ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ:ಉಚಿತ ಸೈಕಲ್ ವಿತರಣೆ

JANANUDI.COM NETWORK

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ:ಉಚಿತ ಸೈಕಲ್ ವಿತರಣೆ

 


ಕುಂದಾಪುರ: ವಿದ್ಯಾರ್ಥಿಗಳು ಶಾಲೆಗೆ ಬಂದು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‍ನ್ನು ಸರಕಾರ ಪ್ರತಿ ವರ್ಷ ವಿತರಿಸುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಚೆನ್ನಾಗಿ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ ಹೇಳಿದರು.
ಅವರು ಸೋಮವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಡೆದ ಉಚಿತ ಸೈಕಲ್ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು.
ಸೈಂಟ್ ಮೇರಿಸ್ ಪ್ರೌಢಶಾಲೆಗೆ ತನ್ನದೇ ಆದ ಇತಿಹಾಸವಿದೆ. ಇಂತಹ ಸಂಸ್ಥೆಯಲ್ಲಿ ಓದುತ್ತಿರುವ ನೀವು ಧನ್ಯರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ಅತೀ.ವಂ.ಫಾ.ಸ್ಟ್ಯಾನಿ ತಾವ್ರೋ ಮಾತನಾಡಿ, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ಬರಬೇಕು ಎನ್ನುವ ಉದ್ದೇಶದಲ್ಲಿ ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆಯನ್ನು ಮಾಡುತ್ತಿದ್ದು, ವಿದ್ಯಾರ್ಥಿಗಳು ಈ ಸೈಕಲ್‍ನ್ನು ಸರಿಯಾಗಿ ಬಳಸಿಕೊಂಡು ರಸ್ತೆ ನಿಯಮವನ್ನು ಪಾಲಿಸಿಕೊಂಡು ಶಾಲೆಗೆ ಬರಬೇಕು.ಜತೆಗೆ ಶಿಸ್ತಿನ ವಿದ್ಯಾರ್ಥಿಗಳಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೋ ಸ್ವಾಗತಿಸಿದರು. ಶಿಕ್ಷಕಿಯರಾದ ಸಿಸ್ಟರ್ ಚೇತನಾ, ಪ್ರೀತಿ ಪಾಯಸ್, ಸುಶೀಲಾ ಖಾರ್ವಿ, ಸ್ಮಿತಾ ಡಿ ಸೋಜಾ ಸಹಕರಿಸಿದರು.
ಹಿರಿಯ ಶಿಕ್ಷಕ ಭಾಸ್ಕರ ಗಾಣಿಗ ವಂದಿಸಿದರು. ದೈ.ಶಿ.ಶಿ. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ//17ಸಿಬಿ1//ಸೋಮವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಉಚಿತ ಸೈಕಲ್ ವಿತರಣೆ ಸಮಾರಂಭ ನಡೆಯಿತು.