ಕುಂದಾಪುರ  ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕ – ಶಿಕ್ಷಕ ಸಭೆ

JANANUDI NETWORK

 

ಕುಂದಾಪುರ  ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕ ಶಿಕ್ಷಕ ಸಭೆ

 

ಕುಂದಾಪುರ,ಜು.23: ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ 20 ರಂದು ಕುಂದಾಪುರ ಶಾಲಾ ಪೋಷಕ ಶಿಕ್ಷಕ ಸಭೆ ಜರುಗಿತು. ಇದರ ಅಧ್ಯಕ್ಷತೆಯನ್ನು  ಶಾಲಾ ಸಂಚಾಲಕರಾದ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೊ ವಹಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು  ಶಿಕ್ಷಕರು ಸಮಾನ ಪಾತ್ರವನ್ನು ವಹಿಸಿಕೊಳ್ಳುತ್ತಾರೆಂದು  ಪೋ|ಷಕರಿಗೆ ಅಮೂಲ್ಯ ಮಾಹಿತಿ ನೀಡಿ,  ಪೋಷಕರಿಂದಲೂ ಮಾಹಿತಿ ಕಲೆ ಹಾಕಿದರು.

     ” ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಕಾಳಜಿ ಇರಬೇಕು ಹಾಗೂ ಮಕ್ಕಳೊಂದಿಗೆ ಪೋಷಕರು ಸ್ನೇಹಿತರಂತೆ ಇರಬೇಕು. ಆಗ ಮಾತ್ರ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ”  ಎಂದು ವರಸಿದ್ದಿ ವಿನಾಯಕ ಪದವಿ ಕಾಲೇಜಿನ ಪ್ರೋಫೆಸರ್ ನಾಗರಾಜ ಹೆಮ್ಮಾಡಿ ಹೇಳಿದರು .  ಶಾಲಾ ಮುಖ್ಯ ಶಿಕ್ಷಕಿ ತೆರೇಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಶಾಲಾ ಆಯವ್ಯಯವನ್ನು ರೆಜೀನಾ ಸುನಿತಾರವರು ಮಂಡಿಸಿದರು. ಶಾಲಾ ಅಧ್ಯಾಪಕ ವೃಂದದವರು ತಮ್ಮ ತಮ್ಮ ವಿಷಯದ ಪ್ರಗತಿಯ ಬಗ್ಗೆ ತಿಳಿಸಿದರು. ಶಿಕ್ಷಕಿ ಪ್ರತಿಮಾ ಶೆಟ್ಟಿ, ಹಿಂದಿನ ವರ್ಷದ ವರದಿಯನ್ನು ವಾಚಿಸಿದರು. ಶಿಕ್ಷಕಿ ಮಮತಾರವರು ಕಾರ್ಯಕ್ರಮ ನಿರೂಪಿಸಿದರು. ರೇಣುಕಾರವರು ಸ್ವಾಗತಿಸಿದರು ಹಾಗೂ ಶಿಕ್ಷಕ ಲುವಿಸ್ ಪ್ರಶಾಂತ್ ರವರು ವಂದಿಸಿದರು.