ್ಷೇತ್ರದ ಜನತೆ ನನ್ನನ್ನು ಮರೆತಿಲ್ಲ ಗೌವರವದಿಂದ ಕಾಣುತ್ತಿದ್ದಾರೆ ನಾನು ಅಧಿಕಾರದಲ್ಲಿದ್ದಾಗ ಬಡವರ ದಲಿತರ ಅಲ್ಪಸಂಖ್ಯಾತರ ಹಿತ ಕಾಪಾಡಿದ್ದೇನೆ ಅವರಿಗೆ ಅನ್ಯಾಯವಾಗಲು ನಾನು ಬಿಟ್ಟಿಲ್ಲ ಬಿಡಲಾರೆ ಎಂದ ಅವರು ಇಲ್ಲಿ ಯಾರು ಯಾರಮನೆಯಿಂದಲೂ ಹಣ ತಂದು ಹಾಕುತ್ತಿಲ್ಲ ನಾನು ತಂದಿದ್ದು ಸರ್ಕಾರದ ಹಣವೆ ನೀನು ತರುತ್ತಿರುವುದು ಸರ್ಕಾರದ ಹಣವೆ ನನ್ನ ವಿರುದ್ದ ಅನಗತ್ಯವಾಗಿ ಅಪ ಪ್ರಚಾರ ಮಾಡುವುದನ್ನು ಬಿಟ್ಟು ಸಾರ್ವಜನಿಕವಾಗಿ ಮಾತನಾಡುವಾಗ ಸೌಜನ್ಯತೆಯಿಂದ ಮಾತನಾಡುವಂತೆ ಅಗ್ರಹಿಸಿದರು.
ಅತಿಕ್ರಮಣ ಮಾಡಿರುವ ಸರ್ಕಾರಿ ಜಮೀನುಗಳನ್ನು ತೆರವು ಮಾಡಿಸುವ ಬಗ್ಗೆ ಸಭೆಗಳಲ್ಲಿ ಹಾಲಿ ಶಾಸಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಸರ್ಕಾರಿ ಜಮೀನು ಅತಿಕ್ರಮಣದ ಬಗ್ಗೆ ಅವರ ಬಾಯಲ್ಲಿ ಹೇಳಿಕೆ ಕೇಳಿ ಖುಷಿಯಾಯಿತು ಅವರು ಒತ್ತುವರಿ ಮಾಡಿಕೊಂಡಿರುವ ಜಮೀನು ಸಹ ಸರ್ಕಾರದ್ದೆ ಅಲ್ಲವಾ ಎಂದರು
ಕೆಸಿ ವ್ಯಾಲಿ ಹಾಗು ಎತ್ತಿನ ಹೋಳೆ ಯೋಜನೆಗಳನ್ನು ರೂಪಿಸಿದ್ದು ದಿವಂಗತರವಿ
ಕೆಸಿ ವ್ಯಾಲಿ ಹಾಗು ಎತ್ತಿನ ಹೋಳೆ ಯೋಜನೆಗಳನ್ನು ರೂಪಿಸಿದ ಕೀರ್ತಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ರವಿ ಅವರಿಗೆ ಸಲ್ಲಬೇಕು ಆತನೆ ರೂಪಿಸಿದ್ದ ನೀರಾವರಿ ಯೋಜನೆಗಳನ್ನು ತಮ್ಮದೇ ತಮ್ಮಿಂದಲೇ ಯೋಜನೆ ಜಾರಿಯಾಗಿದೆ ಎಂದು ಹಾಲಿ ಶಾಸಕರು ಪ್ರಚಾರ ಮಾಡಿಕೊಳ್ಳ್ಳುತ್ತಿದ್ದಾರೆ ಈ ನೀರಾವರಿ ಯೋಜನೆಗಳಲ್ಲಿ ನನ್ನ ಮಗನೇನು ಕಾಮಾಗಾರಿ ಗುತ್ತಿಗೆ ಪಡೆದುಕೊಂಡಿಲ್ಲ ಎಂದ ವೆಂಕಟಶಿವಾರೆಡ್ಡಿ ವ್ಯಂಗ್ಯವಾಗಿ ಹೇಳಿದರು ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿ ಯಾರು ಎಂಬುದನ್ನು ಸ್ಪಷ್ಟಪಡಿಸಲಿ ಕೆಸಿವ್ಯಾಲಿಯೋಜನೆ ಸಂಪೂರ್ಣ ತಮ್ಮ ಕುಟುಂಬದ ಯೋಜನೆ ಎಂದು ಶಾಸಕರು ಹೇಳಿಕೊಂಡಿದ್ದಾರೆ ಇದರಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಸಿದ್ದ ಎಂದು ಚಿಟಿಕೆ ಹೋಡೆದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಜಿಲ್ಲಾಪಂಚಾಯಿತಿ ಸದಸ್ಯ ತೂಪಲ್ಲಿನಾರಾಯಣಸ್ವಾಮಿ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಚ ಬಕ್ಷು,ರಾಮಮೊಹನ್ ರಜೇಂದ್ರಪ್ರಸಾದ್, ಕ್ಯಾಸೆಟ್ ಶ್ರೀನಿವಾಸ್ ಎಪಿಎಂಸಿ ನಿರ್ದೇಶಕನಕ್ಕಲಗಡ್ಡನಾರಯಣಸ್ವಾಮಿ. ಆವಲದೊಡ್ಡಿಜಯರಾಮ್ ತೂಪಲ್ಲಿಮಧು, ಪೂಲುಶಿವಾರೆಡ್ಡಿ ಕಾರ್ ಬಾಬು, ಕಲ್ಲೂರುಸುರೇಶ್ ಉಪಸ್ಥಿರಿದ್ದರು.