JANANUDI.COM NETWORK

ಕುಂದಾಪುರ,ಅ.22: ಕುಂದಾಪುರ ನಗರದ ಹೊಸ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ 20/08/2020, 11:00 ಗಂಟೆಗೆ ತೆರಳಿ ನೋಡಲಾಗಿ ಇಬ್ಬರು ವ್ಯಕ್ತಿಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಇದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ನಾಗರಾಜ ಪ್ರಾಯ: 34 ವರ್ಷ ತಂದೆ:ನಾಗೇಶ ಪೂಜಾರಿ ವಾಸ:ವಿಜಯ ಕ್ಯಾಶ್ಯೂ ಎದುರು, ಸುಳ್ಸೆ ಕಟ್ ಬೇಲ್ತೂರು ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ 2)ಆಕಾಶ್ ಎಸ್ ಪೂಜಾರಿ ಪ್ರಾಯ:23 ವರ್ಷ ತಂದೆ:ಸತೀಶ ವಿ ಪೂಜಾರಿ ವಾಸ:ಕೊರವಡಿ ಕ್ರಾಸ್ ಕುಂಭಾಶಿ ಗ್ರಾಮ,ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಎಂಬುದಾಗಿ ತಿಳಿಸಿದ್ದು ಅವರ ಬಾಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು ಅವರನ್ನು ಸಿಬ್ಬಂದಿಯವರೊಂದಿಗೆ ಬಂದಿಸಿ ಕೆ.ಎಂ.ಸಿ ಮಣಿಪಾಲ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ಆಪಾದಿತರು ಗಾಂಜಾ ಸೇವನೆ ಮಾಡಿರುವುದಾಗಿ ತಜ್ಞರು ವರದಿ ನೀಡಿದ್ದು, ಆಪಾದಿತರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಕ್ಕೆ ಕೇಸು ದಾಖಲಿಸಲಾಗಿದೆಯೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

