ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

JANANUDI NETWORK

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ


ಕುಂದಾಪುರ:ಪ್ರತಿಯೊಂದು ಕಾಯಿಲೆಯನ್ನು ಯೋಗ ವಾಸಿ ಮಾಡುತ್ತದೆ.ಆದ್ದರಿಂದ ಪ್ರತಿಯೊಬ್ಬರಿಗೂ ಯಾಂತ್ರೀಕೃತ ಯುಗದಲ್ಲಿ ಯೋಗ ಅತ್ಯಗತ್ಯ.ಯೋಗಕ್ಕೆ ಶಕ್ತಿಯಿಂದೆ. ವಿದ್ಯಾರ್ಥಿಗಳು ಯೋಗದಲ್ಲಿ ತೊಡಗಿಸಿಕೊಂಡಾಗ ಏಕಾಗ್ರತೆಯ ಕಡೆಗೆ ಗಮನ ಕೊಡುವುದರ ಜತೆಗೆ ಜೀವನದಲ್ಲಿ ಶಿಸ್ತಿನ ವಿದ್ಯಾರ್ಥಿಯಾಗಿ ಬಾಳಲು ಸಾಧ್ಯ ಎಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ ಶಾಲೆಯ ಎನ್‍ಸಿಸಿ ಚೀಫ್ ಆಫೀಸರ್ ಭಾಸ್ಕರ್ ಗಾಣಿಗ ಹೇಳಿದರು.
ಅವರು ಶುಕ್ರವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ ಶಾಲೆಯ 21 ಕರ್ನಾಟಕ ಬೆಟಲಿಯನ್ ಎನ್‍ಸಿಸಿ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ 21 ಕರ್ನಾಟಕ ಬೆಟಲಿಯನ್ ಉಡುಪಿಯ ಬೆಟಲಿಯನ್ ಹವಲ್ದಾರ್ ಸಿಎಚ್‍ಎಪ್ ಸುಮಂದರ್ ಸಿಂಗ್ ಆಗಮಿಸಿದ ಶುಭ ಹಾರೈಸಿದರು. ಶಾಲಾ ಮುಖ್ಯಶಿಕ್ಷಕಿ ಅಸುಂತಾ ಲೋಬೋ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.