ಕುಡಿಯುವ ನೀರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ನರೇಗಾದಲ್ಲಿ ಹೆಚ್ಚಿನ ಅನುದಾನ ನೀಡಲು ಗ್ರಾಮೀಣಾಭಿವೃದ್ದಿ ಸಚಿವರಾದ ಈಶ್ವರಪ್ಪರವರಿ ಮನವಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕುಡಿಯುವ ನೀರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ನರೇಗಾದಲ್ಲಿ ಹೆಚ್ಚಿನ ಅನುದಾನ ನೀಡಲು ಗ್ರಾಮೀಣಾಭಿವೃದ್ದಿ ಸಚಿವರಾದ ಈಶ್ವರಪ್ಪರವರಿ ಮನವಿ
ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ನರೇಗಾದಲ್ಲಿ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ರೈತ ಸಂಘದಿಂದ ಗ್ರಾಮೀಣಾಭಿವೃದ್ದಿ ಸಚಿವರಾದ ಈಶ್ವರಪ್ಪರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.
ಮನವಿ ನೀಡಿ ಮತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ವಿಶ್ವಾದ್ಯಂತ ಕಣ್ಣಿಗೆ ಕಾಣಿಸದ ವೈರಸ್ ದಿನೇದಿನೇ ಜನ ಜೀವನವನ್ನು ಅಲ್ಲೋಲ ಕಲ್ಲೋಲ ಎಬ್ಬಿಸುತ್ತಿದೆ. ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳನ್ನು ತೊರೆದು ನಗರಗಳತ್ತ ಜೀವನದ ಬುತ್ತಿ ತುಂಬಿಸಿಕೊಳ್ಳಲು ಕೆಲಸವನ್ನು ಹುಡುಕಿಕೊಂಡು ಹೊರಟಿದ್ದ ಕೋಟ್ಯಂತರ ಕೂಲಿ ಕಾರ್ಮಿಕರನ್ನು ಈ ವೈರಸ್ ಬೀದಿಗೆ ತಳ್ಳಿದೆ. ಮತ್ತೆ ನಗರದಲ್ಲಿ ಕೆಲಸವಿಲ್ಲದೆ ಗ್ರಾಮೀಣ ಪ್ರದೇಶಕ್ಕೆ ಮರಳಿರುವ ಜನರು ತುತ್ತು ಅನ್ನಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಇದೆ.
ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳ ರೈತರು ಬೆಳೆದಂತಹ ಬೆಳೆಗಳಿಗೂ ಬೆಲೆಯಿಲ್ಲದೆ ಪರಿತಪ್ಪಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೃಷಿ ಕೂಲಿ ಕಾರ್ಮಿಕರ ರಕ್ಷಣೆ ಮಾಡಬೇಕಾದರೆ ಉದ್ಯೋಗಖಾತ್ರಿಯಲ್ಲಿ ದುಡಿಯುವ ಕೈಗಳಿಗೆ ಕೃಷಿ ತೋಟಗಾರಿಕೆ, ರೇಷ್ಮೇ ಕೆರೆಗಳಲ್ಲಿ ನರೇಗಾದಲ್ಲಿ ಕೆಲಸ ನೀಡಲು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಬೇಸಿಗೆ ಪ್ರಾರಂಭವಾಗಿದೆ ಆದರೆ ಈ ವರ್ಷ ಸ್ವಲ್ಪ ಮಟ್ಟಿಗೆ ಕೊರೋನಾ ಹಾವಳಿಗೆ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಅದರೂ ಕುಡಿಯುವ ನೀರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳದೆ ಕೊರೆದಿರುವ ಕೊಳವೆ ಭಾವಿಗಳನ್ನು ಸಮರ್ಪಕವಾಗಿ ನಿರ್ವಹಿಸದೆ ಕುಡಿಯುವ ನೀರಿಗೆ ಟ್ಯಾಂಕರ್‍ಗಳನ್ನು ಬಳಸಿಕೊಂಡು ಇದರಲ್ಲೂ ಬ್ರಹ್ಮಾಂಡ ಭ್ರಷ್ಟಚಾರವೆಸಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಜೊತೆಗೆ ಮಹಾಮಾರಿ ನಿಯಂತ್ರಣಕ್ಕೆ ಬರುವವರೆಗೂ ಕುಡಿಯುವ ನೀರಿನ ಘಟಕಗಳಲ್ಲಿ ಉಚಿತವಾಗಿ ನೀರನ್ನು ಕೊಡಬೇಕೆಂದು ಹಾಗೂ ನರೇಗಾದಲ್ಲಿ ದುಡಿಯುವ ಕೈಗೆ ಕೆಲಸ ಕೊಡದೆ ಯಂತ್ರೋಪಕರಣಗಳಲ್ಲಿ ಕೆಲಸ ಮಾಡಿ ನಕಲಿ ಜಾಬ್ ಕಾರ್ಡ್ ಸೃಷ್ಠಿಸುವ ದಂದೆ ಕೋರರನ್ನು ಮಟ್ಟ ಹಾಕಬೇಕೆಂದು ಅಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರಾದ ಈಶ್ವರಪ್ಪರವರು ನರೇಗಾದಲ್ಲಿ ಎಷ್ಟು ಬೇಕಾದರೂ ಕೆಲಸ ಮಾಡಬಹುದು ಅದಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸರ್ಕಾರ ಸಿದ್ದವಿದೆ . ಆದರೆ ಉದ್ಯೋಗ ನೆಪದಲ್ಲಿ ಯಂತ್ರೋಪಕರಣಗಳನ್ನು ಬಳಸುವ ಹಾಗೂ ಕುಡಿಯುವ ನೀರಿನ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವವ ವಿರುದ್ದ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.ಮನವಿ ನೀಡುವಾಗ ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ವಕ್ಕಲೇರಿ ಹನುಮಯ್ಯ, ರಾಮಣ್ಣ, ಮುಂತಾದವರಿದ್ದರು.