ಕುಂದಾಪುರ ಹೋಲಿ ರೊಜರಿ ಮಾತೆಯ 451 ನೇ ವರ್ಷಾಚರಣೆ ಕೊವಿಡ್ ಕರಿ ಛಾಯೆಯಲ್ಲಿ ಸರಳತೆಯಿಂದ ಆಚರಣೆ.

JANANUDI.COM NETWORK

ಕುಂದಾಪುರ,ಒ.7: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂದ ಹಿರಿಯ ಚರ್ಚ್ ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್ ಕಳೆದ ವರ್ಷ ಒಕ್ಟೋಬರ್ 7 ರಂದು 450 ನೇ ಸಂಭ್ರಮಾಚರಣೆಯನ್ನು ಸಂಭ್ರಮದಿಂದ ಆಂಭಗೊಂಡಿದ್ದು, ಇದೇ ತಾರೀಕಿನಂದು (ಇಂದು ಒಕ್ಟೊಬರ್ 7) 450 ನೇ ಸಂಭ್ರಮಾಚರಣೆ ಅತ್ಯಂತ ಸಡಗರ ವೈಭವೊತ್ಸೋವದಿಂದ ಸಮಾರೋಪ ಆಚರಣೆ ಮಾಡಬೇಕಿತ್ತು. ಆದರೆ ಕೊರೊನಾ ಕರಿ ಛಾಯೆಯಿಂದ ಇಂದು ತಾರೀಕಿನ ಹಬ್ಬ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟು, ಸಮಾರೋಪ ಸಮಾರಂಭತ್ಸೋವವನ್ನು ಮುಂದಕ್ಕೆ ಕಾಯ್ದಿರಸಲಾಯಿತು.


ಇಂದು ನಡೆದ ಸರಳವಾಗಿ ನಡೆದ ರೊಜರಿ ಅಮ್ಮನವರ ತಾರೀಕಿನ ಹಬ್ಬಕ್ಕೆ ಕಟ್ಕರೆ ಬಾಲ ಯೇಸುವಿನ ಆಶ್ರಮದ ಸುಪೀರಿಯರ್|ಫಾ| ಒಲ್ವಿನ್ ಸಿಕ್ವೇರಾ (ಒಸಿಡಿ) ಸಂದೇಶನೀಡುತ್ತಾ ‘ನೀವು ಭಾಗ್ಯಶಾಲಿಗಳು,ನಿಮ್ಮನ್ನು ರೊಜರಿ ಮಾತೆ 450 ವರ್ಷದಿಂದ ಆಶಿರ್ವದಿಸುತ್ತಾ ಬಂದಿದ್ದಾಳೆ. ರೋಜರಿ ಮಾತೆ ಅಂದರೆ ಮೇರಿ ಮಾತೆ ಸೇವಕಿಯಂತೆ ದೇವರ ಆಜ್ಞೆಗಳನ್ನು ಪಾಲಿಸಿ ದೇವರಿಗೆ ವಿನಮ್ರಳಾದಳು, ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ, ನಿನ್ನ ಇಚ್ಚೆಯಂತ ನಡೆಯಲಿ ಎಂದು ಹಾರೈಸಿದವಳು, ಅವಳಿಗೆ ಅನೇಕ ಕಷ್ಟಗಳು ಬಂದವು,ಆದರೆ ಅದೆನೆಲ್ಲವನ್ನು ಅವಳು ತನ್ನ ಹ್ರದಯಲ್ಲಿ ಜೋಪಾನವಾಗಿಟ್ಟು ಕೊಂಡಳು,ಯಾವತ್ತು ಅವಳು ದೇವರನ್ನು ದೂರಲಿಲ್ಲಾ, ಹಾಗೇ ಇವತ್ತು ನಮಗೆಲ್ಲಾ ಕೊರೊನಾದ ಕಷ್ಟಕಾಲ ಬಂದಿದೆ ಅದನೆಲ್ಲಾ ಸಹಿಸಿಕೊಂಡು, ನಮ್ಮ ಕಷ್ಟಗಳೆದುರು ನಾವು ದೇವರಿಗೆ ಶರಣಾಗೋಣ” ಎಂದು ಅವರು ತಿಳಿಸಿದರು.


ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಸ್ವಾಗತಿಸಿ, ಹಬ್ಬದ ಶುಭಾಷಯಗಳನ್ನು ನೀಡಿ ಬಲಿಪೂಜೆಯಲ್ಲಿ ಭಾಗಿಯಾದರು. ಪ್ರಾಂಶುಪಾಲ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರುವಂ|ಫಾ ವಿಜಯ್ ಜೋಯ್ಸನ್ ಡಿಸೋಜಾ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್,ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಇನ್ನಿತರರು ಹಾಜರಿದ್ದರು.