ಕೆಜಿಎಫ್ : ರಸ್ತೆ ಅಪಘಾತ, ಓರ್ವ ವೃದ್ದನ ಸಾವು

 

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೆಜಿಎಫ್ : ರಸ್ತೆ ಅಪಘಾತ, ಓರ್ವ ವೃದ್ದನ ಸಾವು

 

 

 

ಕೆಜಿಎಫ್., ಮೇ. 29 : ಕೆಜಿಎಫ್ ಪೊಲೀಸ್ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸಂಭವಿಸಿದ ರಸ್ತೆ ಆಕಸ್ಮಿಕದಲ್ಲಿ ಓರ್ವ ವೃದ್ದನು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೇತಮಂಗಲ ಸಮೀಪದ ವೆಂಕಟಾಪುರ ಗ್ರಾಮದ ಮುನಿಯಪ್ಪ (67) ಎಂಬುವರು ಗುಟ್ಟಹಳ್ಳಿ – ಮುಳಬಾಗಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾವುದೋ ಅಪರಿಚಿತ ವಾಹನವು ಢಿಕ್ಕಿ ಒಡೆದು ಹೋಗಿದ್ದರಿಂದಾಗಿ, ಮುನಿಯಪ್ಪ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.